ರಾಜ್ಯ

ಕರ್ನಾಟಕ: ಜನವಸತಿ ಪ್ರದೇಶದಿಂದ ವನ್ಯಜೀವಿಗಳನ್ನು ಓಡಿಸಲು ಸ್ಥಳೀಯರಿಗೆ ಪಟಾಕಿ ಹಂಚಿದ ಅರಣ್ಯ ಇಲಾಖೆ

Harshavardhan M

ಬೆಂಗಳೂರು: ಜನವಸತಿ ಪ್ರದೇಶದಲ್ಲಿ ವನ್ಯಜೀವಿಗಳ ಓಡಾಟ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. 

ಚಿರತೆ ಮತ್ತು ಯಾವುದೇ ವನ್ಯಜೀವಿ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಪಕ್ಷದಲ್ಲಿ ಆ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುವುದು ಮಾತ್ರವಲ್ಲದೆ ಕಾಡುಪ್ರಾಣಿಗಳ ಮೇಲೆ ನಿಗಾ ಇರಿಸುವ ಕೆಲಸವನ್ನೂ ಮಾಡಲಾಗುತ್ತಿದೆ.

ಗಸ್ತು ತಿರುಗುವುದರ ಹೊರತಾಗಿ ಸ್ಥಳೀಯರಿಗೆ ಪಟಾಕಿಗಳನ್ನು ಅರಣ್ಯ ಇಲಾಖೆ ನೀಡುತ್ತಿದೆ. ವನ್ಯಜೀವಿ ಅಡ್ಡಾಡುವುದು ಕಂಡು ಬಂದಾಕ್ಷಣ ಅದನ್ನು ಹೆದರಿಸಿ ಓಡಿಸುವ ಸಲುವಾಗಿ ಸ್ಥಳೀಯರಿಗೆ ಪಟಾಕಿಗಳನ್ನು ನೀಡಲಾಗುತ್ತಿದೆ. 

ಈ ಪಟಾಕಿಗಳಿಂದ ಪ್ರಾಣಿಗಳಿಗೆ ಯಾವುದೇ ರೀತಿಯ ಅಪಾಯ ಆಗುವುದಿಲ್ಲ ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.  

SCROLL FOR NEXT