- ಗೋರಿಕಾಯಿ- ಕಾಲು ಕೆಜಿ
- ಅಲೂಗಡ್ಡೆ -2
- ಮೊಟ್ಟೆ 4-5
- ಹಸಿಮೆಣಸಿನ ಕಾಯಿ- 3-4
- ಶುಂಠಿ- ಸ್ವಲ್ಪ
- ಬೆಳ್ಳುಳ್ಳಿ-ಸ್ವಲ್ಪ
- ಚಕ್ಕೆ,ಲವಂಗ ಪುಡಿ -ಸ್ವಲ್ಪ
- ಉಪ್ಪು-ರುಚಿಗೆ ತಕ್ಕಷ್ಟು
- ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 2
- ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
- ಮೊದಲಿಗೆ ಗೋರಿಕಾಯಿ, ಆಲೂಗಡ್ಡೆಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ನಂತರ ಹಣಸಿನ ಕಾಯಿ, ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಮಿಕ್ರಿ ಜಾರ್'ಗೆ ಹಾಕಿ ನೀರು ಹಾಕದಂತೆ ಪೇಸ್ಟ್ ಮಾಡಿಕೊಳ್ಳಬೇಕು.
- ಒಲೆಯ ಮೇಲೆ ಕುಕ್ಕರ್ ಇಟ್ಟು ಸ್ವಲ್ಪ ಎಣ್ಣೆ ಹಾಕಿ. ಕಾದ ಬಳಿಕ ಈರುಳ್ಳಿ ಹಾಕಿ. ಕೆಂಪಗಾದ ಬಳಿಕ ಗೋರಿಕಾಯಿ ಹಾಗೂ ಆಲೂಗಡ್ಡೆಯನ್ನು ಹಾಕಿ 2 ನಿಮಿಷ ಹುರಿದುಕೊಳ್ಳಿ.
- ನಂತರ ರುಬ್ಬಿಕೊಂಡ ಪೇಸ್ಟ್, ಉಪ್ಪು, ಚಕ್ಕೆ, ಲವಂಗ ಪುಡಿ ಎಲ್ಲವನ್ನೂ ಹಾಕಿ ಮುಚ್ಚಳವನ್ನು ಮುಚ್ಚಿ 1 ಕೂಗು ಸಣ್ಣ ಉರಿಯಲ್ಲಿ ಕೂಗಿಸಿಕೊಳ್ಳಿ.
- ನಂತರ ಮೊಟ್ಟೆಯನ್ನು ಒಡೆದು ಹಾಕಿ ಸಣ್ಣ ಉರಿಯಲ್ಲಿ ಕೈಯಾಡಿಸಿ ಕೆಂಪಗೆ ಹುರಿದುಕೊಂಡರೆ ರುಚಿಕರವಾದ ಗೋರಿಕಾಯಿ ಆಲೂ ಮೊಟ್ಟೆ ಪಲ್ಯ ಸವಿಯಲು ಸಿದ್ಧ.