ಗೋಡಂಬಿ ಚಕ್ಕುಲಿ
ರುಚಿಕರವಾದ ಗೋಡಂಬಿ ಚಕ್ಕುಲಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಹುರಿಗಡಲೆ – 1/3 ಬಟ್ಟಲು
- ಗೋಡಂಬಿ – 1/3 ಬಟ್ಟಲು
- ನೀರು – 1/3 ಬಟ್ಟಲು
- ಅಕ್ಕಿಹಿಟ್ಟು – 1 ಬಟ್ಟಲು
- ಇಂಗು – ಚಿಟಿಕೆ
- ಕಪ್ಪು ಎಳ್ಳು – 1 ಚಮಚ
- ಅಚ್ಛ ಖಾರದಪುಡಿ – 1/3 ಚಮಚ
- ತುಪ್ಪ – 1 ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಎಣ್ಣೆ – ಕರಿಯಲು
ಮಾಡುವ ವಿಧಾನ...
- ಮೊದಲು 1/3 ಬಟ್ಟಲು ಹುರಿಗಡಲೆಯನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿ ಪಾತ್ರೆಗೆ ಹಾಕಿಕೊಳ್ಳಿ.
- ನಂತರ 1/3 ಬಟ್ಟಲು ಗೋಡಂಬಿ ,1/3 ಬಟ್ಟಲು ನೀರು ಹಾಕಿ ನುಣ್ಣಗೆ ರುಬ್ಬಿ ಅದೇ ಪಾತ್ರೆಗೆ ಹಾಕಿಕೊಳ್ಳಿ.
- ಗೋಡಂಬಿ ಪೇಸ್ಟ್ ಮತ್ತು ಹುರಿಗಡಲೆ ಪುಡಿ ಎರಡನ್ನೂ ಸಮ ಪ್ರಮಾಣದಲ್ಲಿ ತೆಗೆದುಕೊಂಡು, ಇದಕ್ಕೆ 1 ಬಟ್ಟಲು ಅಕ್ಕಿ ಹಿಟ್ಟು, ಚಿಟಿಕೆ ಇಂಗು, 1 ಚಮಚ ಕಪ್ಪು ಎಳ್ಳು, 1/3 ಚಮಚ ಅಚ್ಛ ಖಾರದಪುಡಿ , 1 ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
- ನಂತರ ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತಾ ಮೆತ್ತಗೆ ಹಿಟ್ಟನ್ನು ತಯಾರಿಸಿ. ಹಿಟ್ಟು ತುಂಬಾ ಒಣಗಂತೆ ನೋಡಿಕೊಳ್ಳಿ. ಹಿಟ್ಟು ಒಣಗಿದ್ದೇ ಆದರೆ, ಎಣ್ಣೆಯಲ್ಲಿ ಹಾಕಿದಾಗ ಚಕ್ಕುಲಿ ಒಡೆಯುತ್ತದೆ.
- ನಂತರ ಚಕ್ಕುಲಿ ಅಂಚಿಗೆ ಎಣ್ಣೆ ಸವರಿ ಅದರಲ್ಲಿ ಹಿಟ್ಟನ್ನು ತುಂಬಿಸಿ. ಕಾಯ್ದ ಎಣ್ಣೆಯಲ್ಲಿ ಚಕ್ಕುಲಿಯನ್ನು ಒತ್ತಿ. ಎರಡೂ ಬದಿ ಕಂದು ಬಣ್ಣ ಬರುವವರೆಗೂ ಹಾಗೂ ಗರಿಗರಿಯಾಗುವವರೆಗೂ ಕರಿಯಿರಿ ರುಚಿಕರವಾದ ಗೋಡಂಬಿ ಚಕ್ಕುಲಿ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.