ಬೇಕಾಗುವ ಪದಾರ್ಥಗಳು....ಎಲೆಕೋಸು (ಕ್ಯಾಬೇಜ್) – 1ಎಣ್ಣೆ – 2 ಚಮಚಉಪ್ಪು – ರುಚಿಗೆ ತಕ್ಕಷ್ಟುಕಾಳು ಮೆಣಸಿನ ಪುಡಿ – ಅರ್ಧ ಚಮಚಬೆಳ್ಳುಳ್ಳಿ ಪುಡಿ – ಕಾಲು ಚಮಚನಿಂಬೆ ರಸ – 2 ಚಮಚಕೊತ್ತಂಬರಿ ಸೊಪ್ಪು – ಸ್ವಲ್ಪ.ಮಾಡುವ ವಿಧಾನ....ಮೊದಲಿಗೆ ಓವನ್ ಅನ್ನು 425 ಡಿಗ್ರಿ ಎಫ್‌ಗೆ ಕಾಯಿಸಿಟ್ಟುಕೊಳ್ಳಿ. ಕ್ಯಾಬೇಜ್ ಚೆನ್ನಾಗಿ ಸ್ವಚ್ಛಗೊಳಿಸಿ, 8 ಭಾಗಗಳಾಗಿ ಕತ್ತರಿಸಿಕೊಳ್ಳಿ.ಪ್ಯಾನ್ ತೆಗೆದುಕೊಂಡು, ಅದಕ್ಕೆ ಸ್ವಲ್ಪ ಎಣ್ಣೆಯನ್ನು ಗ್ರೀಸ್ ಮಾಡಿ. ಕ್ಯಾಬೇಜ್ ತುಂಡುಗಳನ್ನು ಪ್ಯಾನ್ ಮೇಲೆ ಜೋಡಿಸಿ, ಅದಕ್ಕೆ 2 ಟೀಸ್ಪೂನ್ ಎಣ್ಣೆಯನ್ನು ಹಚ್ಚಿ.ನಂತರ ಉಪ್ಪು, ಕಾಳು ಪುಡಿ ಹಾಗೂ ಬೆಳ್ಳುಳ್ಳಿ ಪುಡಿಯನ್ನು ಅದರ ಮೇಲೆ ಹಾಕಿ.ಈಗ ಪ್ಯಾನ್ ಅನ್ನು ಓವನ್‌ನಲ್ಲಿ ಇಟ್ಟು 20 ನಿಮಿಷ ಕಾಯಿಸಿಕೊಳ್ಳಿ.ಕ್ಯಾಬೇಜ್ ಮೃದು ಹಾಗೂ ಸ್ವಲ್ಪ ಕಂದು ಬಣ್ಣ ಬಂದ ಬಳಿಕ ಅದನ್ನು ಓವನ್‌ನಿಂದ ತೆಗೆಯಿರಿ.ಈಗ ಅದರ ಮೇಲೆ ನಿಂಬೆ ರಸವನ್ನು ಚಿಮುಕಿಸಿ, ಹಾಗೂ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಕ್ಯಾಬೇಜ್ ರೋಸ್ಟ್ ಸವಿಯಲು ಸಿದ್ಧ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics