ಕ್ಯಾಪ್ಸಿಕಂ ಚಿಕನ್ ಫ್ರೈ
ರುಚಿಕರವಾದ ಕ್ಯಾಪ್ಸಿಕಂ ಚಿಕನ್ ಫ್ರೈ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಚಿಕನ್ -ಅರ್ಧ ಕೆಜಿ
- ಕ್ಯಾಪ್ಸಿಕಂ -2
- ಈರುಳ್ಳಿ -2
- ಟೊಮೆಟೊ -2
- ಶುಂಠಿ - ಬೆಳ್ಳುಳ್ಳಿ ಪೇಸ್ಟ್- 1 ಚಮಚ
- ಅರಿಶಿನ ಪುಡಿ - ಸ್ವಲ್ಪ
- ಖಾರದಪುಡಿ– ಒಂದು ಚಮಚ
- ಕಾಳು ಮೆಣಸಿನಪುಡಿ – ಒಂದು ಚಮಚ
- ಗರಂ ಮಸಾಲ – ಒಂದು ಚಮಚ
- ನಿಂಬೆ ಹಣ್ಣಿನ ರಸ -ಒಂದು ಚಮಚ
- ಪುದೀನ -ಒಂದು ಬಟ್ಟಲು
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
ಮಾಡು ವಿಧಾನ...
- ಒಂದು ಪಾತ್ರೆಗೆ ಚಿಕನ್ ಹಾಕಿಕೊಂಡು ನೀರು, ಅರಿಸಿನ ಪುಡಿ, ಸ್ವಲ್ಪ ಉಪ್ಪನ್ನು ಬೆರೆಸಿ ಮುಕ್ಕಾಲು ಭಾಗ ಬೇಯಿಸಿಕೊಳ್ಳಿ.
- ಪಕ್ಕದಲ್ಲಿ ಮತ್ತೊಂದು ಪಾತ್ರೆಗೆ ಐದು ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, ಟೊಮೊಟೊ, ಶುಂಠಿ– ಬೆಳ್ಳುಳ್ಳಿ ಪೇಸ್ಟ್ ಹಾಗೂ ಸ್ವಲ್ಪ ಉಪ್ಪು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
- ಇದಕ್ಕೆ ಬೇಯಿಸಿ ಇಟ್ಟುಕೊಂಡಿದ್ದ ಚಿಕನ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಜತೆಗೆ ಕಾಳು ಮೆಣಸಿನ ಪುಡಿ, ಗರಂ ಮಸಾಲ ಹೆಚ್ಚಿದ, ಸಣ್ಣಗೆ ಹೆಚ್ಚಿದ ಪುದೀನ, ನಿಂಬೆ ಹಣ್ಣಿನ ರಸವನ್ನು ಹಾಕಿ ಬೆರೆಸಿಕೊಡಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಚೆನ್ನಾಗಿ ಮಿಶ್ರಣ ಮಾಡಿ, 5-8 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿಕೊಂಡರೆ, ರುಚಿಕರವಾದ ಕ್ಯಾಪ್ಸಿಕಂ ಚಿಕನ್ ಫ್ರೈ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.