ದೋಸೆ ತಯಾರಿಸುತ್ತಿರುವ ಬಾಣಸಿಗರು. 
ರಾಜ್ಯ

ಶತಮಾನೋತ್ಸವ ಸಂಭ್ರಮದಲ್ಲಿ ಎಂಟಿಆರ್: 123 ಅಡಿ ಉದ್ದದ ದೋಸೆ ತಯಾರಿಸಿ ವಿಶ್ವ ದಾಖಲೆ!

ಬೆಂಗಳೂರಿನ ಪುರಾತನ ಹೋಟೆಲ್‌ಗಳಲ್ಲಿ ಅಗ್ರಸ್ಥಾನದಲ್ಲಿರುವ ಎಂಟಿಆರ್‌ಗೆಶ ತಮಾನೋತ್ಸವ ಸಂಭ್ರಮದಲ್ಲಿದ್ದು, ಈ ಸಂಭ್ರದಲ್ಲೇ 123 ಅಡಿ ಉದ್ದದ ದೋಸೆ ತಯಾರಿಸುವ ಮೂಲಕ ಗಿನ್ನೆಸ್‌ ವರ್ಲ್ಡ್ ರೆಕಾರ್ಡ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.

ಬೆಂಗಳೂರು: ಬೆಂಗಳೂರಿನ ಪುರಾತನ ಹೋಟೆಲ್‌ಗಳಲ್ಲಿ ಅಗ್ರಸ್ಥಾನದಲ್ಲಿರುವ ಎಂಟಿಆರ್‌ಗೆಶ ತಮಾನೋತ್ಸವ ಸಂಭ್ರಮದಲ್ಲಿದ್ದು, ಈ ಸಂಭ್ರದಲ್ಲೇ 123 ಅಡಿ ಉದ್ದದ ದೋಸೆ ತಯಾರಿಸುವ ಮೂಲಕ ಗಿನ್ನೆಸ್‌ ವರ್ಲ್ಡ್ ರೆಕಾರ್ಡ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.

ಲೋರ್ಮನ್ ಕಿಚನ್ ಸಲಕರಣೆಗಳ ಸಹಭಾಗಿತ್ವದಲ್ಲಿ ವಿಶ್ವದ ಅತಿ ಉದ್ದದ ದೋಸೆ ತಯಾರಿಸಿರುವ ಎಂಟಿಆರ್​ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ದಾಖಲೆ ಮಾಡಿದೆ.

ದೋಸೆ ಉದ್ದ ಸುಮಾರು 123 ಅಡಿ ಇದ್ದು, ಎಂಟಿಆರ್ ಈ ಹಿಂದಿನ ವಿಶ್ವದ ಅತೀ ಉದ್ದದ ದೋಸೆಯ 16.68 ಮೀ (54 ಅಡಿ 8.69 ಇಂಚು) ದಾಖಲೆ ಮುರಿದಿದೆ.

ಬೆಂಗಳೂರಿನ ಬೊಮ್ಮಸಂದ್ರ ಫ್ಯಾಕ್ಟರಿಯಲ್ಲಿ ಈ ಅಪರೂಪದ ದೋಸೆ ತಯಾರಿಸಲು ಎಂಟಿಆರ್ ತನ್ನದೇ ಉತ್ಪನ್ನವಾದ ಸಿಗ್ನೇಷರ್ ರೆಡ್ ಬ್ಯಾಟರ್ ಅನ್ನು ಬಳಸಿದೆ.

ಎಂಟಿಆರ್​ ನ ಕ್ಯುಸಿನ್ ಸೆಂಟರ್ ಆಫ್ ಎಕ್ಸಲೆನ್ಸ್ ನ ಮಾರ್ಗದರ್ಶನದಲ್ಲಿ ಅನುಭವಿ ತಜ್ಞರು ಮತ್ತು ಉದಯೋನ್ಮುಖ ಪಾಕಶಾಲೆಯ ಪ್ರತಿಭೆಗಳನ್ನು ಒಳಗೊಂಡಿರುವ 75 ಬಾಣಸಿಗರ ತಂಡವು ಈ ದಾಖಲೆಯನ್ನು ನಿರ್ಮಿಸಿದೆ.

