ನಮ್ಮ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆ, ಪ್ರಗತಿಶೀಲ ಚೈತನ್ಯ ಮತ್ತು ಕ್ರಿಯಾತ್ಮಕ ತತ್ವಗಳನ್ನು ಬಿಂಬಿಸುವ ಒಂದು ಗೀತೆಯ ವಿಡಿಯೋವನ್ನು ಸಿಎಂ ಸಿದ್ದರಾಮಯ್ಯ ಎಲ್ಲರೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.
ರಾಜ್ಯದ ವಿವಿಧ ಸಂಸ್ಕೃತಿ, ತತ್ವಗಳು, ಬೆಳವಣಿಗೆಗಳನ್ನು ಈ 'ನಮ್ಮ ನಾಡು, ಕನ್ನಡ ನಾಡು' ಹಾಡಿನಲ್ಲಿ ಬಿಂಬಿಸಲಾಗಿದೆ. ಅಂತೆಯೇ ಈ ಗೀತೆಯನ್ನು ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದಾಗಿದೆ.