ಸಾಂದರ್ಭಿಕ ಚಿತ್ರ 
ರಾಜ್ಯ

5ನೇ ಮದುವೆಯಾಗಲು ಹೋಗಿ ಸಿಕ್ಕಿಬಿದ್ದ ಯೋಧ!

5ನೇ ಮದುವೆಯಾಗಲು ತುದಿಗಾಲಲ್ಲಿ ನಿಂತಿತ್ತ ಯೋಧನೊಬ್ಬನ ಪ್ರಯತ್ನವನ್ನು ಮೊದಲ ಪತ್ನಿ ಕೊನೇ ಕ್ಷಣದಲ್ಲಿ ವಿಫಲಗೊಳಿಸಿರುವ ಸಿನಿಮೀಯ ರೀತಿಯ ಘಟನೆಯೊಂದು ಮೈಸೂರಿನ ವಿಜಯನಗರದ ಯೋಗ ನರಸಿಂಹಸ್ವಾಮಿ ದೇಗುಲದಲ್ಲಿ ಭಾನುವಾರ ನಡೆದಿದೆ...

ಮೈಸೂರು: 5ನೇ ಮದುವೆಯಾಗಲು ತುದಿಗಾಲಲ್ಲಿ ನಿಂತಿತ್ತ ಯೋಧನೊಬ್ಬನ ಪ್ರಯತ್ನವನ್ನು ಮೊದಲ ಪತ್ನಿ ಕೊನೇ ಕ್ಷಣದಲ್ಲಿ ವಿಫಲಗೊಳಿಸಿರುವ ಸಿನಿಮೀಯ ರೀತಿಯ ಘಟನೆಯೊಂದು ಮೈಸೂರಿನ ವಿಜಯನಗರದ ಯೋಗ ನರಸಿಂಹಸ್ವಾಮಿ ದೇಗುಲದಲ್ಲಿ ಭಾನುವಾರ ನಡೆದಿದೆ. 
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕು ಲಕ್ಕಿ ಕುಪ್ಪೆ ಗ್ರಾಮದ ನಿವಾಸಿ ಶಿವಣ್ಣೇ ಗೌಡ ಎಂಬುವವರ ಪುತ್ರ ಹಾಗೂ ಬಿಎಸ್ಎಫ್ ಯೋಧ ಶಿವನಂಜಪ್ಪ ಎಂಬುವವರೇ ಐದನೇ ಮದುವೆಗೆ ಯತ್ನಿಸಿ ಸಿಕ್ಕಿಬಿದ್ದವರಾಗಿದ್ದಾರೆ. 
ಶಿವನಂಜಪ್ಪ ಅವರು 10 ವರ್ಷಗಳ ಹಿಂದಯೇ ವರಲಕ್ಷ್ಮಿ ಎಂಬುವವರನ್ನು ವಿವಾಹರಾಗಿದ್ದಾರೆ. ಮದುವೆಯಾದ ಎರಡನೇ ವರ್ಷಗಳಲ್ಲಿ ಮತ್ತೊಂದು ಮದುವೆಯಾಗಿದ್ದಾರೆ. ಎರಡನೇ ಮದುವೆಯ ವಿಚ್ಛೇದನ ವಿಚಾರಣೆ ಪ್ರಗತಿಯಲ್ಲಿರುವಾಗಲೇ ಮತ್ತೆ ಎರಡು ಮದುವೆಯಾಗಿದ್ದಾರೆಂದು ವರಲಕ್ಷ್ಮಿಯವರು ಹೇಳಿದ್ದಾರೆ. 
ವಿಚ್ಛೇದರ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಬಾರಿ ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಪೊಲೀಸರು ಬಂಧನ ವಾರೆಂಟ್ ಸಮೇತ ಶಿವನಂಜಪ್ಪ ಅವರನ್ನು ಬಂಧಸಲು ಹೋಗಿದ್ದಾರೆ. ಈ ವೇಳೆ ಶಿವನಂಜಪ್ಪ ಅವರು ಪೊಲೀಸರ್ ಮೇಲೆಯೇ ದಾಳಿ ಮಾಡಿರುವ ಪ್ರಕರಣ ಕೂಡ ಅವರ ಮೇಲಿದೆ ಎಂದು ತಿಳಿದುಬಂದಿದೆ. 
ಶಿವನಂಜಪ್ಪ ಅವರು ಮತ್ತೊಂದು ಮದುವೆಯಾಗುತ್ತಿರುವ ವಿಚಾರ ತಿಳಿಸಿದ ವರಲಕ್ಷ್ಮಿಯವರು ವಧುವಿನ ಸಂಬಂಧಿಕರೊಬ್ಬರಿಗೆ ವಾಟ್ಸ್ ಅಪ್ ಮೂಲಕ ತಮ್ಮ ವಿವಾಹದ ಫೋಟೋಗಳನ್ನು ಕಳುಹಿಸಿದ್ದಾರೆ. 
ಇದರಿಂದ ತೀವ್ರವಾಗಿ ಕೆಂಡಾಮಂಡಲಗೊಂಡ ಯುವತಿಯ ಸಂಬಂಧಿಕರು ದೇಗುಲದಲ್ಲಿಯೇ ಜಗಳಕ್ಕೆ ಇಳಿದಿದ್ದಾರೆ. ಬಳಿಕ ವಿವಾಹವನ್ನು ತಡೆದಿದ್ದಾರೆ. 
10 ವರ್ಷಗಳ ಹಿಂದೆ ನನ್ನನ್ನು ಮದುವೆಯಾಗಿದ್ದರು. ಇಲ್ಲದೆ, ನನ್ನ ಹುಟ್ಟೂರಿನಲ್ಲಿಯೇ ಮತ್ತೊಂದು ಯುವತಿಯನ್ನು ಮದುವೆಯಾಗಿದ್ದರು. ಮತ್ತೆರಡು ವಿವಾಹವನ್ನೂ ಆಗಿದ್ದಾರೆ. ನಾನು ಈಗಾಗಲೇ ಮೋಸ ಹೋಗಿದ್ದು, ಇನ್ನಾವುದೇ ಮಹಿಳೆಯರೂ ಮೋಸ ಹೋಗಬಾರದು ಎಂದು ವರಲಕ್ಷ್ಮಿಯವರು ಹೇಳಿಕೊಂಡಿದ್ದಾರೆ. 
ಈ ಬಗ್ಗೆ ಶಿವನಂಜಪ್ಪ ಅವರು ಸ್ಪಷ್ಟನೆ ನೀಡಿದ್ದು, ನಾನು ಯಾವುದೇ ವಿವಾಹವನ್ನೂ ಆಗಿಲ್ಲ. ಫೋಟೋಗಳು ನಕಲಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ನಾನು ಸೇವೆಯಿಂದ ನಿವೃತ್ತಿ ಪಡೆದುಕೊಳ್ಳುತ್ತಿದ್ದು, ರಾಜಕೀಯಕ್ಕೆ ಸೇರ್ಪಡೆಯಾಗುವ ಕುರಿತು ನಿರ್ಧಾರ ಕೈಗೊಂಡಿದ್ದೇನೆ. ಹೀಗಾಗಿ ನನ್ನ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು