- ಕೋಳಿ ಮೊಟ್ಟೆ- 2
- ಹಸಿಮೆಣಸಿನ ಕಾಯಿ - 2
- ಈರುಳ್ಳಿ- 1
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಕಾಳುಮೆಣಸಿನ ಪುಡಿ - ಸ್ವಲ್ಪ
- ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
- ಉಪ್ಪು-ರುಚಿಗೆ ತಕ್ಕಷ್ಟು
- ಮೊದಲಿಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಹಸಿಮೆಣಸಿನ ಕಾಯಿಯನ್ನು ಸಣ್ಣಗೆ ಕತ್ತರಿಸಿಟ್ಟುಕೊಳ್ಳಬೇಕು.
- ನಂತರ ಒಂದು ಬಾಣಲೆಗೆ 2-3 ಚಮಚ ಎಣ್ಣೆಯನ್ನು ಹಾಕಿ, ಈರುಳ್ಳಿ ಹಾಗೂ ಹಸಿಮೆಣಸಿನ ಕಾಯಿಯನ್ನು ಕೆಂಪಗೆ ಹುರಿದುಕೊಳ್ಳಬೇಕು. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು, ಉಪ್ಪು, ಕಾಳು ಮೆಣಸಿನ ಪುಡಿನ್ನು ಸೇರಿಸಿ ತಣ್ಣಗಾಗಲು ಬಿಡಿ.
- ತಣ್ಣಗಾದ ಬಳಿಕ ಮೊಟ್ಟೆಯನ್ನು ಒಡೆದು ಇದಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಒಲೆಯ ಮೇಲೆ ತವಾ ಇಟ್ಟು ಒಂದು ಚಮಚ ಎಣ್ಣೆಯನ್ನು ಹಾಕಿ ಮಸಾಲೆ ಮಿಶ್ರಿತ ಮೊಟ್ಟೆಯನ್ನು ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಸುಟ್ಟರೆ ರುಚಿಕರವಾದ ಮೊಟ್ಟೆ ದೋಸೆ ಸವಿಯಲು ಸಿದ್ಧ.