ಮಸಾಲೆ ಚಟ್ನಿ
ರುಚಿಕರವಾದ ಮಸಾಲೆ ಚಟ್ನಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ತೆಂಗಿನ ಕಾಯಿ ಚೂರು- ಒಂದು ಸಣ್ಣ ಬಟ್ಟಲು
- ಬೆಳ್ಳುಳ್ಳಿ- ಸ್ವಲ್ಪ
- ಈರುಳ್ಳಿ- ಸಣ್ಣ ಗಾತ್ರದ್ದು 1
- ಜೀರಿಗೆ- ಸ್ವಲ್ಪ
- ಕಾಳು ಮೆಣಸು- ಸ್ವಲ್ಪ
- ಹಸಿಮೆಣಸಿನ ಕಾಯಿ- 4-5
- ಕರಿಬೇವು-ಸ್ವಲ್ಪ
- ಕೊತ್ತಂಬರಿ ಸೊಪ್ಪು-ಸ್ವಲ್ಪ
- ಟೊಮೆಟೋ- ದೊಡ್ಡ ಗಾತ್ರದ್ದು ಒಂದು
- ಉಪ್ಪು- ರುಚಿಗೆ ತಕ್ಕಷ್ಟು
- ಹುಣಸೆಹಣ್ಣು- ಸ್ವಲ್ಪ
- ಎಣ್ಣೆ- ಸ್ವಲ್ಪ
ಮಾಡುವ ವಿಧಾನ...
- ಒಲೆಯ ಮೇಲೆ ಬಾಣಲೆಯಿಟ್ಟು 2-3 ಚಮಚ ಎಣ್ಣೆ ಹಾಕಿ ಉಪ್ಪು, ಹುಣಸೆಹಣ್ಣನ್ನು ಹೊರತುಪಡಿಸಿ ಮೇಲಿನ ಎಲ್ಲಾ ಪದಾರ್ಥಗಳನ್ನು ಕೆಂಪಗೆ ಹುರಿದುಕೊಳ್ಳಬೇಕು.
- ನಂತರ ಎಲ್ಲವನ್ನೂ ಮಿಕ್ಸಿ ಜಾರ್'ಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು.
- ಬಳಿಕ ಈರುಳ್ಳಿಯನ್ನು ಸಣ್ಣಗೆ ಉದ್ದಕ್ಕೆ ಕತ್ತರಿಸಿಕೊಂಡು ರುಬ್ಬಿದ ಚಟ್ನಿಯೊಂದಿಗೆ ಮಿಶ್ರಣ ಮಾಡಿದರೆ ರುಚಿಕರವಾದ ಮಸಾಲೆ ಚಟ್ನಿ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.