ಗಸಗಸೆ ಪಾಯಸ
ರುಚಿಕರವಾದ ಗಸಗಸೆ ಪಾಯಸ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಗಸಗಸೆ – 6 ಚಮಚ
- ಅಕ್ಕಿ – 3 ಚಮಚ
- ಹಸಿ ಕೊಬ್ಬರಿ ತುರಿ – ಸ್ವಲ್ಪ
- ಏಲಕ್ಕಿ – 2
- ಲವಂಗ – 2
- ಬಾದಾಮಿ – 2
- ಗೋಡಂಬಿ – 6
- ಒಣದ್ರಾಕ್ಶಿ – 10
- ಬೆಲ್ಲದ ಪುಡಿ – 6-8 ಚಮಚ
- ಕಾಯಿಸಿದ ಹಾಲು – 1 ಲೋಟ
- ಕೇಸರಿ ದಳಗಳು – 2-3
- ತುಪ್ಪ – 3 ಚಮಚ
ಮಾಡುವ ವಿಧಾನ...
- ಮೊದಲಿಗೆ ಬಾಣಲಿಯಲ್ಲಿ ಗಸಗಸೆ ಹುರಿದು ತೆಗೆದಿಟ್ಟುಕೊಳ್ಳಬೇಕು. ಅಕ್ಕಿ ಹುರಿದುಕೊಂಡು, ನಂತರ ಅದು ಆರಿದ ಮೇಲೆ ಇವೆರಡನ್ನೂ ಸೇರಿಸಿ 2 ಗಂಟೆಗಳ ಕಾಲ ಸ್ವಲ್ಪ ಹಾಲಿನಲ್ಲಿ ನೆನೆ ಹಾಕಬೇಕು. ಕಾಯಿಸಿದ ಹಾಲಿನಲ್ಲಿ ಕೇಸರಿ ದಳ ನೆನೆ ಹಾಕಬೇಕು.
- ಹಸಿ ಕೊಬ್ಬರಿ ತುರಿ, ಅಕ್ಕಿ ಮತ್ತು ಗಸಗಸೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ಇದಕ್ಕೆ ಸ್ವಲ್ಪ ನೀರು ಸೇರಿಸಿ ತೊಳೆದು ಒಂದು ಪಾತ್ರೆಗೆ ಹಾಕಿಕೊಂಡು ಒಂದು ಕುದಿ ಕುದಿಸಬೇಕು.
- ನಂತರ ಕೇಸರಿ ದಳ, ಹಾಲು ಮತ್ತು ಬೆಲ್ಲದ ಪುಡಿ ಸೇರಿಸಿ ಚೆನ್ನಾಗಿ ಕುದಿಸಿಬೇಕು ಜೊತೆಗೆ ಏಲಕ್ಕಿ. ಲವಂಗ ಪುಡಿ ಮಾಡಿ ಹಾಕಬೇಕು.
- ಬಳಿ ತುಪ್ಪದಲ್ಲಿ ಗೋಡಂಬಿ, ಬಾದಾಮಿ ಚೂರುಗಳು ಮತ್ತು ಒಣ ದ್ರಾಕ್ಶಿ ಸ್ವಲ್ಪ ಹುರಿದು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿದರೆ, ರುಚಿಕರವಾದ ಗಸಗಸೆ ಪಾಯಸ ಸವಿಯಲು ಸಿದ್ದ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.