- ಅಕ್ಕಿ- 1 ಬಟ್ಟಲು
- ಮಶ್ರೂಮ್ - 150 ಗ್ರಾಂ
- ಬಟಾಣಿ - 1 ಬಟ್ಟಲು
- ಪುದೀನಾ ಸೊಪ್ಪು- ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಈರುಳ್ಳಿ- 1
- ಟೊಮೆಟೋ -2
- ಅಡುಗೆ ಎಣ್ಣೆ- ಸ್ವಲ್ಪ
- ತುಪ್ಪ- ಸ್ವಲ್ಪ
- ನಿಂಬೆ ಹಣ್ಣು- ಅರ್ಧ
- ಮೊಸರು- 1 ಬಟ್ಟಲು
- ಹಸಿ ಮೆಣಸಿನಕಾಯಿ- 2-3
- ಚಕ್ಕೆ, ಲವಂಗ, ಏಲಕ್ಕಿ- ಸ್ವಲ್ಪ
- ಕಸೂರಿ ಮೇಥಿ- ಸ್ವಲ್ಪ
- ಖಾರದ ಪುಡಿ- 1 ಚಮಚ
- ಗರಂ ಮಸಾಲೆ- ಕಾಲು ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ - ಸ್ವಲ್ಪ
- ದನಿಯಾ ಪುಡಿ- ಅರ್ಧ ಚಮಚ
- ಮೊದಲು ಒಲೆಯ ಮೇಲೆ ಒಂದು ಕುಕ್ಕರ್ ಇಟ್ಟು ಅಡುಗೆ ಎಣ್ಣೆ ಹಾಕಿ. ಅದು ಕಾದ ಮೇಲೆ ಸ್ವಲ್ಪ ಎಣ್ಣೆ, ಸ್ವಲ್ಪ ತುಪ್ಪ, ಚಕ್ಕೆ, ಲವಂಗ, ಏಲಕ್ಕಿ, ಕಸೂರಿ ಮೇಥಿ, ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ.
- ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪುದೀನಾ ಸೊಪ್ಪು, ಟೊಮೆಟೋ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಗರಂ ಮಸಾಲೆ, ದನಿಯಾ ಪುಡಿ, ಮಶ್ರೂಮ್, ಬಟಾಣಿ ಹಾಕಿ ಫ್ರೈ ಮಾಡಿ.
- ನಂತರ ಉಪ್ಪು, ಮೊಸರು, ನೆನೆಸಿದ ಅಕ್ಕಿ ಅಳತೆ ನೀರು, ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ,
- ಕುಕ್ಕರ್ ಮುಚ್ಚಳ ಮುಚ್ಚಿ 1 ವಿಜಿಲ್ ಬರಬೇಕು. ಈಗ ರುಚಿಕರವಾದ ಮಶ್ರೂಮ್ ಬಿರಿಯಾನಿ ಸವಿಯಲು ಸಿದ್ಧ.