ಗೂಗಲ್ ಡೂಡಲ್ 
ರಾಜ್ಯ

ಲೋಕಸಭಾ ಚುನಾವಣೆ 2024: ಭಾರತದ ಪ್ರಜಾಪ್ರಭುತ್ವ ಹಬ್ಬವನ್ನು ವಿಶೇಷವಾಗಿ ಸಂಭ್ರಮಿಸಿದ ಗೂಗಲ್

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಶುಕ್ರವಾರ ಆರಂಭಗೊಂಡಿದ್ದು, ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಮುಂದುವರೆದಿದೆ. ಈ ನಡುವಲ್ಲೇ ಜಾಗತಿಕ ದೈತ್ಯ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸಿದೆ.

ಬೆಂಗಳೂರು: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಶುಕ್ರವಾರ ಆರಂಭಗೊಂಡಿದ್ದು, ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಮುಂದುವರೆದಿದೆ. ಈ ನಡುವಲ್ಲೇ ಜಾಗತಿಕ ದೈತ್ಯ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸಿದೆ.

ಗೂಗಲ್‌ ವಿಶೇಷ ಸಂದರ್ಭಗಳಲ್ಲಿ ತನ್ನ ಡೂಡಲ್ ಅನ್ನು ಬದಲಾಯಿಸುತ್ತದೆ. ಇಂದು ಕೂಡ ತನ್ನ ಡೂಡಲ್ ಅನ್ನು ಬದಲಾಯಿಸಿದ್ದು, ಶಾಯಿ ಹಚ್ಚಿದ ತೋರು ಬೆರಳಿನ ಚಿತ್ರವನ್ನು ಹಂಚಿಕೊಂಡಿದೆ. ಇದು ಭಾರತೀಯ ಚುನಾವಣೆಗಳ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಸಮಾನಾರ್ಥಕ ಸಂಕೇತವಾಗಿದೆ.

ದೇಶದ 13 ರಾಜ್ಯಗಳಲ್ಲಿನ 88 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಇಂದು ನಡೆಯುತ್ತಿದೆ. ಕರ್ನಾಟಕದ 14 ಮತ್ತು ಕೇರಳದ ಎಲ್ಲ 20 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಜೊತೆಗೆ, ರಾಜಸ್ಥಾನದ 13, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ತಲಾ 8, ಮಧ್ಯಪ್ರದೇಶದಲ್ಲಿ 7, ಬಿಹಾರ ಮತ್ತು ಅಸ್ಸಾಂನಲ್ಲಿ ತಲಾ 5, ಛತ್ತೀಸಗಡ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 3 ಹಾಗೂ ಮಣಿಪುರ, ತ್ರಿಪುರಾ, ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 1 ಕ್ಷೇತ್ರಗಳಲ್ಲಿಯೂ ಮತದಾನ ನಡೆಯುತ್ತಿದೆ.

ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದ್ದು, ಚುನಾವಣೆಯ ಮತದಾನ ಪ್ರಕ್ರಿಯೆ ಜೂನ್ 1 ರಂದು ಮುಕ್ತಾಯಗೊಳ್ಳಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಮಮತಾಗೆ ಬಿಗ್ ಶಾಕ್; TMC ವಿಭಜನೆ? ತೃಣಮೂಲ ಕಾಂಗ್ರೆಸ್ ನ 50 ಶಾಸಕರು, 20 ಸಂಸದರು ಬಿಜೆಪಿ ಸೇರ್ಪಡೆ?

ಗ್ಯಾಂಗ್ ರೇಪ್ ಪ್ರಕರಣ: ವಿವಾದಿತ ದೇವಮಾನವ Asaram Bapu ಖುಲಾಸೆ

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ: 15 ಕಿ.ಮೀ. ಒಳಗಿನ ಅಕ್ರಮ ನಿರ್ಮಾಣ ಕೆಡವಲು ಅಮಿತ್ ಶಾ ಸೂಚನೆ

SCROLL FOR NEXT