ಉಂಡೆಗೆ ಬೇಕಾಗುವ ಪದಾರ್ಥಗಳು...
- ಮಟನ್ ಕೈಮಾ- 500 ಗ್ರಾಂ
- ಮಟನ್ ಮೂಳೆ – 4 ಪೀಸ್
- ಕೊಬ್ಬರಿ - ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ಕಾಳು ಮೆಣಸು- ಸ್ವಲ್ಪ
- ದನಿಯಾಪುಡಿ- 1 ಚಮಚ
- ಅಚ್ಚ ಖಾರದ ಪುಡಿ- 1 ಚಮಚ
- ಬೆಳ್ಳುಳ್ಳು- ಸ್ವಲ್ಪ
- ಚಕ್ಕೆ, ಲವಂಗ- ಸ್ವಲ್ಪ
- ಗಸಗಸೆ- ಸ್ವಲ್ಪ
- ಮೊಟ್ಟೆ- 1
- ಹುರಿಗಡಲೆ-ಸ್ವಲ್ಪ
ಸಾರಿಗೆ ಬೇಕಾಗುವ ಪದಾರ್ಥಗಳು...
- ತೆಂಗಿನ ತುರಿ- ಒಂದು ಬಟ್ಟಲು
- ಈರುಳ್ಳಿ-1
- ಬೆಳ್ಳುಳ್ಳಿ-ಸ್ವಲ್ಪ
- ಚಕ್ಕೆ, ಲವಂಗ- ಸ್ವಲ್ಪ
- ಟೊಮೆಟೋ- ಒಂದು ಸಣ್ಣದ್ದು
- ಗಸಗಸೆ- ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಎಣ್ಣೆ- ಸ್ವಲ್ಪ
- ಮೊದಲಿಗೆ ಮೊಟ್ಟೆ ಹಾಗೂ ಹುರಿಗಡಲೆ ಬಿಟ್ಟು ಮೇಲೆ ತಿಳಿಸಿದ ಉಂಡೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ನೀರು ಹಾಕದೆ ಮಿಕ್ಸಿ ಜಾರ್ ನಲ್ಲಿ ಪುಡಿ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಒಂದು ಮೊಟ್ಟೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಹುರಿಗಡಲೆಯನ್ನು ಪುಡಿ ಮಾಡಿಟ್ಟುಕೊಳ್ಳಬೇಕು.
- ನಂತರ ಒಂದು ಪಾತ್ರೆಗೆ ಕೈಮಾ, ರುಬ್ಬಿಕೊಂಡ ಮಸಾಲೆಯನ್ನು, ಹುರಿಗಡಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು.
- ನಂತರ ಕುಕ್ಕರ್'ನ್ನು ಒಲೆಯ ಮೇಲಿಟ್ಟು, ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿ, ಅರಿಶಿನವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಮೂಳೆಗಳನ್ನು ಹಾಕಿ ಸ್ವಲ್ಪ ನೀರು, ಉಪ್ಪು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
- ಬಳಿಕ ಮಿಕ್ಸಿ ಜಾರ್'ಗೆ ಈ ಮೇಲೆ ಹೇಳಿದ ಸಾರಿನ ಮಸಾಲೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ರುಬ್ಬಿಕೊಂಡ ಮಸಾಲೆಯನ್ನು ಬೆಂದ ಮೂಳೆಗಳಿಗೆ ಹಾಕಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ 10-10-15 ಕುದಿಯಲು ಬಿಡಬೇಕು. ಕುಡಿಯುತ್ತಿರುವ ಈ ಮಸಾಲೆಗೆ ಈಗಾಗಲೇ ಮಾಡಿಟ್ಟುಕೊಂಡ ಕೈಮಾ ಉಂಡೆಗಳನ್ನು ಹಾಕಿ 10-20 ನಿಮಿಷ ಬೇಯಿಸಿದರೆ ರುಚಿಕರವಾದ ಕೈಮಾ ಉಂಡೆ ಸಾರು ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics