- ಹಸಿ ಅರಿಶಿನ ಕೊಂಬು: 1/2 ಇಂಚು
- ತೆಂಗಿನ ತುರಿ: 1 ಬಟ್ಟಲು
- ಬೆಲ್ಲ: 3-4 ಚಮಚ
- ಮಜ್ಜಿಗೆ ಅಥವಾ ಮೊಸರು: 1/2 ಬಟ್ಟಲು
- ಎಣ್ಣೆ: 1 ಚಮಚ
- ಸಾಸಿವೆ 1/2 ಚಮಚ
- ಒಣ ಮೆಣಸಿನಕಾಯಿ: 1/2
- ಉಪ್ಪು: ರುಚಿಗೆ ತಕ್ಕಷ್ಟು
- ಅರಿಶಿನ ಕೊಂಬನ್ನು ಚೆನ್ನಾಗಿ ತೊಳೆದು ತೆಳ್ಳಗೆ ಸ್ಲೈಸ್ ಮಾಡಿಕೊಳ್ಳಿ. ತೆಂಗಿನ ತುರಿಗೆ ಹೆಚ್ಚಿದ ಅರಿಶಿನ ಸೇರಿಸಿ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿ. ಅದಕ್ಕೆ ಮಜ್ಜಿಗೆ ಹಾಕಿಟ್ಟುಕೊಳ್ಳಬೇಕು.
- ಮೊಸರು ಹಾಕುವುದಾದರೆ ಸೌಟಿನಿಂದ ಗಂಟಿಲ್ಲದಂತೆ ಕಲಕಿ ಹಾಕಿ, ಅರ್ಧ ಬಟ್ಟಲು ನೀರು, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಒಣ ಮೆಣಸಿನಕಾಯಿ, ಸಾಸಿವೆ ಹಾಕಿ ಕೆಂಪಗೆ ಮಾಡಿಕೊಂಡು ಯಂಬುಳಿಗೆ ಹಾಕಿದರೆ, ರುಚಿಕರ ಹಾಗೂ ಆರೋಗ್ಯಕರವಾದ ಅರಿಶಿನ ತಂಬುಳಿ ಸವಿಯಲು ಸಿದ್ಧ.