ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

83ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹರಡಿದ ಕನ್ನಡದ ಕಂಪು

ಕನ್ನಡಿಗರ ಅಸ್ಮಿತೆಯಾದ 'ನುಡಿಹಬ್ಬದ ತೇರು' 27 ವರ್ಷಗಳ ಬಳಿಕ ಸಾಂಸ್ಕೃತಿಕ ನಗರಿ, ಸಾಹಿತಿಗಳ ಬೀಡು ಮೈಸೂರಿಗೆ ಆಗಮಿಸಿದ್ದು, 3 ದಿನಗಳ ಕಾಲ ನಡೆಯುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ಸಂಭ್ರಮದ ಚಾಲನೆ ಸಿಗಲಿದೆ...

83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹರಡಿದ ಕನ್ನಡದ ಕಂಪು
Manjula VN
Updated On : 24 Nov 2017, 10:02 am
ಮೈಸೂರು: ಕನ್ನಡಿಗರ ಅಸ್ಮಿತೆಯಾದ 'ನುಡಿಹಬ್ಬದ ತೇರು' 27 ವರ್ಷಗಳ ಬಳಿಕ ಸಾಂಸ್ಕೃತಿಕ ನಗರಿ, ಸಾಹಿತಿಗಳ ಬೀಡು ಮೈಸೂರಿಗೆ ಆಗಮಿಸಿದ್ದು, 3 ದಿನಗಳ ಕಾಲ ನಡೆಯುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ಸಂಭ್ರಮದ ಚಾಲನೆ ಸಿಗಲಿದೆ. 
ಅಕ್ರರ ಜಾತ್ರೆಗೆ ಅರಮನೆ ನಗರಿ ಮೈಸೂರು ಸಿಂಗಾಗೊಂಡು, ಕನ್ನಡಿಗರನ್ನು ಕೈಬೀಸಿ ಕರೆಯುತ್ತಿದೆ. 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದಾಗಿದ್ದು, ಬಂಡಾಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. 
ಬೆಳಿಗ್ಗೆ 8.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರು ರಾಷ್ಟ್ರ ಧ್ವಜಾರೋಹಣ ಮಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ಅವರು ಪರಿಷತ್ತಿನ ಧ್ವಜಾರೋಹಣ ಮಾಡಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ ರಾಜಣ್ಣ ಅವರು ನಾಡ ಧ್ವಜಾರೋಹಣ ಮಾಡಲಿದ್ದಾರೆ. 

Advertisement

Advertisement

ಅಕ್ಷರ ಜಾತ್ರೆ ಹಿನ್ನಲೆಯಲ್ಲಿ ಮೈಸೂರಿ ನಗರದಾದ್ಯಂತ ಕನ್ನಡ ಬಾವುಟಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕಟೌಟ್ ಗಳು ರಾರಾಜಿಸುತ್ತಿವೆ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಕನ್ನಟ ಬಾವುಟ ಹೋಲುವಂತೆ ಕೆಂಪು-ಹಳದಿ ಬಣ್ಣದ ವಿದ್ಯುದೀಪಾಲಂಕಾರಗಳನ್ನು ಮಾಡಲಾಗಿದೆ. ಸಮ್ಮೇಳಕ್ಕೆ ಈಗಾಗಲೇ 10 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. 
ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಣ, ಕೃಷಿ, ದಲಿತರ ವಿಚಾರ, ಮಹಿಳೆಯರ ಸಬಲೀಕರಣ, ಕನ್ನಡ ಸಾಹಿತ್ಯ ಇತಿಹಾಸ ಮತ್ತು ಸಂಶೋಧನೆ, ಸ್ಥಳೀಯ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದಿರುವ ಪತ್ರದ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೌನ ಹೀಗೆ ನಾನಾ ವಿಚಾರಗಳ ಕುರಿತು ದಿಗ್ಗಜರು ಚರ್ಚೆಯನ್ನು ನಡೆಯಲಿದ್ದಾರೆ. ಇಲ್ಲದೆ. ಕನ್ನಡ-ಇಂಗ್ಲೀಷ್ ಭಾಷೆಗಳ ನಡುವಿನ ಘರ್ಷಮೆ, ಇಂಗ್ಲೀಷ್ ಜಾಗತೀಕರಣದಿಂದಾಗಿ ಸ್ಥಳೀಯ ಭಾಷೆಗಳ ಹತ್ಯೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ರಕ್ಷಣೆ, ಹಂಪಿ ವಿಶ್ವವಿದ್ಯಾಲಯದ ಸ್ವಾಯತ್ತತೆ ಹಾಗೂ ಇತರೆ ವಿಚಾರಗಳ ಕುರಿತು ಚರ್ಚೆಗಳು ನಡೆಯಲಿದೆ. 
ಮಹಾರಾಜ ಕಾಲೇಜು ಮೈದಾನದಲ್ಲ ಪ್ರಧಾನ ವೇದಿಕೆಯಲ್ಲಿ ಬೆಳಿಗ್ಗೆ 11 ಗಂಟೆಗೆ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಡಾ.ಬರಗೂರು ರಾಮಚಂದ್ರಪ್ಪ, ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ್ ಅವರು ಭಾಷಣ ಮಾಡಲಿದ್ದಾರೆ. 
ಇನ್ನು ಸಮ್ಮೇಳನದಲ್ಲಿ ನಡೆಯಲಿರುವ ಸಾಂಸ್ಕೃಕ ಕಾರ್ಯಕ್ರಮಗಳನ್ನು ಸಚಿವೆ ಉಮಾಶ್ರೀ ಉದ್ಘಾಟಿಸಲಿದ್ದು, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಸಚಿವ ತನ್ವೀರ್ ಸೇಠ್ ಅವರು ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. 
ಸಾಹಿತ್ಯ ಸಮ್ಮೇಳನದಲ್ಲಿ ವಿವಿಐಪಿಗಳು, ವಿಐಪಿಗಳು, ಸಾಹಿತಿಗಳು ಸೇರಿದಂತೆ ಒಟ್ಟು 5,000 ಜನರು ಆಗಮಿಸಲಿದ್ದು, ಸಮ್ಮೇಳನಕ್ಕೆ ಸಾಕಷ್ಟು ಭದ್ರತೆಗಳನ್ನು ಒದಗಿಸಲಾಗಿದೆ. ಸುಮಾರು 1 ಲಕ್ಷ ಅತಿಥಿಗಳಿಗೆ ಬೋಜನಕೂಟವನ್ನುಆಯೋಜಿಸಲಾಗಿದೆ. ಅತಿಥಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕಾರ್ಯಕ್ರಮ ಆಯೋಜಕರು ಹೋಟೆಲ್ ರೂಮ್ ಗಳನ್ನು ಬುಕ್ ಮಾಡಿದ್ದಾರೆ. ಅಲ್ಲದೆ, ಸಮ್ಮೇಳನ ನಡೆಯುವ ಸುತ್ತಮುತ್ತಲಿನ ಪ್ರದೇಶಗಳಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement