ಕೇವಲ 10 ನಿಮಿಷದಲ್ಲಿ ಉಚಿತವಾಗಿ ಪಡೆಯಿರಿ ಇ-ಪ್ಯಾನ್ ಕಾರ್ಡ್ Online Desk
ಗ್ಯಾಡ್ಜೆಟ್ಸ್

ಪ್ಯಾನ್ ಕಾರ್ಡ್ ಇಲ್ಲ ಅಂತ ಚಿಂತೆ ಬೇಡ: ಆಧಾರ್ ಕಾರ್ಡ್ ಒಂದಿದ್ದರೆ ಸಾಕು, ಕೇವಲ 10 ನಿಮಿಷದಲ್ಲಿ ಉಚಿತವಾಗಿ ಪಡೆಯಿರಿ e-PAN Card!

ಬ್ಯಾಂಕ್ ಅಕೌಂಟ್ ಓಪನ್ ಮಾಡಲು, ಸಾಲ ಪಡೆಯಲು ಅಥವಾ ಆದಾಯ ತೆರಿಗೆ ಕಟ್ಟಲು ಪಾನ್ ಕಾರ್ಡ್ ಕಡ್ಡಾಯ. ಆದರೆ ಪಾನ್ ಕಾರ್ಡ್ ಇಲ್ಲ ಎಂದು ಚಿಂತೆ ಬೇಡ. ಈಗ ಮನೆ ಬಿಟ್ಟು ಎಲ್ಲಿಗೂ ಹೋಗದೆ, ಕೇವಲ ಆಧಾರ್ ಕಾರ್ಡ್ ಬಳಸಿ 10 ನಿಮಿಷಗಳಲ್ಲಿ ಉಚಿತವಾಗಿ ಇ-ಪಾನ್ ಪಡೆಯಬಹುದು.

Instant Pan Card: ಬ್ಯಾಂಕ್ ಅಕೌಂಟ್ ಓಪನ್ ಮಾಡಲು, ಸಾಲ ಪಡೆಯಲು ಅಥವಾ ಆದಾಯ ತೆರಿಗೆ ಕಟ್ಟಲು ಪಾನ್ ಕಾರ್ಡ್ ಕಡ್ಡಾಯ. ಆದರೆ ಪಾನ್ ಕಾರ್ಡ್ ಇಲ್ಲ ಎಂದು ಚಿಂತೆ ಬೇಡ. ಈಗ ಮನೆ ಬಿಟ್ಟು ಎಲ್ಲಿಗೂ ಹೋಗದೆ, ಕೇವಲ ಆಧಾರ್ ಕಾರ್ಡ್ ಬಳಸಿ 10 ನಿಮಿಷಗಳಲ್ಲಿ ಉಚಿತವಾಗಿ ಇ-ಪಾನ್ ಪಡೆಯಬಹುದು. ಅದು ಹೇಗೆ? ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ಮಾಹಿತಿ...

ಬೇಕಾಗುವ ಪ್ರಮುಖ ಅರ್ಹತೆಗಳು:

  • ನಿಮ್ಮ ಬಳಿ ಆಧಾರ್ ಕಾರ್ಡ್ ಇರಬೇಕು.

  • ನಿಮ್ಮ ಆಧಾರ್ ಕಾರ್ಡ್‌ಗೆ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು (OTP ಪರಿಶೀಲನೆಗಾಗಿ).

  • ನೀವು ಈ ಹಿಂದೆ ಎಂದೂ ಪಾನ್ ಕಾರ್ಡ್ ಹೊಂದಿರಬಾರದು. ಯಾಕಂದ್ರೆ, ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದುವುದು ಕಾನೂನುಬಾಹಿರ

  • ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಪೂರ್ಣ ಜನ್ಮ ದಿನಾಂಕ ಇರಬೇಕು.

ಹಾಗಾದ್ರೆ, 10 ನಿಮಿಷದಲ್ಲಿ ಪಾನ್ ಕಾರ್ಡ್ ಪಡೆಯೋದು ಹೇಗೆ?

  • ಹಂತ 1: ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ಪೋರ್ಟಲ್ Income Tax e-Filing Website ಗೆ ಭೇಟಿ ನೀಡಿ.

