ಸಾಂದರ್ಭಿಕ ಚಿತ್ರ 
ಆರೋಗ್ಯ

ಕಾಸ್ಮೆಟಿಕ್ ಗೈನಕಾಲಜಿ ಎನ್ನುವ ಗರ್ಭಿಣಿಯರ ಸೌಂದರ್ಯ ಶಾಸ್ತ್ರ

ಇದುವರೆಗೂ ಒಂದು ಅಲಿಖಿತ ನಂಬಿಕೆ ಇತ್ತು. ಗರ್ಭಿಣಿಯಾದರೆ ದೇಹ ದಪ್ಪಗಾಗಿಬಿಡುತ್ತದೆ, ಸೌಂದರ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಮೇಕಪ್ ಮೇಲಿನ ವ್ಯಾಮೋಹ ಹೋಗುತ್ತದೆ ಇವೇ ಇತ್ಯಾದಿ. ಆದರೆ ಅದನ್ನು ಸುಳ್ಳಾಗಿಸುವ ಸುದ್ದಿ ಇಲ್ಲಿದೆ. ಗರ್ಭಿಣಿಯರ ಆರೈಕೆ ಮತ್ತು ಪ್ರಸವ ನಂತರ ಸೌಂದರ್ಯ ಹಿಂಪಡೆಯಲು ವೈದ್ಯಕೀಯ ನೆರವು ಪಡೆದುಕೊಳ್ಳಬಹುದು.

ಗರ್ಭಿಣಿಯಾದರೆ ಹೆಣ್ಣುಮಕ್ಕಳ ಬದುಕು ಮುಗಿದೇ ಹೋಯಿತು ಎನ್ನುವ ಕಾಲ ಈಗಿಲ್ಲ. ಕರೀನಾ ಕಪೂರ್ ರಿಂದ ಹಿಡಿದು ಹಲವು ಮಂದಿ ಸೆಲಬ್ರಿಟಿಗಳು ಗರ್ಭಿಣಿಯಾಗಿದ್ದಾಗ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ತಮ್ಮ ಹೊಟ್ಟೆಯನ್ನು ಪ್ರದರ್ಶಿಸಿ ಎಲ್ಲರ ಹುಬ್ಬೇರಿಸಿದ್ದರು. 

ಸೌಂದರ್ಯ ಸಾಧನಗಳು, ಫಿಟ್ ನೆಸ್, ಡಯೆಟ್ ಬಗ್ಗೆ ಹೆಣ್ಣುಮಕ್ಕಳಿಗಿರುವ ಆಸ್ಥೆಯ ಬಗ್ಗೆ ಹೆಚ್ಚೇನನ್ನೂ ಹೇಳುವಂತಿಲ್ಲ. ಅವುಗಳಿಗೆ ಇದುವರೆಗೂ ಒಂದು ಅಲಿಖಿತ ನಂಬಿಕೆ ಇತ್ತು.. ಗರ್ಭಿಣಿಯಾದರೆ ದೇಹ ದಪ್ಪಗಾಗಿಬಿಡುತ್ತದೆ, ಸೌಂದರ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಮೇಕಪ್ ಮೇಲಿನ ವ್ಯಾಮೋಹ ಹೋಗುತ್ತದೆ ಇವೇ ಇತ್ಯಾದಿ. ಆದರೆ ಅದನ್ನು ಸುಳ್ಳಾಗಿಸುವ ಸುದ್ದಿ ಇಲ್ಲಿದೆ. 

ಕಾಸ್ಮೆಟಿಕ್ ಗೈನಕಾಲಜಿ ಎನ್ನುವ ಹೊಸ ವಿಭಾಗವೇ ನಮ್ಮ ನಡುವೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಹಾಗೆ ನೋಡಿದರೆ ಕಾಸ್ಮೆಟಿಕ್ಸ್ ಮತ್ತು ಗೈನಕಾಲಜಿ ಎನ್ನುವುದು ಇದುವರೆಗೂ ವಿರುದ್ಧ ಪದಗಳೆಂಬಂತೆ ತೋರುತ್ತಿದ್ದವು. ಆದರೀಗ ಅವೆರಡನ್ನೂ ಮಿಳಿತಗೊಳಿಸಿ ಹೊಸ ವಿಭಾಗವೇ ಎದ್ದು ನಿಂತಿದೆ. ಗರ್ಭಿಣಿಯಾಗಿದ್ದಾಗ ಎದುರಾಗುವ ಸಮಸ್ಯೆಗಳು ಹಾಗೂ ಲೈಂಗಿಕ ಸಮಸ್ಯೆಗಳಿಗೆ ಈ ವಿಭಾಗ ಪರಿಹಾರ ಸೂಚಿಸುತ್ತದೆ. 

