ಎಗ್ ಬಿರಿಯಾನಿ - Egg Biriyani Recipe in Kannada
ರುಚಿಕರವಾದ ಎಗ್ ಬಿರಿಯಾನಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಸೋನಾ ಮಸೂರಿ ಅಕ್ಕಿ- ಅರ್ಧ ಕೆಜಿ
- ಮೊಟ್ಟೆ- ಬೇಯಿಸಿದ್ದು 5
- ಚಕ್ಕೆ, ಲವಂಗ- ಸ್ವಲ್ಪ
- ಏಲಕ್ಕಿ-5-6
- ಪಲಾವ್ ಎಲೆ, ಕಲ್ಲು ಹೂ- ಸ್ವಲ್ಪ
- ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
- ಹಸಿಮೆಣಸಿನ ಕಾಯಿ- ಉದ್ದಕ್ಕೆ ಕತ್ತರಿಸಿದ್ದು 6
- ಈರುಳ್ಳಿ- 2 (ಸಣ್ಣಗೆ ಕತ್ತರಿಸಿದ್ದು)
- ಟೊಮೆಟೋ- 2 (ಸಣ್ಣಗೆ ಕತ್ತರಿಸಿದ್ದು)
- ಕೊಬ್ಬಂಬರಿ ಸೊಪ್ಪು- ಸ್ವಲ್ಪ
- ಮೊಸರು ಅಥವಾ ತೆಂಗಿನ ಹಾಲು - ಅರ್ಧಬಟ್ಟಲು
- ದನಿಯಾ ಪುಡಿ- 1 ಚಮಚ
- ಖಾರದ ಪುಡಿ- 1 ಚಮಚ
- ಬಿರಿಯಾನಿ ಮಸಾಲೆ ಪುಡಿ- ಅರ್ಧ ಚಮಚ
- ಅರಿಶಿಣದ ಪುಡಿ- ಅರ್ಧ ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಎಣ್ಣೆ- ಸ್ವಲ್ಪ
- ತುಪ್ಪ- ಎರಡು ಚಮಚ
ಮಾಡುವ ವಿಧಾನ...
- ಮೊದಲಿಗೆ ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ತುಪ್ಪ ಹಾಗೂ ಎಣ್ಣೆಯನ್ನು ಹಾಕಿ ಕಾಯಿಸಿಕೊಳ್ಳಿ ನಂತರ ಇದಕ್ಕೆ ಚಕ್ಕೆ, ಲವಂಗ, ಪಲಾವ್ ಎಲೆ, ಏಲಕ್ಕಿ, ಕಲ್ಲು ಹೂ ಹಾಕಿ ಕೆಂಪಗೆ ಮಾಡಿಕೊಳ್ಳಿ.
- ನಂತರ ಈರುಳ್ಳಿ ಹಾಗೂ ಹಸಿಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಟೊಮೆಟೋವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ.
- ನಂತರ ಖಾರದ ಪುಡಿ, ಅರಿಶಿಣ, ದನಿಯಾ ಪುಡಿ ಹಾಗೂ ಬಿರಿಯಾನಿ ಮಸಾಲಾ ಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಮೊಸಲು ಅಥವಾ ತೆಂಗಿನ ಹಾಲು ಹಾಕಿ 5-10 ನಿಮಿಷ ಕುದಿಸಿ. ಅಳತೆಗೆ ತಕ್ಕಷ್ಟು ನೀರು ಹಾಗೂ ನೆನೆಸಿಟ್ಟುಕೊಂಡ ಅಕ್ಕಿಯನ್ನು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2-3 ಕೂಗು ಕೂಗಿಸಿಕೊಂಡು, ಬೇಯಿಸಿದ ಮೊಟ್ಟೆಗಳನ್ನು ಮಿಶ್ರಣ ಮಾಡಿದರೆ, ರುಚಿಕರವಾದ ಎಗ್ ಬಿರಿಯಾನಿ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.