ರಾಜ್ಯ

ಬೆಂಗಳೂರಿನ ಶಿರೀಶ್, ಮಂಗಳೂರಿನ ಬಿಂದ್ಯಾಗೆ ರಾಷ್ಟ್ರೀಯ ಸಮಾಜ ಸೇವಾ ಪ್ರಶಸ್ತಿ: ರಾಷ್ಟ್ರಪತಿ ಕೋವಿಂದ್ ರಿಂದ ಪ್ರಶಸ್ತಿ ಪ್ರದಾನ

Harshavardhan M

ಬೆಂಗಳೂರು: ನಗರದ ಕೆ ಎಸ್ ಐ ಟಿ ಕಾಲೇಜಿನ ಹಳೆಯ ವಿದ್ಯಾರ್ಥಿ ಶಿರೀಶ್ ಗೋವರ್ಧನ್ ರವರಿಗೆ ಎನ್ ಎಸ್ ಎಸ್ (ನ್ಯಾಷನಲ್ ಸೋಷಿಯಲ್ ಸರ್ವಿಸ್) ಪ್ರಶಸ್ತಿ ದೊರಕಿದೆ. ರಕ್ತದಾನ ಮತ್ತು ಅರಣ್ಯನಾಶ ಇರುದ್ಧ ಹೋರಾಟ ಕಾರ್ಯಗಳನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. 

ಈ ಹಿಂದೆ ಎರಡು ಎನ್ ಜಿ ಒ ಗಳಿಗೆ ದೇಣಿಗೆ ಸಂಗ್ರಹಿಸುವ ಸಲುವಾಗಿ 2,000 ಕಿ.ಮೀ ಸೈಕಲ್ ಯಾತ್ರೆ ಮಾಡಿದ್ದು ಶಿರೀಶ್ ಸಾಧನೆಗಳಲ್ಲಿ ಒಂದು. ಸೆ.24ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗೋವರ್ಧನ್ ಅವರ ಜೊತೆಗೆ ಮಂಗಳೂರಿನ ಗೋವಿಂದ ದಾಸ್ ಡಿಗ್ರೀ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಎನ್ ಎಸ್ ಎಸ್ ಸ್ವಯಂಸೇವಕಿಯೂ ಆಗಿರುವ ಬಿಂದ್ಯಾ ಅವರೂ ರಾಷ್ಟ್ರೀಯ ಸಮಾಜ ಸೇವಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಹುಡುಗ ಹುಡುಗಿ ಪ್ರಶಸ್ತಿ ಹಂಚಿಕೊಳ್ಳುತ್ತಿರುವುದು ಇದೇ ಮೊದಲು ಎಂದು ಗೋವರ್ಧನ್ ಹೇಳಿದ್ದಾರೆ.

SCROLL FOR NEXT