ಪೆನಿಕ್ಯುಲೆಕ್ಟಮಿ ಹಾಗೂ ಸಿಸೇರಿಯನ್

ಸಿಸೇರಿಯನ್ ಮಾಡುವ ವೇಳೆ ಕೆಲವೇ ನಿಮಿಷಗಳ ಅವಧಿಯಲ್ಲಿ ಪೆನಿಕ್ಯುಲೆಕ್ಟಮಿ ಶಸ್ತ್ರಚಿಕಿತ್ಸೆಯನ್ನೂ ಜೊತೆಯಾಗಿ ಮಾಡಿಸಿಕೊಳ್ಲಬಹುದು. ದೇಹದಲ್ಲಿನ ಹೆಚ್ಚುವರಿ ಕೊಬ್ಬಿನಂಶವನ್ನು ತೆಗೆಯಲು ಇದು ಸಹಕಾರಿ. ಅಲ್ಲದೆ ಗಾಯ ಬಹಳ ಬೇಗನೆ ವಾಸಿಯಾಗಲು ನೆರವು ನೀಡುತ್ತದೆ ಈ ಪ್ರಕ್ರಿಯೆ. ಗಾಯದ ಕಲೆ ಉಳಿಯುವುದಿಲ್ಲ ಎನ್ನುವುದು ಇದರ ಹೆಗ್ಗಳಿಕೆ.

ಲೇಸರ್ ಟ್ರೀಟ್ ಮೆಂಟ್

ಶೇ.೩೦ ಪ್ರತಿಶತ ಹೆಣ್ಣುಮಕ್ಕಳು ಪಿಸಿಒಎಸ್/ ಪಿಸಿಒಡಿ ಸಮಸ್ಯೆಯಿಂದ ಬಳಲುತ್ತಾರೆ. ಮುಖದ ಮೇಲಿನ ಕೂದಲು, ಮೊಡವೆ ಮತ್ತಿತರ ಕಲೆಗಳನ್ನು ಲೇಸರ್ ಮೂಲಕ ಗುಣಪಡಿಸಬಹುದು. 

ಮಮ್ಮಿ ಮೇಕೋವರ್

ಪ್ರೆಗ್ನೆನ್ಸಿ ನಂತರ ದೈಹಿಕ ಸೌಂದರ್ಯವನ್ನು ಮರಳಿ ಪಡೆಯಲು, ಸರ್ಜರಿ ಇಲ್ಲದೆ ಕೊಬ್ಬು ಕರಗಿಸಲು ಕ್ರೈ ಲೈಪೊಲಿಸಿಸ್ ಮತ್ತು ರೇಡಿಯೊ ಫ್ರೀಕ್ವೆನ್ಸಿ ತಂತ್ರಜ್ನಾನವನ್ನು ಬಳಸುತ್ತಾರೆ. 

ಪ್ರಸವದ ನಂತರದ ಡಯೆಟ್ ಪ್ಲ್ಯಾನ್ 

ಡೆಲಿವರಿ ನಂತರ ಆರೋಗ್ಯಕರ ಮನಸ್ಸು ಮತ್ತು ದೇಹವನ್ನು ಹೊಂದಲು ಈ ಪ್ರಕ್ರಿಯೆ ಸಹಕಾರಿ. ಆತ್ಮವಿಶ್ವಾಸವನ್ನು ಇದು ನೀಡುತ್ತದೆ.

ವಯಸ್ಸನ್ನು ತಡೆಗಟ್ಟುವ ಮಾರ್ಗ

ಆಂಟಿ ಏಜಿಂಗ್ ಔಷಧಿ ಸಹಾಯದಿಂದ vaginal dryness, pain, laxity, uterine prolapse ಹಾಗೂ ಮೂತ್ರಕೋಶ ಸೋಂಕನ್ನು ತಡೆಗಟ್ಟಬಹುದು. ಅಲ್ಲದೆ ಎಲೆಕ್ಟ್ರೊ ಮ್ಯಾಗ್ನೆಟಿಕ್ ಚೇರ್ ಎನ್ನುವ ವಿಧಾನವನ್ನು ಇಲ್ಲಿ ಬಳಸಿಕೊಳ್ಳಲಾಗುತ್ತದೆ. ಈ ಕಿತ್ಸೆಗೆ ಪ್ರತಿ ಗಂಟೆಗೆ 1,000 ರೂ. ಶುಲ್ಕವಿದೆ.