ಈ ಹಿಂದಿನ ದಾಖಲೆ ಮುರಿಯುವ ಪ್ರಯತ್ನವು ಬ್ರ್ಯಾಂಡ್​ನ ಪಾಕಶಾಲೆಯ ಕುಶಲತೆಯ ಪಾಂಡಿತ್ಯವನ್ನು ಎತ್ತಿ ತೋರಿಸಿದೆ. ಜೊತೆಗೆ ದಕ್ಷಿಣ ಭಾರತದ ಆಹಾರದಲ್ಲಿ ಅದರ ಪರಿಣತಿ ಪ್ರದರ್ಶಿಸಿದೆ.

ಈ ಕುರಿತು ಮಾತನಾಡಿದ ಎಂಟಿಆರ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುನಯ್ ಭಾಸಿನ್ ಅವರು, ಇದು ನಮಗೆ ಅಪಾರ ಹೆಮ್ಮೆಯ ಕ್ಷಣವಾಗಿದೆ. ನಾವು 100 ಅಡಿ ದೋಸೆಗಾಗಿ ಪ್ರಯತ್ನಿಸುತ್ತಿದ್ದೆವು, ಆದರೆ, ಅದನ್ನು ಮೀರಿ 123 ಅಡಿ ದೋಸೆಯನ್ನು ನಾವು ತಯಾರಿಸಿದ್ದೇವೆ. ಈ ಅಪರೂಪದ ದೋಸೆ ನಮ್ಮ ಪರಂಪರೆ ಮತ್ತು ನಾವು ಅನೇಕ ತಲೆಮಾರುಗಳಿಂದ ಸ್ವೀಕರಿಸುತ್ತಿರುವ ಪ್ರೀತಿಯ ಆಚರಣೆಯಾಗಿದೆ. ದೋಸೆ ಮೊದಲಿನಿಂದಲೂ ಎಂಟಿಆರ್ ಪರಂಪರೆಯ ಭಾಗವಾಗಿದೆ. ಇಂದಿಗೂ ಇದು ಎಂಟಿಆರ್ ನ ಅತ್ಯಂತ ಪ್ರೀತಿಯ ಉತ್ಪನ್ನಗಳಲ್ಲಿ ಒಂದಾಗಿದೆ. ವಿನಮ್ರ ದಕ್ಷಿಣ ಭಾರತೀಯ ಖಾದ್ಯವಾಗಿರುವುದರಿಂದ, ಇದು ಈಗ ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿದೆ ಹಾಗೂ ಪ್ರೀತಿಸಲ್ಪಟ್ಟಿದೆ. ನಮ್ಮ ಗ್ರಾಹಕರು ಮತ್ತು ಅವರ ನೆಚ್ಚಿನ ಖಾದ್ಯದೊಂದಿಗಿನ ನಮ್ಮ ಬಾಂಧವ್ಯದ ಆಚರಣೆಯೇ ಅತಿ ಉದ್ದದ ದೋಸೆ ವಿಶ್ವ ದಾಖಲೆಯಾಗಿದೆ ಎಂದರು.

ಲೋರ್ಮನ್ ಕಿಚನ್ ಎಕ್ವಿಪ್ಮೆಂಟ್ ಪ್ರೈ. ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಚಂದ್ರ ಮೌಳಿ ಅವರು ಮಾತನಾಡಿ ವಿಶ್ವದ ಅತೀ ಉದ್ದವಾದ ದೋಸೆಯನ್ನು ವಿಶೇಷವಾಗಿ ನಿರ್ಮಿಸಿದ ಇಂಡಕ್ಷನ್ ಸ್ಟೌವ್​​ನಲ್ಲಿ ಬೇಯಿಸಲಾಗುತ್ತಿದೆ. ಇದು ಲೋರ್ಮನ್ ನಿರ್ಮಿಸಿದ ಅತೀ ಉದ್ದದ ಸ್ಟೌವ್ ಆಗಿದೆ. ಇಂಡಕ್ಷನ್ ಅಡುಗೆ ಉಪಕರಣಗಳು ಹೆಚ್ಚು ಪರಿಣಾಮಕಾರಿ, ಸಮರ್ಥನೀಯ ಮತ್ತು ಪರಿಸರ ಸ್ನೇಹಿಯಾಗಿದ್ದು, ಬಾಣಸಿಗರಿಗೆ ಸುರಕ್ಷಿತ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತದೆ. ಈ ಐತಿಹಾಸಿಕ ಕ್ಷಣದಲ್ಲಿ ಎಂಟಿಆರ್ ನೊಂದಿಗೆ ಪಾಲುದಾರರಾಗಲು ನಾವು ಹೆಮ್ಮೆಪಡುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video