  • ಹಂತ 2: ಮುಖಪುಟದ ಎಡಭಾಗದಲ್ಲಿರುವ 'Quick Links' ವಿಭಾಗದಲ್ಲಿ 'Instant e-PAN' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

  • ಹಂತ 3: ಈಗ ತೆರೆಯುವ ಹೊಸ ಪುಟದಲ್ಲಿ 'Get New e-PAN' ಎಂಬ ಬಟನ್ ಒತ್ತಿ.

  • ಹಂತ 4: ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು 'I Confirm That' ಬಾಕ್ಸ್ ಅನ್ನು ಟಿಕ್ ಮಾಡಿ 'Continue' ನೀಡಿ.

  • ಹಂತ 5: ನಿಮ್ಮ ಆಧಾರ್ ಲಿಂಕ್ಡ್ ಮೊಬೈಲ್ ಸಂಖ್ಯೆಗೆ ಒಂದು OTP ಬರುತ್ತದೆ. ಅದನ್ನು ನಮೂದಿಸಿ ವೆರಿಫೈ ಮಾಡಿ.

  • ಹಂತ 6: ನಿಮ್ಮ ಆಧಾರ್‌ನಲ್ಲಿರುವ ಹೆಸರು, ಫೋಟೋ, ಜನ್ಮ ದಿನಾಂಕ ಮತ್ತು ವಿಳಾಸದ ವಿವರಗಳು ಪರದೆಯ ಮೇಲೆ ಕಾಣಿಸುತ್ತವೆ. ಎಲ್ಲವನ್ನೂ ಪರಿಶೀಲಿಸಿ 'Accept' ನೀಡಿ ಸಬ್ಮಿಟ್ ಮಾಡಿ.

ಸಬ್ಮಿಟ್ ಮಾಡಿದ ನಂತರ ನಿಮ್ಮ ಸ್ಕ್ರೀನ್ ಮೇಲೆ ಒಂದು Acknowledgment Number ಕಾಣಿಸುತ್ತದೆ. ಇದನ್ನು ನೋಟ್ ಮಾಡಿಟ್ಟುಕೊಳ್ಳಿ.

 ಇ-ಪಾನ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?

  • ಅರ್ಜಿ ಸಲ್ಲಿಸಿದ 10 ನಿಮಿಷಗಳ ನಂತರ ಅದೇ ವೆಬ್‌ಸೈಟ್‌ಗೆ ಹೋಗಿ:

  • 'Instant e-PAN' ಪುಟದಲ್ಲಿ 'Check Status/Download PAN' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

  • ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ OTP ನೀಡಿ ಲಾಗಿನ್ ಆಗಿ.

  • ಅಲ್ಲಿ ನಿಮ್ಮ ಪಾನ್ ಕಾರ್ಡ್ ಸಿದ್ಧವಾಗಿದ್ದರೆ 'Download e-PAN' ಒತ್ತುವ ಮೂಲಕ PDF ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಗಮನಿಸಿ: ಈ ಇ-ಪಾನ್ (e-PAN) ಪಿಡಿಎಫ್ ಅನ್ನು ಓಪನ್ ಮಾಡಲು ನಿಮ್ಮ ಜನ್ಮ ದಿನಾಂಕವೇ ಪಾಸ್‌ವರ್ಡ್ ಆಗಿರುತ್ತದೆ (ಉದಾಹರಣೆಗೆ ನಿಮ್ಮ ಜನ್ಮದಿನಾಂಕ 01-05-1995 ಆಗಿದ್ದರೆ, 01051995 ಎಂದು ನಮೂದಿಸಬೇಕು). ಈ ಡಿಜಿಟಲ್ ಪಾನ್ ಕಾರ್ಡ್ ಹಾರ್ಡ್ ಕಾಪಿಯಷ್ಟೇ (ಪ್ಲಾಸ್ಟಿಕ್ ಕಾರ್ಡ್) ನೂರಕ್ಕೆ ನೂರರಷ್ಟು ಮಾನ್ಯತೆ ಹೊಂದಿದೆ.

