ಸಾಂದರ್ಭಿಕ ಚಿತ್ರ 
ರಾಜ್ಯ

'ಮನೆ ಜಗಳ ಅಂತ ಕರೆದ್ರೆ.. 4 ಬಾರಿ Rape ಮಾಡಿದ ಪೊಲೀಸಪ್ಪ': ಮಹಿಳೆ ಗಂಭೀರ ಆರೋಪ!

ರಾಮನಗರದಲ್ಲಿ ಡಿಎಆರ್ ಪೇದೆಯೊಬ್ಬರ ವಿರುದ್ಧ ಮಹಿಳೆ ಅತ್ಯಾಚಾರದ ಆರೋಪ ಮಾಡಿದ್ದು, ಮಾತ್ರವಲ್ಲದೇ ತನ್ನಿಂದ 12 ಲಕ್ಷ ರೂ ಹಣ ಕೂಡ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ಚನ್ನಪಟ್ಟಣ: ಕುಟುಂಬದ ಗಲಾಟೆ ನಿಲ್ಲಿಸಲು ಬಂದ ಪೊಲೀಸ್ ಪೇದೆ ತನ್ನನ್ನು 4 ಬಾರಿ ಅತ್ಯಾಚಾರ ಮಾಡಿದ ಎಂದು ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ಹೌದು.. ರಾಮನಗರದಲ್ಲಿ ಡಿಎಆರ್ ಪೇದೆಯೊಬ್ಬರ ವಿರುದ್ಧ ಮಹಿಳೆ ಅತ್ಯಾಚಾರದ ಆರೋಪ ಮಾಡಿದ್ದು, ಮಾತ್ರವಲ್ಲದೇ ತನ್ನಿಂದ 12 ಲಕ್ಷ ರೂ ಹಣ ಕೂಡ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಇದೀಗ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಡಿಎಆರ್ ಪೇದೆ ಪುಟ್ಟಸ್ವಾಮಿ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದ್ದು, ಈತ 112 ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಚನ್ನಪಟ್ಟಣ ತಾಲ್ಲೂಕಿನ ಮಹಿಳೆಯೊಬ್ಬರನ್ನು ಅತ್ಯಾಚಾರ ಮಾಡಿ, ಮಹಿಳೆಯನ್ನ ಪುಸಲಾಯಿಸಿ 12 ಲಕ್ಷ ರೂ ಹಣ ಕೂಡಾ ಪಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಗಲಾಟೆ ಅಂತ 112ಗೆ ರೆ ಮಾಡಿದ್ದ ಮಹಿಳೆ

ಮೂಲಗಳ ಪ್ರಕಾರ ಯಾವುದೋ ಗಲಾಟೆ‌ ಪ್ರಕರಣ ಸಂಬಂಧ ಸಂತ್ರಸ್ಥ ಮಹಿಳೆ 112 ಗೆ ಕರೆ ಮಾಡಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ 112 ವಾಹನದ ಚಾಲಕ ಡಿಎಆರ್ ಪೇದೆ ಪುಟ್ಟಸ್ವಾಮಿ ಸಂತಸ್ಥ ಮಹಿಳೆಯ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿಕೊಂಡಿದ್ದ. ಬಳಿಕ ಆಕೆಯಿಂದ ಪೋನ್ ನಂಬರ್ ಪಡೆದು ಸಲುಗೆ ಬೆಳೆಸಿಕೊಂಡಿದ್ದ.

ಬಳಿಕೆ ಆಕೆಗೆ ಹತ್ತಿರವಾಗಿ ವಿವಿಧ ಸಂದರ್ಭಗಳಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ರೀತಿ ಪೇದೆ ಪುಟ್ಟಸ್ವಾಮಿ ತನ್ನ ಮೇಲೆ ನಾಲ್ಕು ಬಾರಿ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ ತನ್ನ ಬಳಿ ಸುಮಾರು 12 ರೂ ಹಣ ಪಡೆದು ಹಣವನ್ನೂ ನೀಡದ ಸತಾಯಿಸುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ.

ಈ ಬಗ್ಗೆ ಎಂ ಕೆ ದೊಡ್ಡಿ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಪೇದೆ ಪುಟ್ಟಸ್ವಾಮಿ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ಸಂಬಂಧ ಈಗಾಗಲೇ ಎಸ್ ಪಿ ಶ್ರೀನಿವಾಸ್ ಗೌಡ ಪೇದೆಯನ್ನ ಅಮಾನತು ಮಾಡಿದ್ದಾರೆ. ಇನ್ನು ಪ್ರಕರಣ ತನಿಖೆ ಡಿಸಿ ಆರ್ ಇ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಜುಲೈ 3 ರಂದು ಪ್ರಕರಣ ದಾಖಲಾಗಿದ್ದು, ಈಗ ಪೇದೆ ತಲೆ ಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Dharmasthala case: ಅಜ್ಞಾತ ಸ್ಥಳಕ್ಕೆ ಬಂಧಿತ ಸಾಕ್ಷಿ-ದೂರುದಾರ ಚಿನ್ನಯ್ಯನನ್ನು ಸ್ಥಳ ಮಹಜರಿಗೆ ಕರೆದೊಯ್ದ SIT

ಸೌಜನ್ಯ ಪ್ರಕರಣ 'ರೀ ಓಪನ್' ಆಗುತ್ತಾ? ಮಂಡ್ಯದ ಸಾಕ್ಷಿದಾರ ಮಹಿಳೆ SIT ಗೆ ಪತ್ರ! ಹೇಳಿರುವುದು ಏನು?

Free Bus Effect: ಆಂಧ್ರ ಪ್ರದೇಶದಲ್ಲೂ ಸೀಟ್ ಗಾಗಿ ಮಹಿಳೆ ಜಟಾಪಟಿ, ವ್ಯಕ್ತಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗ ಥಳಿತ! video

ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ, ಭೂಕುಸಿತ; ಐವರು ಮಕ್ಕಳು ಸೇರಿ 11 ಮಂದಿ ಸಾವು-Video

ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ

SCROLL FOR NEXT