ಘಟನಾ ಸ್ಧಳದಲ್ಲಿ ನೆರೆದಿರುವ ಜನ 
ರಾಜ್ಯ

ಪುರಸಭೆ ಅಧ್ಯಕ್ಷ ಚುನಾವಣೆ ವೇಳೆ ಮಹಿಳಾ ಸದಸ್ಯೆಯನ್ನ ಎಳೆದಾಡಿ ಅಸಭ್ಯ ವರ್ತನೆ ತೋರಿದ ಬಿಜೆಪಿ ಶಾಸಕ?

ಪುರಸಭೆಯ ಅಧ್ಯಕ್ಷ ಸ್ಥಾನ ಚುನಾವಣೆ ವೇಳೆ ತೆರೆದಾಳ ಬಿಜೆಪಿ ಶಾಸಕ ಸಿದ್ದು ಸವದಿಯವರು ಮಹಿಳಾ ಸದಸ್ಯೆಯೊಬ್ಬರನ್ನು ಎಳೆದಾಡಿ ಅಸಭ್ಯ ವರ್ತನೆ ತೋರಿದ್ದಾರೆಂಬ ಆರೋಪಗಳು ಕೇಳಿಬಂದಿವೆ. 

ಬಾಗಲಕೋಟೆ: ಪುರಸಭೆಯ ಅಧ್ಯಕ್ಷ ಸ್ಥಾನ ಚುನಾವಣೆ ವೇಳೆ ತೆರೆದಾಳ ಬಿಜೆಪಿ ಶಾಸಕ ಸಿದ್ದು ಸವದಿಯವರು ಮಹಿಳಾ ಸದಸ್ಯೆಯೊಬ್ಬರನ್ನು ಎಳೆದಾಡಿ ಅಸಭ್ಯ ವರ್ತನೆ ತೋರಿದ್ದಾರೆಂಬ ಆರೋಪಗಳು ಕೇಳಿಬಂದಿವೆ. 

ಇಂದು ಬಾಗಲಕೋಟೆ ಜಿಲ್ಲೆಯ ಮಹಲಿಂಗಪುರ ಪುರಸಬೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿತ್ತು. ಈ ವೇಳೆ ಅಧ್ಯಕ್ಷೆ ಆಕಾಂಕ್ಷಿ ಮಹಿಳೆ ಸವಿತಾ ಹುರಕಡ್ಲಿಯವರನ್ನು ಶಾಸಕ ಸಿದ್ದು ಸವದಿಯವರು ಎಳೆದ್ದಾರೆಂದು ಹೇಳಲಾಗುತ್ತಿದ್ದು, ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಬಿಜೆಪಿ ಸದಸ್ಯೆ ಸವಿತಾ ಹುರಕಡ್ಲಿ ಕಾಂಗ್ರೆಸ್'ಗೆ ಬೆಂಬಲಿಸಲು ಮುಂದಾದಾಗ ಶಾಸಕ ಸಿದ್ದು ಸವದಿಯವರು ಮಹಿಳೆಯನ್ನು ತಳ್ಳಾಡಿ ಅಸಭ್ಯ ವರ್ತನೆ ತೋರಿದ್ದಾರೆಂದು ಹೇಳಲಾಗುತ್ತಿದೆ. ನೂಕಾಟದ ಮಧ್ಯೆ ಮಹಿಳಾ ಸದಸ್ಯೆ ಕೆಳಕ್ಕೆ ಬಿದ್ದಿದ್ದು, ಶಾಸಕರ ಈ ವರ್ತನೆಗೆ ಆಕ್ರೋಶಗಳು ವ್ಯಕ್ತವಾಗತೊಡಗಿವೆ. 

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸವಿತಾ ಹುರಕಡ್ಲಿಯವರ ಪುತ್ರಿ ಸೌಮ್ಯ ಹುರಕಡ್ಲಿಯವರು, ನಮ್ಮ ತಾಯಿಯನ್ನು ಎಳೆದಾಡಿದ್ದರು. ಮೂವರು ಮಹಿಳಾ ಸದಸ್ಯರನ್ನೂ ಎಳೆದಾಡಿದ್ದಾರೆ. ಇದೀಗ ನಮ್ಮ ತಾಯಿ ಆಸ್ಪತ್ರೆಯಲ್ಲಿದ್ದಾರೆ. ಆಸ್ಪತ್ರೆಗೆ ದಾಖಲಾದರೂ ಸೌಜನ್ಯಕ್ಕೆ ಆದರೂ ಸಿದ್ದು ಸವದಿ ಬಂದು ಮಾತನಾಡಿಸಿಲ್ಲ. ನಮ್ಮ ತಂದೆ ತಾಯಿ ಕಳೆದ 20 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಒಂದು ಬಾರಿಯೂ ಅಧ್ಯಕ್ಷ ಸ್ಥಾನ ನೀಡಿಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ; 1.4 ಕೋಟಿ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ!

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ; ಡೊನಾಲ್ಡ್ ಟ್ರಂಪ್‌ಗೆ 'ಡಜನ್‌ಗಟ್ಟಲೆ' ಬಾರಿ ಫೋನ್ ಕರೆ ಮಾಡಿದ ಜೆಡಿ ವ್ಯಾನ್ಸ್!

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

SCROLL FOR NEXT