 ಡಿಜಿಟಲ್ ಇ-ಪಾನ್ ಪಡೆದ ನಂತರ ಪ್ಲಾಸ್ಟಿಕ್ ಕಾರ್ಡ್ ಅನ್ನು ಮನೆಗೆ ತರಿಸಿಕೊಳ್ಳುವುದು ಹೇಗೆ?

  • ಹಂತ 1: NSDL (Protean) ಸಂಸ್ಥೆಯ ಅಧಿಕೃತ Reprint PAN Card Website ಗೆ ಭೇಟಿ ನೀಡಿ. (ಅಥವಾ 'Reprint PAN Card NSDL' ಎಂದು ಗೂಗಲ್‌ನಲ್ಲಿ ಹುಡುಕಬಹುದು).

  • ಹಂತ 2: ವೆಬ್‌ಪುಟದಲ್ಲಿ ಕೇಳಲಾಗುವ ನಿಮ್ಮ ಪಾನ್ ಕಾರ್ಡ್ ಸಂಖ್ಯೆ, ಆಧಾರ್ ಸಂಖ್ಯೆ, ಮತ್ತು ಜನ್ಮ ಜಂಟಿ (ತಿಂಗಳು ಮತ್ತು ವರ್ಷ) ವಿವರಗಳನ್ನು ನಮೂದಿಸಿ.

  • ಹಂತ 3: ಅಲ್ಲಿರುವ ನಿಯಮ ಮತ್ತು ಷರತ್ತುಗಳ ಬಾಕ್ಸ್ ಅನ್ನು ಟಿಕ್ ಮಾಡಿ, ಕ್ಯಾಪ್ಚಾ ಕೋಡ್ ಹಾಕಿ 'Submit' ಬಟನ್ ಕ್ಲಿಕ್ ಮಾಡಿ.

  • ಹಂತ 4: ಮುಂದಿನ ಪರದೆಯ ಮೇಲೆ ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸ ಮತ್ತು ಮೊಬೈಲ್ ಸಂಖ್ಯೆಯ ವಿವರಗಳು ಕಾಣಿಸುತ್ತವೆ. ಎಲ್ಲವೂ ಸರಿಯಾಗಿದೆಯೇ ಎಂದು ಪರಿಶೀಲಿಸಿ.

  • ಹಂತ 5: OTP ಪಡೆಯಲು 'Mobile Number' ಆಯ್ಕೆಯನ್ನು ಆಯ್ದುಕೊಂಡು, 'Generate OTP' ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ಹಾಕಿ ವೆರಿಫೈ ಮಾಡಿ.

  • ಹಂತ 6: ಕೊನೆಯದಾಗಿ ಆನ್‌ಲೈನ್ ಬ್ಯಾಂಕಿಂಗ್, ಯುಪಿಐ, ಅಥವಾ ಡೆಬಿಟ್ ಕಾರ್ಡ್ ಬಳಸಿ ₹50 ಶುಲ್ಕವನ್ನು ಪಾವತಿಸಿ.

ಶುಲ್ಕ ಪಾವತಿ ಯಶಸ್ವಿಯಾದ ನಂತರ ನಿಮಗೆ ಒಂದು ರಶೀದಿ ಸಿಗುತ್ತದೆ. ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಯಾವ ವಿಳಾಸವಿದೆಯೋ, ಅದೇ ವಿಳಾಸಕ್ಕೆ 10 ರಿಂದ 15 ದಿನಗಳ ಒಳಗಾಗಿ ಭಾರತೀಯ ಅಂಚೆ ಮೂಲಕ ಒರಿಜಿನಲ್ ಪ್ಲಾಸ್ಟಿಕ್ ಪಾನ್ ಕಾರ್ಡ್ ತಲುಪುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಭೀಕರ ಹಿಟ್‌ ಅಂಡ್ ರನ್‌; ಟೀ ಕುಡಿಯುತ್ತಾ ಬೈಕ್ ಮೇಲೆ ಕುಳಿತಿದ್ದವನಿಗೆ ಶಾಕ್ ಕೊಟ್ಟ ಕಾರು, ಗಾಳಿಯಲ್ಲಿ ಹಾರಿದ ವ್ಯಕ್ತಿ! Video