ಚಲ್ಲಘಟ್ಟ ಮೆಟ್ರೋ ನಿಲ್ದಾಣ
ಚಲ್ಲಘಟ್ಟ ಮೆಟ್ರೋ ನಿಲ್ದಾಣ TNIE
ರಾಜ್ಯ

ಚಲ್ಲಘಟ್ಟ ಮೆಟ್ರೋ ನಿಲ್ದಾಣ: ಬೆಂಗಳೂರು- ಮೈಸೂರು ಹೆದ್ದಾರಿ ಕೆಳಗಿನ ಸೇತುವೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲ!

Srinivas Rao BV

ಬೆಂಗಳೂರು: ಚಲ್ಲಘಟ್ಟ ಮೆಟ್ರೋ ನಿಲ್ದಾಣಕ್ಕೆ ತೆರಳುವವರು ಅಥವಾ ವಾಪಸ್ ಬರುವವರಿಗೆ, ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಅನುಕೂಲಕರಾಗುವ ನಿಟ್ಟಿನಲ್ಲಿ ಬಿಎಂಆರ್ ಸಿಎಲ್ ಬೆಂಗಳೂರು-ಮೈಸೂರು ಹೆದ್ದಾರಿಯ ಎರಡೂ ಬದಿಗಳಲ್ಲಿ ಸೇತುವೆ ನಿರ್ಮಿಸಲು ತೀರ್ಮಾನಿಸಿದೆ. ಕಾಮಗಾರಿಯನ್ನು ತ್ವರಿತಗೊಳಿಸಲು ಚಲ್ಲಘಟ್ಟ ಡಿಪೋ ಸಿದ್ಧಗೊಳಿಸುತ್ತಿರುವ ಗುತ್ತಿಗೆದಾರನಿಗೇ ಈ ಕಾಮಗಾರಿಯನ್ನೂ ವಹಿಸಲಾಗಿದೆ.

ನೇರಳೆ ಮಾರ್ಗದ ಟರ್ಮಿನಲ್ ಸ್ಟೇಷನ್ ನ್ನು ಅ.09 ರಂದು ಕಳೆದ ವರ್ಷ ಉದ್ಘಾಟಿಸಲಾಗಿತ್ತು. ಈ ಮಾರ್ಗದಲ್ಲಿ ಸರಾಸರಿ 10,000 ಮಂದಿ ಸಂಚರಿಸುತ್ತಾರೆ. ಸೇತುವೆಯನ್ನು 2.22 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಸೆಪ್ಟೆಂಬರ್ ವೇಳೆಗೆ ಕಾರ್ಯಾರಂಭ ಮಾಡಲಿದೆ. ಮೆಟ್ಟಿಲು ಹಾಗೂ ಲಿಫ್ಟ್ ಗಳನ್ನು ಈ ಸೇತುವೆ ಹೊಂದಿರಲಿದ್ದು, ಪ್ರಾಥಮಿಕ ಕಾಮಗಾರಿ ಆರಂಭವಾಗಿದೆ ಎಂದು ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು, ಎಸಿಎಸ್ ಇಂಜಿನಿಯರಿಂಗ್ ಕಾಲೇಜು, ರಾಜರಾಜೇಶ್ವರಿ ದಂತ ಮಹಾವಿದ್ಯಾಲಯ, ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆ ಮತ್ತು ಐಸಿಎಫ್‌ಎಐ ಬಿಸಿನೆಸ್ ಸ್ಕೂಲ್ ಸುತ್ತಮುತ್ತ ಇರುವುದರಿಂದ ಈ ನಿಲ್ದಾಣವು ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆ ಹೆಚ್ಚು ಜನದಟ್ಟಣೆ ಹೊಂದಿರುತ್ತದೆ.

ಯೋಜನೆಗಳು ಮತ್ತು ಯೋಜನಾ ನಿರ್ದೇಶಕ, BMRCL, ಡಿ ರಾಧಾಕೃಷ್ಣ ರೆಡ್ಡಿ ಈ ಬಗ್ಗೆ ಮಾತನಾಡಿದ್ದು, “ನಾವು ಇತ್ತೀಚೆಗೆ NHAI ಗೆ ನಮ್ಮ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ ಮತ್ತು ಅದಕ್ಕಾಗಿ ಅವರ ತಾತ್ವಿಕ ಅನುಮೋದನೆಯನ್ನು ಪಡೆದಿದ್ದೇವೆ. ಮೇಲ್ಸೇತುವೆ ಇಲ್ಲೇ ಇರುವುದರಿಂದ ಕೆಲವು ತಾಂತ್ರಿಕ ಸಮಸ್ಯೆಗಳಿರಬಹುದು. ಮೆಟ್ರೊ ನಿಲ್ದಾಣದ ಪ್ರವೇಶ ದ್ವಾರದಿಂದ 100 ಮೀಟರ್ ದೂರದಲ್ಲಿ ಸೇತುವೆ ನಿರ್ಮಿಸುತ್ತೇವೆ. ಇದನ್ನು ಮೇಲ್ಸೇತುವೆಯ ಕೆಳಗೆ ಮಾತ್ರ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ನಿರ್ಮಾಣ ಕಾಮಗಾರಿಯನ್ನು ಸಿದ್ಧಪಡಿಸುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೆಲಸ ಆದರೆ ನಾವು ಅದನ್ನು ಸಾರ್ವಜನಿಕ ಸುರಕ್ಷತೆಯ ಹಿತಾಸಕ್ತಿಯಿಂದ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಬಿಎಂಆರ್‌ಸಿಎಲ್ ಮೆಟ್ರೋ ನಿಲ್ದಾಣ ಇರುವ ಬದಿಯಲ್ಲಿ ಸೇತುವೆಯನ್ನು ಸಂಪರ್ಕಿಸಲು 100 ಮೀಟರ್‌ಗೆ ಫುಟ್‌ಪಾತ್ ನಿರ್ಮಿಸಲಿದೆ.

SCROLL FOR NEXT