ಬೆಂಗಳೂರು: ಪ್ರೀತಿದವಳನ್ನು ಪಡೆಯುವ ಸಲುವಾಗಿ ಮಕ್ಕಳು ಎಂತಹ ವಿಕೃತಕ್ಕೆ ಕೈ ಹಾಕುತ್ತಾರೆಂಬುದಕ್ಕೆ ಘಟನೆ ಉದಾಹರಣೆಯಾಗಿದೆ. ತಾನು ಪ್ರೀತಿಸಿದ ಯುವತಿಯನ್ನು ಮದುವೆ ಮಾಡಿಕೊಳ್ಳಲು ತಮ್ಮ ಪೋಷಕರೇ ಅಡ್ಡಿಯಾಗುತ್ತಿದ್ದಾರೆಂಬ ಕಾರಣಕ್ಕೆ ಇಲ್ಲೊಬ್ಬ ವಂಶೋದ್ಧಾರಕ ಮಗ ಸುಪಾರಿ ಕೊಟ್ಟು ಪೋಷಕರನ್ನೇ ಹತ್ಯೆ ಮಾಡಿಸಿರುವ ಬೆಚ್ಚಿಬೀಳಿಸುವ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ.
ಅಶೋಕನಗರದ ನಿವಾಸಿಯಾಗಿರುವ ಗೋಪಾಲ್ ಶೆಟ್ಟಿ ಹಾಗೂ ರೂಪಾ ಶೆಟ್ಟಿ ಎಂಬುವವರನ್ನು ಮಾ. 13 ರಂದು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಕೊಲೆಗಾರರನ್ನು ಹಿಡಿಯಲು ಪೊಲೀಸರು ಸಾಕಷ್ಟು ತನಿಖೆಗಳನ್ನು ನಡೆಸಿದ್ದರು. ಇದೀಗ ಕೊಲೆ ರಹಸ್ಯ ಭೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕೊಲೆ ಮಾಡಿಸಿರುವುದು ದಂಪತಿಯ ಮುದ್ದಿನ ಮಗನೇ ಎಂಬುದು ಬೆಳಕಿ ಬಂದಿದೆ.
ದಂಪತಿಯ ಪುತ್ರ ಧೀರಜ್ (25) ಹತ್ಯೆ ಮಾಡಿದವರನಾಗಿದ್ದಾನೆ. ಕಳೆದ 7-8 ವರ್ಷಗಳಿಂದ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದೆ. ಆದರೆ, ಪ್ರೀತಿಸಿದ ಯುವತಿ ಅನ್ಯಜಾತಿಯವಳೆಂಬ ಕಾರಣಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಯುವತಿಯ ಹಿಂದೆ ಹೋದರೆ ವಿಷ ಕುಡಿದು ಸಾಯುತ್ತೇವೆಂದು ಭಯಪಡಿಸಿದ್ದರು. ಈ ಕಾರಣಕ್ಕೆ ರು.9 ಲಕ್ಷ ಸುಪಾರಿ ಕೊಟ್ಟು ಹತ್ಯೆ ಅವರನ್ನು ಮಾಡಿಸಿದ್ದೇನೆಂದು ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನೆ.
ಕೊಲೆಯಾಗುವುದಕ್ಕೂ ಎರಡು ದಿನಗಳ ಹಿಂದೆ ಧೀರಜ್ ತನ್ನ ಗೆಳೆಯನೊಬ್ಬನ ಮೂಲಕ ಹಂತಕರನ್ನು ಪರಿಚಯ ಮಾಡಿಕೊಂಡಿದ್ದಾರೆ. ನಂತರ ಕೊಲೆಗಾರರು ನೀಡಿದ ಯೋಜನೆಯಂತೆ ಕೊಲೆಯಾಗುವ ದಿನ ಮಧ್ಯರಾತ್ರಿ ತನ್ನ ಪೋಷಕರು ಗಾಢ ನಿದ್ರೆಗೆ ಜಾರಿದ್ದಾಗ ಕೊಲೆಗಾರರನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ನಂತರ ಹಂತಕರು ಗೋಪಾಲ್ ಹಾಗೂ ರೂಪಾ ದಂಪತಿಗಳನ್ನು ಇರಿದು ಕೊಲೆ ಮಾಡಿದ್ದಾರೆ. ಪೋಷಕರು ಕೊನೆಯುಸಿರೆಳೆಯುತ್ತಿದ್ದರೂ ಧೀರಜ್ ಮಾತ್ರ ಎಲ್ಲವನ್ನೂ ನೋಡಿಕೊಂಡು ನಿಂತಿದ್ದನೆಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಇದರಂತೆ ಧೀರಜ್ ನೀಡಿದ್ದ ಮಾಹಿತಿಯನ್ವಯ ತುಮಕೂರು ಪೊಲೀಸರು ಹಂತಕಾರರನ್ನು ಬಂಧಿಸಿದ್ದು, ಬಂಧಿತರನ್ನು ಬೆಂಗಳೂರಿನ ವಿಜಯಾನಂದ ನಗರದ ಆರ್.ಎಸ್. ಹರೀಶ್ (22), ಚಂದ್ರಮೌಳಿ (20), ಮಹಾಲಕ್ಷ್ಮೀ ಲೇಔಟ್ ನ ರವಿ (26), ಆನಂದ (23), ಹಾಗೂ ನಂದಿನಿ ಲೇಔಟ್ ನ ರಾಮಚಂದ್ರ ರೆಡ್ಡಿ (36) ಎಂದು ಗುರ್ತಿಸಲಾಗಿದೆ.