ಸಂತೋಷ್ ಹೆಗ್ಡೆ, ಪವನ್ ಕಲ್ಯಾಣ್ ಮತ್ತು ಗೋಪಾಲಗೌಡ 
ರಾಜ್ಯ

ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ಆಂಧ್ರ CM ಚಂದ್ರಬಾಬು ನಾಯ್ಡು ಜೊತೆ ಚರ್ಚೆ: ಪವನ್ ಕಲ್ಯಾಣ್

ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳೊಂದಿಗೆ ಕೃಷ್ಣಾ ನದಿ ನೀರಿನ ಹಂಚಿಕೆ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರೊಂದಿಗೆ ಚರ್ಚಿಸುವುದಾಗಿ ಪವನ್ ಕಲ್ಯಾಣ್ ಭರವಸೆ ನೀಡಿದರು.

ಚಿಂತಾಮಣಿ: ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಹರಿಯುವ ಕೃಷ್ಣಾ ನದಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸಲು ಸಹೋದರ ಭಾವನೆಯಿಂದ ಪ್ರಯತ್ನ ಮಾಡುವುದಾಗಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಭರವಸೆ ನೀಡಿದರು.

ಚಿಂತಾಮಣಿಯಲ್ಲಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಗೋಪಾಲಗೌಡ ಅವರ 75 ನೇ ಹುಟ್ಟುಹಬ್ಬದ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಆಂಧ್ರಪ್ರದೇಶದ ಡಿಸಿಎಂ, ತಮ್ಮ ರಾಜ್ಯವು ಕರ್ನಾಟಕದೊಂದಿಗೆ ಹಂಚಿಕೊಂಡ ಉತ್ತಮ ಸಂಬಂಧದ ಬಗ್ಗೆ ಮಾತನಾಡಿದರು.

ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳೊಂದಿಗೆ ಕೃಷ್ಣಾ ನದಿ ನೀರಿನ ಹಂಚಿಕೆ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರೊಂದಿಗೆ ಚರ್ಚಿಸುವುದಾಗಿ ಪವನ್ ಕಲ್ಯಾಣ್ ಭರವಸೆ ನೀಡಿದರು.

ಎರಡೂ ರಾಜ್ಯಗಳ ಜನರು ಪರಸ್ಪರರ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸುತ್ತಾರೆ ಎಂದು ಅವರು ಹೇಳಿದರು, ನಾಯ್ಡು ಅವರೊಂದಿಗೆ ಆದ್ಯತೆಯ ಆಧಾರದ ಮೇಲೆ ನದಿ ನೀರಿನ ಸಮಸ್ಯೆಯನ್ನು ಕೈಗೆತ್ತಿಕೊಳ್ಳುವುದಾಗಿ ಪುನರುಚ್ಚರಿಸಿದರು. ಕೃಷ್ಣಾ ನೀರು ಈಗಾಗಲೇ ನೆರೆಯ ಆಂಧ್ರಪ್ರದೇಶದ ಕುಪ್ಪಂ ತಲುಪಿದೆ ಎಂದು ಹೇಳಿದರು.

ನ್ಯಾಯಮೂರ್ತಿ ಗೌಡ, ಮಾಜಿ ಶಾಸಕ ಜೆ. ಕೃಷ್ಣಾ ರೆಡ್ಡಿ ಮತ್ತು ಕೋಲಾರ ಸಂಸದ ಮಲ್ಲೇಶ್ ಬಾಬು ಈಗಾಗಲೇ ನೀರಿನ ಕೊರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ. ನೆಲದಿಂದ 1,500 ಅಡಿ ಕೆಳಗೆ ಕೊರೆದ ನಂತರವೂ ನೀರು ಸಿಗುತ್ತಿಲ್ಲ, ಒಂದು ವೇಳೆ ನೀರು ಸಿಕ್ಕರೂ ಸಹ ಅದರಲ್ಲಿ ಫ್ಲೋರೈಡ್ ಇರುವುದು ಕಂಡುಬಂದಿದೆ ಎಂದು ಅವರು ಉಲ್ಲೇಖಿಸಿದರು.

ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು ಧೈರ್ಯ ಮತ್ತು ಬದ್ಧತೆ ಉಳ್ಳವರಾಗಿದ್ದಾರೆ. ಅವರ ಸಿದ್ಧಾಂತಗಳು ಜನಸೇವಾ ಸಿದ್ಧಾಂತಗಳಿಗೆ ಸಹಕಾರಿಯಾಗಿವೆ. ಬಡವರು, ಯುವಕರು, ಮಹಿಳೆಯರು, ಕಾರ್ಮಿಕರು, ರೈತರಿಗೆ ಸಹಕಾರ ನೀಡುವ ಹಾಗೂ ಪರಿಸರ ರಕ್ಷಣೆಗೆ ದಾರಿದೀಪವಾಗಿದ್ದಾರೆ ಎಂದು ಕೊಂಡಾಡಿದರು.

ನ್ಯಾಯವು ಕೇವಲ ತೀರ್ಪು ಅಲ್ಲ, ಧ್ವನಿಯಾದಾಗ, ಅದು ನ್ಯಾಯಮೂರ್ತಿ ಗೋಪಾಲ ಗೌಡ ಆಗುತ್ತಾರೆ. ನಾನು ನಿಮ್ಮ ಮುಂದೆ ಡಿಸಿಎಂ ಅಥವಾ ನಟನಾಗಿ ಅಲ್ಲ, ಬದಲಾಗಿ ವಿದ್ಯಾರ್ಥಿಯಾಗಿ ನಿಲ್ಲುತ್ತೇನೆ” ಎಂದು ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಹೇಳಿದರು.

ನ್ಯಾಯಮೂರ್ತಿ ಗೋಪಾಲ ಗೌಡ ಧ್ವನಿಯಿಲ್ಲದವರ ಧ್ವನಿಯಾಗಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಹಲವಾರು ನಿರ್ಣಾಯಕ ಜನ ಚಳುವಳಿಗಳಿಗೆ ತಮ್ಮ ಬೆಂಬಲವನ್ನು ನೀಡಿದರು. ಅವರು ಸ್ಪೂರ್ತಿದಾಯಕ ವ್ಯಕ್ತಿ ಮಾತ್ರವಲ್ಲ, ನನಗೆ ಮಾರ್ಗದರ್ಶಕರೂ ಆಗಿದ್ದಾರೆ ಎಂದರು.

"ಗ್ರಾಮೀಣ ಜನರ ಸಮಸ್ಯೆಗಳು ಪರ್ವತಗಳಂತೆ. ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ ಜನರ ಸಮಸ್ಯೆಗಳು ಇನ್ನೂ ಮುಂದುವರೆದಿವೆ - ಬಡತನ, ನಿರುದ್ಯೋಗ, ನೀರಿನ ಕೊರತೆ ಮತ್ತು ಭೂಕಬಳಿಕೆ ಮುಂದುವರೆದಿದೆ. ನನ್ನ ಶಕ್ತಿ ಜನರ ಶಕ್ತಿಯಿಂದ ಬಂದಿದೆ. ಜನರ ಸಮಸ್ಯೆಗಳೇ ನನ್ನ ಸಮಸ್ಯೆಗಳು ಎಂದು ನಾನು ಯಾವಾಗಲೂ ನಂಬಿದ್ದೇನೆ" ಎಂದು ನ್ಯಾಯಮೂರ್ತಿ ಗೌಡ ಹೇಳಿದರು. ಅವರ ಪತ್ನಿ, ಮಗ, ಕುಟುಂಬ ಮತ್ತು ಸ್ನೇಹಿತರು ತಮ್ಮ ಪ್ರಯಾಣದುದ್ದಕ್ಕೂ ತಮ್ಮನ್ನು ಬೆಂಬಲಿಸಿದ್ದಾರೆ ಎಂದು ಅವರು ಹೇಳಿದರು.

ನ್ಯಾಯಮೂರ್ತಿ ಗೌಡ ಅವರೊಂದಿಗಿನ ನನ್ನ ಒಡನಾಟ 30 ವರ್ಷಗಳ ಹಿಂದಿನದು. ನಿವೃತ್ತಿಯ ನಂತರವೂ ಅವರು ಸಾರ್ವಜನಿಕ ಚಳುವಳಿಗಳಲ್ಲಿ ಭಾಗವಹಿಸುವುದನ್ನು ಮುಂದುವರೆಸಿದ್ದಾರೆ ಮತ್ತು ಯಾವಾಗಲೂ ಜನರ ಧ್ವನಿಯಾಗಿದ್ದಾರೆ" ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದರು.ಕಾರ್ಯಕ್ರಮದಲ್ಲಿ ಕರ್ನಾಟಕದ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಎ.ಕೆ. ಪಟ್ನಾಯಕ್ ಮತ್ತು ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

4 ಲಕ್ಷ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಅನುಮತಿ ನೀಡಿದವರಿಂದ ಪಾಠದ ಅಗತ್ಯವಿಲ್ಲ: ವಿಶ್ವಸಂಸ್ಥೆಯಲ್ಲಿ ಪಾಕ್‌ ವಿರುದ್ಧ ಗುಡುಗಿದ ಭಾರತ

ನನ್ನ ಸೂಚನೆ ಪರಿಣಾಮಕಾರಿಯಾಗಿತ್ತು, ಹೀಗಾಗಿ ಯುದ್ಧ ನಿಲ್ಲಿಸಿದರು: ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಪುನರುಚ್ಛಾರ

ಪರಿಶಿಷ್ಟ ಜಾತಿಯವರು ಬೌದ್ಧ ಧರ್ಮಕ್ಕೆ ಮತಾಂತರ ಆದ್ರು 'SC ಜಾತಿ ಪ್ರಮಾಣಪತ್ರ': ರಾಜ್ಯ ಸರ್ಕಾರದ ಆದೇಶ!

Uttar Pradesh: ರಾತ್ರಿ ಹೊತ್ತಲ್ಲಿ 'ಹಾವಾಗಿ' ಕಚ್ಚಲು ಓಡಾಡಿಸುವ ಪತ್ನಿ: ಅಧಿಕಾರಿಗಳ ದುಂಬಾಲು ಬಿದ್ದ ಪತಿ!

CJI ಮೇಲೆ 'ಶೂ' ಎಸೆತ: ಯಾವುದೇ ಪಶ್ಚಾತ್ತಾಪವಿಲ್ಲ, ನಾನು ಮಾಡಿದ್ದು ಸರಿಯಿದೆ ಎಂದ ವಕೀಲ ರಾಕೇಶ್ ಕಿಶೋರ್

SCROLL FOR NEXT