ಲಾರಿಗೆ ಬಸ್ ಡಿಕ್ಕಿ 
ರಾಜ್ಯ

ಶಿವಮೊಗ್ಗ: ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ದುರ್ಗಾಂಬ ಬಸ್ ಡಿಕ್ಕಿ; ಸ್ಥಳದಲ್ಲೇ ಇಬ್ಬರ ಸಾವು, 9 ಮಂದಿಗೆ ಗಾಯ

ಶಿವಮೊಗ್ಗದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಗಾಜನೂರಿನ ಬಳಿ, ಮಂಗಳೂರಿನಿಂದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗೆ ಬಸ್ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಶಿವಮೊಗ್ಗ: ಬುಧವಾರ ಬೆಳಗಿನ ಜಾವ ರಸ್ತೆಬದಿಯಲ್ಲಿ ನಿಂತಿದ್ದ ಲಾರಿಗೆ ದುರ್ಗಾಂಬ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಬಸ್ ಕಂಡಕ್ಟರ್ ಅಣ್ಣಪ್ಪ (32) ಮತ್ತು ಪ್ರಯಾಣಿಕ ಹರ್ಷಿತ್ (25) ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಿವಮೊಗ್ಗದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಗಾಜನೂರಿನ ಬಳಿ, ಮಂಗಳೂರಿನಿಂದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗೆ ಬಸ್ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಬಸ್ ಚಾಲಕ ಎದುರುಗಡೆಯಿಂದ ಬರುತ್ತಿದ್ದ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಎಡಕ್ಕೆ ತಿರುಗಿಸಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಣ್ಣಪ್ಪ ಮತ್ತು ಹರ್ಷಿತ್ ಸ್ಥಳದಲ್ಲೇ ಸಾವನ್ನಪ್ಪಿದರು, ಆದರೆ ಗಂಭೀರ ಗಾಯಗೊಂಡ ಇತರ ಒಂಬತ್ತು ಮಂದಿಯನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಅಪಘಾತದ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಿಂದಾಗಿ ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯಲ್ಲಿ ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಜೊತೆ ರಷ್ಯಾ ಗೌಪ್ಯ ಮಾಹಿತಿ ಹಂಚಿಕೆ: ವಿಶ್ವದಲ್ಲೇ ಅತ್ಯುತ್ತಮ ಗುಪ್ತಚರ ವ್ಯವಸ್ಥೆ ನಮ್ಮದು, ಭಯವಿಲ್ಲ ಎಂದ ಅಮೆರಿಕಾ

LPG Price Hike: ದೇಶದ ನಾಗರಿಕರಿಗೆ ತಟ್ಟಿದ ಬಿಸಿ, ಇರಾನ್ ಯುದ್ಧ ಮಧ್ಯೆ ಎಲ್ ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

ಬಿಹಾರದ ನೂತನ ಸಾರಥಿ ಯಾರು: ದಲಿತ ನಾಯಕನಿಗೆ ಸಿಎಂ ಪಟ್ಟವೋ? ಅಮಿತ್ ಶಾ ಭಂಟನಿಗೆ ಸಿಂಹಾಸನವೋ!

Karnataka Budget 2026-ಬೆಂಗಳೂರು ನಂತರ ರಾಜ್ಯದ ಎರಡನೇ ಐಟಿ ನಗರವಾಗಿ ಮೈಸೂರು ಅಭಿವೃದ್ಧಿ: ಸಿಎಂ ಸಿದ್ದರಾಮಯ್ಯ

ನ್ಯೂಯಾರ್ಕ್ ನಲ್ಲೇ ನಿಮ್ಮ ಬುಡ ಗಟ್ಟಿ ಇಲ್ಲ; ಇನ್ನು ನಮ್ಮ ದೇಶದ ಅಧಿಕಾರ ಬದಲಾಯಿಸ್ತೀರಾ?: ಟ್ರಂಪ್ ಬಗ್ಗೆ ಇರಾನ್ ಅಪಹಾಸ್ಯ!

SCROLL FOR NEXT