ರಂಜಿತಾ 
ರಾಜ್ಯ

ಬೆಂಗಳೂರು: ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ಮೈತುಂಬ ಸಾಲ ಮಾಡಿಕೊಂಡಿದ್ದ ಮಹಿಳೆ ಆತ್ಮಹತ್ಯೆಗೆ ಶರಣು!

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ರಂಜಿತಾ(28) ಎಂದು ಗುರುತಿಸಲಾಗಿದ್ದು, ನೆಲಮಂಗಲದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಬೆಂಗಳೂರು: ನೆಲಮಂಗಲ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದು, ಲಕ್ಷಾಂತರ ರೂಪಾಯಿ ಕಳೆದುಕೊಂಡು, ಮೈತುಂಬ ಸಾಲ ಮಾಡಿಕೊಂಡಿದ್ದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ರಂಜಿತಾ(28) ಎಂದು ಗುರುತಿಸಲಾಗಿದ್ದು, ನೆಲಮಂಗಲದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಮೃತ ರಂಜಿತಾ 10 ವರ್ಷಗಳ ಹಿಂದೆ ಅರುಣ್ ಎಂಬುವವರ ಜೊತೆ ಮದುವೆಯಾಗಿದ್ದರು. ಗುಲ್ಬರ್ಗಾ ನಿವಾಸಿಗಳಾದ ಈ ದಂಪತಿ ಕಳೆದ 5 ವರ್ಷದಿಂದ ನೆಲಮಂಗಲದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಕಳೆದ 1 ವರ್ಷದ ಹಿಂದೆ ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದಿದ್ದ ರಂಜಿತಾ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದರು. ಅಲ್ಲದೇ ರಂಜಿತಾಳ ತಾಯಿ ಹಾಗೂ ಗಂಡ ಈಗಾಗಲೇ ಆಕೆ ಮಾಡಿದ್ದ ಸುಮಾರು 15 ಲಕ್ಷ ರೂ. ಸಾಲ ತೀರಿಸಿದ್ದರು. ಇಷ್ಟಾದರೂ ಕೂಡ ಆನ್‌ಲೈನ್ ಗೇಮಿಂಗ್ ಬಿಟ್ಟಿರಲಿಲ್ಲ. ಮತ್ತೆ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಎರಡು ದಿನಗಳ ಹಿಂದೆ ಮೃತಳ ಪತಿ ಅರುಣ್ ಅವರು ಗುಲ್ಬರ್ಗಾಗೆ ಕೆಲಸ ನಿಮಿತ್ತ ತೆರಳಿದ್ದರು. ಈ ವೇಳೆ ಮನೆಯಲ್ಲಿ 7 ವರ್ಷದ ಮಗನ ಜೊತೆ ಇದ್ದ ರಂಜಿತಾ ಕಳೆದ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮಿತ್ ಶಾ 'ಉಪನ್ಯಾಸ' ಕೇಳುವ ಆಸಕ್ತಿ ಈಗ ನಮ್ಮಲ್ಲಿ ಉಳಿದಿಲ್ಲ; ಅವರ ವರ್ಚಸ್ಸಿನ 'ಬಲೂನ್' ಟುಸ್ ಆಗಿದೆ: ರಾಹುಲ್ ಗಾಂಧಿ

ಡಿ.ಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ: ಮುನಿಯಪ್ಪಗೆ ಸಮಾಜಕಲ್ಯಾಣ, ಜಮೀರ್– ವಸತಿ ಖಾತೆ?

ಪರಪ್ಪನ ಅಗ್ರಹಾರ ಜೈಲಿನಲ್ಲೂ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್, ಪೆನ್‌ಡ್ರೈವ್ ಪತ್ತೆ: ಮಾಜಿ ಸಂಸದನ ವಿರುದ್ಧ ಕೇಸ್ ದಾಖಲು

ಚಿತ್ರೀಕರಣ ವೇಳೆ ಆಕಸ್ಮಿಕವಾಗಿ ಮೂಗುತಿ ನುಂಗಿ ಒದ್ದಾಡಿದ ಬಾಲಿವುಡ್ ನಟಿ! Video ನೋಡಿ ಆತಂಕಕ್ಕೀಡಾದ ಅಭಿಮಾನಿಗಳು!

ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ: ಡಬಲ್ ಸಂಭ್ರಮದಲ್ಲಿರುವ ಪತ್ನಿ ಸೋನಲ್'ಗೆ ದುಬಾರಿ ಗಿಫ್ಟ್ ನೀಡಿದ ತರುಣ್ ಸುಧೀರ್!