- ಮಟನ್ ಕೈಮಾ- 200 ಗ್ರಾಂ
- ರವೆ- 1 ಬಟ್ಟಲು
- ಎಣ್ಣೆ- 3 ಚಮಚ
- ಈರುಳ್ಳಿ- ಸಣ್ಣಗೆ ಹಚ್ಚಿದ್ದು ಅರ್ಧ ಬಟ್ಟಲು
- ಹಸಿಮೆಣಸಿನ ಕಾಯಿ- 2
- ಶುಂಠಿ,ಬೆಳ್ಳುಳ್ಳಿ ಪೇಸ್ಟ್- 1 ಚಮಚ
- ಬಟಾಣಿ- ಅರ್ಧ ಬಟ್ಟಲು
- ಕರಿಬೇವು- ಸ್ವಲ್ಪ
- ಅಚ್ಚ ಖಾರದ ಪುಡಿ - 1 ಚಮಚ
- ದನಿಯಾ ಪುಡಿ- ಅರ್ಧ ಚಮಚ
- ಚಕ್ಕೆ-ಲವಂಗ ಪುಡಿ- ಕಾಲು ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಟೊಮೆಟೋ - 1 ಸಣ್ಣಗೆ ಹೆಚ್ಚಿದ್ದು
- ಬಿಸಿ ನೀರು- ಮೂರು ಬಟ್ಟಲು
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಮೊದಲಿಗೆ ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಕಾದ ನಂತರ ರವೆಯನ್ನು ಕೆಂಪೆಗೆ ಹುರಿದು ಪಕ್ಕೆಕ್ಕೆ ಇಟ್ಟುಕೊಳ್ಳಿ.
- ಮತ್ತೊಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಕಾದ ನಂತರ ಈರುಳ್ಳಿ ಹಾಕಿ, ಕೆಂಪಗಾದ ಬಳಿಕ ಹಸಿಮೆಣಸಿನ ಕಾಯಿ, ಕರಿಬೇವು ಹಾಕಿ. ಇದೀಗ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಬಟಾಣಿ ಹಾಗೂ ಟೊಮೆಟೋ ಹಾಕಿ ಹುರಿದುಕೊಳ್ಳಿ.
- ನಂತರ ಬಟನ್ ಕೈಮಾ, ಅರಿಶಿಣದ ಪುಡಿ ಹಾಕಿ 5 ನಿಮಿಷ ಬೇಯಲು ಬಿಡಿ. ಬಳಿಕ ಅಚ್ಚ ಖಾರದ ಪುಡಿ, ದನಿಯಾ ಪುಡಿ, ಚಕ್ಕೆ ಲವಂಗ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸಣ್ಣ ಉರಿಯಲ್ಲಿ 3 ನಿಮಿಷ ಬೇಯಲು ಬಿಡಿ. ಇದೀಗ ಬಿಸಿನೀರು ಹಾಕಿ 10 ನಿಮಿಷ ಚೆನ್ನಾಗಿ ಕುದಿಯಲು ಬಿಡಿ, ಬಳಿಕ ಗಂಟುಗಳಾಗದಂತೆ ಸ್ವಲ್ಪ ಸ್ವಲ್ಪವೇ ರವೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಸಣ್ಣ ಉರಿಯಲ್ಲಿ 3 ನಿಮಿಷ ಬಿಡಿ, ಇದೀಗ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಕೈಮಾ ಉಪ್ಪಿಟ್ಟು ಸವಿಯಲು ಸಿದ್ಧ.