ಸಬ್ಬಕ್ಕಿ ವಡೆ
ರುಚಿಕರವಾದ ಸಬ್ಬಕ್ಕಿ ವಡೆ ಮಾಡುವ ವಿಧಾನ.
ಬೇಕಾಗುವ ಪದಾರ್ಥಗಳು
- ಬೇಯಿಸಿದ ಆಲೂಗಡ್ಡೆ - 2-3
- ಸಬ್ಬಕ್ಕಿ- 100 ಗ್ರಾಂ
- ಹಸಿಮೆಣಸಿನಕಾಯಿ- ಸಣ್ಣಗೆ ಕತ್ತರಿಸಿದ್ದು 4
- ಜೀರಿಗೆ-ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸಣ್ಣಗೆ ಕತ್ತರಿಸಿದ್ದು ಸ್ವಲ್ಪ
- ಕಾಳು ಮೆಣಸಿನ ಪುಡಿ- ಸ್ವಲ್ಪ
- ಉಪ್ಪು-ರುಚಿಗೆ ತಕ್ಕಷ್ಟು
- ಕಡಲೆಕಾಯಿ ಬೀಜ- ಹುರಿದು ಪುಡಿ ತರಿತರಿಯಾಗಿ ಪುಡಿ ಮಾಡಿಕೊಂಡದ್ದು ಸ್ವಲ್ಪ
- ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
ಮಾಡುವ ವಿಧಾನ...
- ಒಂದು ಪಾತ್ರೆಯಲ್ಲಿ ಸಾಬಕ್ಕಿಯನ್ನು ಹಾಕಿ, ಪಿಷ್ಟ ಹೋಗುವ ತನಕ ಚೆನ್ನಾಗಿ ತೊಳೆಯೆಬೇಕು. ನಂತರ ಅದಕ್ಕೆ ನೀರನ್ನು ಹಾಕಿ 2 ಗಂಟೆಗಳ ಕಾಲ ನೆನೆಯಲು ಬಿಡಬೇಕು.
- ಬೇಯಿಸಿಕೊಂಡ ಆಲೂಗಡ್ಡೆಯನ್ನು ತುರಿದುಕೊಳ್ಳಬೇಕು.
- ಬಳಿಕ ಒಂದು ಪಾತ್ರೆಯಲ್ಲಿ ತುರಿದ ಆಲೂಗಡ್ಡೆ, ನೆನೆಸಿಟ್ಟುಕೊಂಡ ಸಬ್ಬಕ್ಕಿ. ಜೀರಿಗೆ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನ ಕಾಯಿ, ಉಪ್ಪು, ಕಡಲೆಕಾಯಿ ಬೀಜದ ಪುಡಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಬೇಕು.
- ನಂತರ ಅಂಗೈ ಮೇಲೆ ಎಣ್ಣೆಯನ್ನು ಹಚ್ಚಿಕೊಂಡು, ವಡೆಯ ಆಕಾರದಲ್ಲಿ ತಟ್ಟಿಕೊಳ್ಳಬೇಕು.ತಟ್ಟಿಕೊಂಡ ಸಬ್ಬಕ್ಕಿಯನ್ನು 5 ನಿಮಿಷ ಫ್ರಿಡ್ಜ್ನಲ್ಲಿ ಇರಿಸಿ ತಂಪಗೆ ಆಗಲು ಬಿಡಿ.
- ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ, ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ಮೇಲೆ ವಡೆಯನ್ನು ಹಾಕಿ, ಕರಿಯಿರಿ.- ಎರಡು ಭಾಗದಲ್ಲಿ ಚೆನ್ನಾಗಿ ಬೆಂದು ಚಿನ್ನದ ಬಣ್ಣ ಬಂದ ಬಳಿಕ ತೆಗೆದರೆ ರುಚಿಕರವಾದ ಸಬ್ಬಕ್ಕಿ ವಡೆ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.