ಲೈಂಗಿಕ ಔಷಧ

ಸೆಕ್ಸ್ ವಿಷಯಕ್ಕೆ ಬಂದಾಗ ಸಮಾಜದಲ್ಲಿ ಏರುಪೇರು ಕಂಡುಬರುತ್ತದೆ ಎಂದು ಸಂಶೋಧನೆಗಳು ಹೇಳಿವೆ. ಬಹುತೇಕ ಮಹಿಳೆಯರು ಪುರುಷ ಸಂಗಾತಿಗಳಿಗೆ ಹೋಲಿಸಿದರೆ ಲೈಂಗಿಕ ಸಂತೃಪ್ತಿಯನ್ನು ಹೊಂದುವುದಿಲ್ಲ. ಪಿಆರ್ ಪಿ ಟ್ರೀಟ್ ಮೆಂಟ್, Inj.Botox for vaginismu, Electro Magnetic Chair therapy ಮಹಿಳೆಯರಿಗೆ ಲೈಂಗಿಕ ಸಂತೃಪ್ತಿ ದೊರಕಿಸಿಕೊಡುವಲ್ಲಿ ಸಹಕಾರಿ.

ಪಿ ಆರ್ ಪಿ- ಪ್ಲೇಟ್ ಲೆಟ್ ರಿಚ್ ಪ್ಲಾಸ್ಮಾ

ಪಿ ಆರ್ ಪಿ ಅನ್ನುವುದು ನಮ್ಮ ರಕ್ತದಲ್ಲೇ ಇರುವ ಅಂಶ. ಆದನ್ನು ಹೊರತೆಗೆದು ದೇಹದ ಯಾವುದೇ ಭಾಗಕ್ಕೆ ಇಂಜೆಕ್ಟ್ ಮಾಡುವುದರಿಂದ ಹಲವು ಆರೋಗ್ಯಕರ ಲಾಭವನ್ನು ಪಡೆದುಕೊಳ್ಲಬಹುದಾಗಿದೆ. ಐವಿಎಫ್ ವೈಫಲ್ಯತೆ, ಗರ್ಭಪಾತ ಮುಂತಾದ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲುದು.

ಹಾರ್ಮೋನ್ ಥೆರಪಿ

ಎಸ್ಟ್ರೋಜೆನ್ ಹಾರ್ಮೋನ್ ಸಹಾಯದಿಂದ ಉರಿ, ಮೂತ್ರಕೋಶ, ಯೋನಿಯಲ್ಲಿನ ಸೋಂಕನ್ನು ತಡೆಗಟ್ಟಬಹುದು.  

Related Article

ಪೌಷ್ಟಿಕಾಂಶದ ಕೊರತೆ, ಬಡತನದಿಂದ ರಾಜ್ಯದಲ್ಲಿ ಮಕ್ಕಳ ಅಂಧತ್ವ ಹೆಚ್ಚಳ

ಮಹಿಳೆಯರು ತಿಳಿದಿರಬೇಕಾದ 4 ಸಂತಾನ ನಿಯಂತ್ರಣ ಮಾರ್ಗಗಳು

ಕೊರೋನಾ ಎಫೆಕ್ಟ್: ದಂಪತಿಗಳಿಗೆ ವರವಾದ 'ವರ್ಕ್ ಫ್ರಂ ಹೋಮ್', ನೈಸರ್ಗಿಕ ಗರ್ಭಧಾರಣೆಯಲ್ಲಿ ಹೆಚ್ಚಳ!

ಮಕ್ಕಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳು: ಹೆಣ್ಣುಮಕ್ಕಳಿಗಿಂತ ಗಂಡು ಮಕ್ಕಳಲ್ಲೇ ಹೆಚ್ಚು

'ಬಿಪಿ' ನಿರ್ಲಕ್ಷ್ಯದಿಂದ ದೇಹದಲ್ಲಿ ರೋಗದ ಹೊರೆ ಹೆಚ್ಚಾಗಲಿದೆ: ಹೈಪರ್'ಟೆನ್ಶನ್ ಕುರಿತು ಅಧ್ಯಯನ

ಕ್ಯಾನ್ಸರ್ ರೋಗಿಗಳ ನೆಚ್ಚಿನ ಔಷಧ ಪದ್ಧತಿ ಆಯುರ್ವೇದ: ಸಮೀಕ್ಷೆಯಿಂದ ಬಹಿರಂಗ

ತುಂಬಾ ಹೊತ್ತು ಮೊಬೈಲ್ ಪರದೆ ದಿಟ್ಟಿಸುವ ಮಕ್ಕಳಲ್ಲಿ ಸಮೀಪದೃಷ್ಟಿ ದೋಷ

ಕಳೆದ 30 ವರ್ಷಗಳಲ್ಲಿ ಹೈಪರ್ ಟೆನ್ಷನ್ ಪ್ರಮಾಣ ದುಪ್ಪಟ್ಟು

ಕೊರೊನಾ ವಾಸಿಯಾದವರಲ್ಲಿ ಕೂದಲು ಉದುರುವಿಕೆ ಅಡ್ಡ ಪರಿಣಾಮ ಪತ್ತೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT