ಸಾಂದರ್ಭಿಕ ಚಿತ್ರ 
ರಾಜ್ಯ

SIT- ಪ್ರಮುಖ ಪ್ರಕರಣಗಳ ತನಿಖೆಗೆ ಹೊಸ ಅಸ್ತ್ರ: CID ತನಿಖೆಯ ಗಂಭೀರತೆ, ಪಾವಿತ್ರ್ಯತೆಗೆ ಕುತ್ತು!

ಫೆಬ್ರವರಿ 2023 ರಲ್ಲಿ ಆಳಂದ ಚುನಾವಣಾ ನೋಂದಣಿ ಅಧಿಕಾರಿ ಎಫ್‌ಐಆರ್ ದಾಖಲಿಸಿದ ನಂತರ ಕಳೆದ ವಾರಾಂತ್ಯದಲ್ಲಿ ಅದನ್ನು ಎಸ್‌ಐಟಿಗೆ ಹಸ್ತಾಂತರಿಸುವವರೆಗೆ ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿತ್ತು.

ಬೆಂಗಳೂರು: ಕಲಬುರಗಿಯ ಆಳಂದ ವಿಧಾನಸಭೆ ಕ್ಷೇತ್ರದಲ್ಲಿ 2023 ರಲ್ಲಿ ನಡೆದಿದೆ ಎಂದು ಹೇಳಲಾಗುತ್ತಿರುವ ಮತಕಳ್ಳತನ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT) ನ್ನು ರಚಿಸಿದೆ.

ಫೆಬ್ರವರಿ 2023 ರಲ್ಲಿ ಆಳಂದ ಚುನಾವಣಾ ನೋಂದಣಿ ಅಧಿಕಾರಿ ಎಫ್‌ಐಆರ್ ದಾಖಲಿಸಿದ ನಂತರ ಕಳೆದ ವಾರಾಂತ್ಯದಲ್ಲಿ ಅದನ್ನು ಎಸ್‌ಐಟಿಗೆ ಹಸ್ತಾಂತರಿಸುವವರೆಗೆ ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿತ್ತು.

ಸಂಕೀರ್ಣ, 'ಸೂಕ್ಷ್ಮ' ಮತ್ತು 'ರಾಜಕೀಯವಾಗಿ ಮಹತ್ವದ' ಪ್ರಕರಣಗಳನ್ನು ತನಿಖೆ ಮಾಡಲು ಎಸ್‌ಐಟಿ ರಚನೆಯು ಈ ಸರ್ಕಾರಕ್ಕೆ ಹೊಸದಲ್ಲ, ಆದರೆ ಅಂತಹ ಪ್ರತಿಯೊಂದು ಪ್ರಕರಣವನ್ನು ತನಿಖೆ ಮಾಡಲು ಅಧಿಕಾರಿಗಳ ತಂಡವನ್ನು ರಚಿಸುವ ಪ್ರವೃತ್ತಿ ಹಿಂದಿನ CID ತನಿಖೆಯ ಗಂಭೀರತೆ ಮತ್ತು ಪಾವಿತ್ರ್ಯಕ್ಕೆ ಹಿನ್ನಡೆಯಾಗಿದೆ. ಸಿಐಡಿಯನ್ನು ಕರ್ನಾಟಕ ಪೊಲೀಸರ ಒಂದು ಪ್ರಮುಖ ತನಿಖಾ ವಿಭಾಗವಾಗಿ (ಆಗ ಪತ್ತೆದಾರರ ದಳ) ರಚಿಸಲಾಗಿತ್ತು.

ಪ್ರಕರಣದ ಗಂಭೀರತೆ

90 ರ ದಶಕದ ಮಧ್ಯ ಮತ್ತು ಕೊನೆಯಲ್ಲಿ ಕೆಲವೇ ಆಯ್ದ ಪ್ರಕರಣಗಳಿಗೆ ಎಸ್ ಐಟಿ ತನಿಖೆ ಮಾಡಲಾಗುತ್ತಿತ್ತು. ಪೊಲೀಸ್ ಅಧಿಕಾರಿಗಳ ತಂಡವನ್ನು ಬದಿಗಿಟ್ಟು ತನಿಖೆ ಪೂರ್ಣಗೊಳ್ಳುವವರೆಗೆ ಅವರ ನಿಯಮಿತ ಕಾನೂನು ಮತ್ತು ಸುವ್ಯವಸ್ಥೆಯ ಕರ್ತವ್ಯಗಳಿಂದ ದೂರವಿಟ್ಟು ವಿಶೇಷ ತನಿಖೆಯ ಕಾರ್ಯವನ್ನು ಅವರಿಗೆ ವಹಿಸುವುದು ಇದರ ಉದ್ದೇಶವಾಗಿತ್ತು. ಸರ್ಕಾರದ ವಿಶೇಷ ಅಧಿಕಾರ ಹೊಂದಿರುವ ಎಸ್‌ಐಟಿ ಸ್ಥಾಪನೆಯು ಇತ್ತೀಚೆಗೆ ಸಾಮಾನ್ಯವಾಗಿದೆ.

SIT ಅಧಿಕಾರಿಗಳನ್ನು ಕ್ಷೇತ್ರ ಜ್ಞಾನ, ಪರಿಣತಿ, ತನಿಖೆಯ ಕೌಶಲ್ಯ, ಟ್ರ್ಯಾಕ್ ರೆಕಾರ್ಡ್ ಮುಂತಾದ ವಿವಿಧ ಕಾರಣಗಳಿಗಾಗಿ ಆಯ್ಕೆ ಮಾಡಲಾಗುತ್ತದೆ. ತಂಡವನ್ನು ಆಯ್ಕೆ ಮಾಡುವಲ್ಲಿ ನಂಬಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಕೆಲವು ನಿವೃತ್ತ ಪೊಲೀಸ್ ಅಧಿಕಾರಿಗಳು ಹೇಳಿದರು.

ಅತ್ಯಂತ ಸೂಕ್ಷ್ಮ ಪ್ರಕರಣಗಳಲ್ಲಿ, ಅಧಿಕಾರಿಗಳ ಸಮಗ್ರತೆಯ ಪರೀಕ್ಷೆಯಾಗಬಹುದು. ತನಿಖೆಯು ಸೂಕ್ಷ್ಮ ಕಲೆಯಾಗಿದೆ ಆದರೆ ನ್ಯಾಯಾಲಯಗಳ ಪರಿಶೀಲನೆಯನ್ನು ತಡೆದುಕೊಳ್ಳಲು ನಿರ್ದಿಷ್ಟ ಅರ್ಹತೆ ಮತ್ತು ಧೈರ್ಯದ ಅಗತ್ಯವಿದೆ ಎಂದರು.

CID ತನಿಖೆ ಹೇಗೆ

ಕಾನೂನು ಮತ್ತು ತನಿಖೆಯ ವಿಶೇಷ ಜ್ಞಾನದ ಅಗತ್ಯವಿರುವ ಮತ್ತು ಅಪರಾಧಗಳ ಪತ್ತೆಯಲ್ಲಿ ಗರಿಷ್ಠ ಫಲಿತಾಂಶವನ್ನು ಸಾಧಿಸುವ, ಪೊಲೀಸರು ಸಾರ್ವಜನಿಕರಲ್ಲಿ ವಿಶ್ವಾಸ ಮತ್ತು ಉತ್ತಮ ನಂಬಿಕೆಯನ್ನು ತುಂಬುವ ಪ್ರಮುಖ ಪ್ರಕರಣಗಳು, ಆರ್ಥಿಕ ಅಪರಾಧಗಳನ್ನು ತನಿಖೆ ಮಾಡಲು 1974 ರಲ್ಲಿ ಸಿಐಡಿಯನ್ನು ಸ್ಥಾಪಿಸಲಾಯಿತು.

ಸಿಐಡಿ ಪ್ರಮುಖ ಬದಲಾವಣೆಗಳಿಗೆ ಒಳಗಾಗಿದೆ. 2009 ರಿಂದ ಇಲ್ಲಿಯವರೆಗೆ, ಸಾಂಸ್ಥಿಕ ವ್ಯವಸ್ಥೆ, ನಾಯಕತ್ವ, ತರಬೇತಿ ಮತ್ತು ಪರಿಣತಿಯವರೆಗೆ, ಹೆಚ್ಚಾಗಿ ಸೈಬರ್, ಆರ್ಥಿಕ ಅಪರಾಧಗಳು ಮುಂತಾದ ವಿಶೇಷ ಅಪರಾಧಗಳನ್ನು ನಿಭಾಯಿಸುವಲ್ಲಿ ಮಹತ್ತರ ಬದಲಾವಣೆ ಕಂಡಿದೆ.

ಸರ್ಕಾರವು ಸೂಕ್ಷ್ಮ ಅಥವಾ ರಾಜಕೀಯ ಲಾಭವನ್ನು ಹೊಂದಿರುವ ಪ್ರತಿಯೊಂದು ಪ್ರಕರಣಕ್ಕೂ SIT ನ್ನು ರಚಿಸುವುದು ಸರ್ಕಾರದ ಸಂಸ್ಥೆಯ ಮೇಲಿನ ನಂಬಿಕೆ ಹೊರಟುಹೋಗುತ್ತದೆ. ಈ ಸಂದರ್ಭದಲ್ಲಿ, ಪೊಲೀಸರು, ವಿಶೇಷವಾಗಿ CID ಯ ಮೊರೆ ಹೋಗುತ್ತಾರೆ.

ಪೊಲೀಸರು ಸರ್ಕಾರದ ಮುಖವಾಣಿಯಂತೆ. ಇದು ಭಾರತೀಯ ಪೊಲೀಸ್ ಸೇವೆ ಮತ್ತು ರಾಜ್ಯ ಕೇಡರ್‌ನ ಹಿರಿಯ ಪೊಲೀಸ್ ಅಧಿಕಾರಿಗಳ ದೃಷ್ಟಿಕೋನ ಮತ್ತು ಮಾರ್ಗದರ್ಶನದಲ್ಲಿ ದಶಕಗಳಿಂದ ಇರುವ ಇಮೇಜ್ ನ್ನು ಬಲಪಡಿಸಲು ಸಹಾಯ ಮಾಡಬೇಕೆನ್ನುತ್ತಾರೆ ನಿವೃತ್ತ ಅಧಿಕಾರಿಗಳು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಹುಲ್ ಗಾಂಧಿಯ 'ವೋಟ್ ಚೋರಿ' ಆರೋಪ ಖಂಡಿಸಿ 272 ಗಣ್ಯರಿಂದ ಬಹಿರಂಗ ಪತ್ರ; ಚುನಾವಣಾ ಆಯೋಗದ ಪರವಾಗಿ ವಾದ!

'ನರಕಾಸುರ' ಮೋದಿಯನ್ನು ಕೊಲ್ಲಬೇಕು': ಜನರ ಎದುರೇ DMK ನಾಯಕನಿಂದ ಕೊಲೆ ಬೆದರಿಕೆ, ಚಪ್ಪಾಳೆ ತಟ್ಟಿದ ಮಹಿಳೆಯರು, Video

'ಕೆಂಪು ಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೂ ನುಗ್ಗಿ ಭಾರತವನ್ನು ಹೊಡೆದಿದ್ದೇವೆ: ಈವರೆಗೂ ಶವ ಎಣಿಕೆ ಮಾಡೋದಕ್ಕೆ ಆಗ್ತಿಲ್ಲ! ಪಾಕಿಸ್ತಾನದ ಉದ್ಧಟತನ

ಜೈಲಿನಲ್ಲಿ ರಾಜಾತಿಥ್ಯ ವಿಡಿಯೋ ಲೀಕ್ ಕೇಸ್: ನನಗೇನು ಗೊತ್ತಿಲ್ಲ ಅನ್ನುತ್ತಿದ್ದ ಧನ್ವೀರ್ ಈಗ ವಿಜಯಲಕ್ಷ್ಮೀ ಹೆಸರು ಬಾಯಿಬಿಟ್ಟ!

ರೈಲಿನಲ್ಲಿ ಯುವಕನೋರ್ವ ನನ್ನ ಕುತ್ತಿಗೆ, ಬೆನ್ನು, ಖಾಸಗಿ ಭಾಗ ಮುಟ್ಟಿದ್ದ, ತಿರುಗಿ ನೋಡುವಷ್ಟರಲ್ಲಿ...: ಸಾರ್ವಜನಿಕ ಸ್ಥಳದಲ್ಲಾಗಿದ್ದ ಕರಾಳ ಘಟನೆ ತೆರದಿಟ್ಟ ನಟಿ Girija Oak

SCROLL FOR NEXT