ಬೇಕಾಗುವ ಪದಾರ್ಥಗಳು...
ಬೋನ್ಲೆಸ್ ಚಿಕನ್- ಕೀಮಾ ರೀತಿ ಮಾಡಿದ್ದು 500 ಗ್ರಾಂ
ಈರುಳ್ಳಿ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
ಟೊಮೇಟೊ – 1
ಅರಿಶಿಣದ ಪುಡಿ- ಅರ್ಧ ಚಮಚ
ಖಾರದ ಪುಡಿ- ಅರ್ಧ ಚಮಚ
ದನಿಯಾ ಪುಡಿ- ಅರ್ಧ ಚಮಚ
ಮೆಣಸಿನ ಪುಡಿ – 1 ಟೀ ಚಮಚ
ಗರಂ ಮಸಾಲಾ – ½ ಟೀ ಚಮಚ
ಉಪ್ಪು-ರುಚಿಗೆ ತಕ್ಕಷ್ಟು
ಎಣ್ಣೆ – 3 ಟೇಬಲ್ ಚಮಚ
ಮೊಟ್ಟೆ- 2
ಮಾಡುವ ವಿಧಾನ...
ಬಾಣಲೆಯಲ್ಲಿ ಎಣ್ಣೆ ಅಥವಾ ಬೆಣ್ಣೆ ಬಿಸಿ ಮಾಡಿ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ನಂತರ ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, 2 ನಿಮಿಷ ಕೈಯಾಡಿಸಿ.
ನಂತರ ಕತ್ತರಿಸಿದ ಟೊಮೆಟೋ ಹಾಕಿ ಹುರಿಯಿರಿ.
ನಂತರ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲ ಮತ್ತು ಉಪ್ಪು ಸೇರಿಸಿ ಟೊಮೆಟೊ ಮೃದುವಾಗುವವರೆಗೆ ಬೇಯಿಸಿ.
ಇದೀಗ ಚಿಕನ್ ಸೇರಿಸಿ, ಮಸಾಲೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಚಿಕನ್ ಬೇಯುವವರೆಗೆ (ಸುಮಾರು 10-15 ನಿಮಿಷ) ಮುಚ್ಚಿಟ್ಟು ಬೇಯಿಸಿ. ಬಳಿಕ ಮೊಟ್ಟೆಯನ್ನು ಒಡೆದು ಹಾಕಿ ಚೆನ್ನಾಗಿ ಕೈಯಾಡಿಸಿ.
ಇದೀಗ ಇದೀಗ ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ನಿಂಬೆ ರಸ ಸೇರಿಸಿದರೆ ರುಚಿಕವಾದ ಚಿಕನ್ ಬುರ್ಜಿ ಸವಿಯಲು ಸಿದ್ಧ.