ಹಲ್ಲೆಗೊಳಗಾದ ವೆಂಕಟೇಶ್ 
ರಾಜ್ಯ

ಗಂಡ-ಹೆಂಡತಿ ಜಗಳ: ಒಂದು ಮಾಡಲು ಹೋದ ಹಿಂದೂ ವ್ಯಕ್ತಿ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ!

ಬಸ್ ನಿಲ್ದಾಣದಲ್ಲಿ ಯುವತಿ ಹಾಗೂ ಆಕೆಯ ತಾಯಿ ಜೊತೆಯಲ್ಲಿದ್ದ ಹಿಂದೂ ವ್ಯಕ್ತಿ ವೆಂಕಟೇಶ್ ನನ್ನು ನೋಡಿದ ಮುಸ್ಲಿಂ ಯುವಕರ ಗುಂಪು ಕೆರಳಿದ್ದು, ಆತ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ತಪ್ಪಾಗಿ ತಿಳಿದು ವೆಂಕಟೇಶ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದೆ.

ಬೆಂಗಳೂರು: ಮುಸ್ಲಿಂ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಹಿಂದೂ ಯುವಕನೊಬ್ಬನ ಮೇಲೆ ಬರ್ಬರ ರೀತಿಯಲ್ಲಿ ಹಲ್ಲೆ ನಡೆಸಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಬಸ್ ನಿಲ್ದಾಣದಲ್ಲಿ ಯುವತಿ ಹಾಗೂ ಆಕೆಯ ತಾಯಿ ಜೊತೆಯಲ್ಲಿದ್ದ ಹಿಂದೂ ವ್ಯಕ್ತಿ ವೆಂಕಟೇಶ್ ನನ್ನು ನೋಡಿದ ಮುಸ್ಲಿಂ ಯುವಕರ ಗುಂಪು ಕೆರಳಿದ್ದು, ಆತ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ತಪ್ಪಾಗಿ ತಿಳಿದು ವೆಂಕಟೇಶ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದೆ.

ಪೊಲೀಸ್ ದೂರಿನ ಪ್ರಕಾರ, ಬಸಪಟ್ಟಣ ಗ್ರಾಮದ ಅಜ್ಮೀರ್ ಮತ್ತು ಅಫಿಯಾ ನಡುವೆ ಜಗಳ ಆದ ನಂತರ ಅಫಿಯಾ ತನ್ನ ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದರು. ಕುಟುಂಬದ ಸ್ನೇಹಿತ ಹಾಗೂ ನೆರೆ ಹೊರೆಯವರಾಗಿದ್ದ ವೆಂಕಟೇಶ್ ನನ್ನು ಅಫಿಯಾ ಜೊತೆಗೆ ಮಾತನಾಡಿ, ಆಕೆಯ ಮನವೊಲಿಸುವಂತೆ ಅಜ್ಮೀರ್ ಕೇಳಿಕೊಂಡಿದ್ದಾಗಿ ವರದಿಯಾಗಿದೆ.

ಈ ಮನವಿ ಹಿನ್ನೆಲೆಯಲ್ಲಿ ವೆಂಕಟೇಶ್ ಬಸ್ ನಿಲ್ದಾಣದ ಹತ್ತಿರ ಹೋಗಿದ್ದಾನೆ. ಅಫಿಯಾ ಮತ್ತು ಆಕೆಯ ಮಕ್ಕಳು ತನ್ನ ತಾಯಿ ಮನೆಗೆ ಹೋಗಲು ಯೋಜಿಸಿದ್ದರು ಎನ್ನಲಾಗಿದೆ.

ಆದರೆ, ಮುಸ್ಲಿಂ ಪುರುಷರ ಗುಂಪು ಅಫಿಯಾ ಮತ್ತು ಆಕೆಯ ಮಕ್ಕಳೊಂದಿಗೆ ವೆಂಕಟೇಶ್ ಇರುವುದನ್ನು ನೋಡಿ, ತಪ್ಪಾಗಿ ತಿಳಿದುಕೊಂಡು ಆತನ ಮೇಲೆ ಹಲ್ಲೆ ನಡೆಸಿದೆ. ಸತ್ಯ ತಿಳಿದ ಸ್ಥಳೀಯರು ವೆಂಕಟೇಶ್ ಅದೇ ಗ್ರಾಮದವನಾಗಿದ್ದು ಯಾವುದೇ ದುರುದ್ದೇಶ ಹೊಂದಿರಲಿಲ್ಲ ಎಂದು ಹೇಳಿದರೂ ದಾಳಿಕೋರರು ಆತನನ್ನು ತೀವ್ರವಾಗಿ ಥಳಿಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಪೊಲೀಸರು ಅಜ್ಮೀರ್, ಖಾಜಾಫೀರ್, ಇಂದ್ರಾವಲಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಜ್ಮೀರ್, ಅಫಿಯಾ, ಮಕ್ಕಳು ಮತ್ತು ವೆಂಕಟೇಶ್ ಪರಸ್ಪರ 15 ವರ್ಷಗಳಿಂದ ಪರಿಚಿತರಾಗಿದ್ದರು ಎಂದು ಪೊಲೀಸರು ದೃಢಪಡಿಸಿದ್ದಾರೆ.

ಪ್ರಕರಣ ದಾಖಲಾದ ಬೆನ್ನಲ್ಲೇ ವೆಂಕಟೇಶ್ ವಿರುದ್ಧವೂ ಪ್ರತಿದೂರು ದಾಖಲಿಸುವಂತೆ ಒತ್ತಾಯಿಸಿ ಮುಸ್ಲಿಂ ಸಮುದಾಯದ ಹಲವರು ಪೊಲೀಸ್ ಠಾಣೆಗೆ ಜಮಾಯಿಸಿ ಗಲಾಟೆ ನಡೆಸಿದರು. ಇದರಿಂದ ಪೊಲೀಸ್ ಠಾಣೆ ಹೊರಗೆ ಕಾವೇರಿದ ವಾತವಾರಣ ನಿರ್ಮಾಣವಾಗಿತ್ತು.

ಈ ಘಟನೆಯ ವಿಡಿಯೋಗಳು ವೈರಲ್ ಆಗಿದ್ದು, ನೀಲಿ ಟೀ ಶರ್ಟ್‌ನಲ್ಲಿದ್ದ ಒಬ್ಬ ವ್ಯಕ್ತಿ ಪೊಲೀಸರತ್ತ ಬೆದರಿಸುವ ರೀತಿಯಲ್ಲಿ ಬೆರಳನ್ನು ಅಲ್ಲಾಡಿಸುತ್ತಿರುವುದನ್ನು ತೋರಿಸಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war: ಹಾರ್ಮುಜ್ ಬಿಕ್ಕಟ್ಟು ತೀವ್ರ; ನಾವಿಕರನ್ನು ಕಳೆದುಕೊಂಡ ಏಕೈಕ ದೇಶ ಭಾರತ, ನಿರ್ಬಂಧ ರಹಿತ ಸಂಚಾರಕ್ಕೆ ಒತ್ತಾಯ..!

ಇರಾನ್‌ ಯುದ್ಧದ ನಡುವೆ ಅಮೆರಿಕದಲ್ಲಿ ಮಹತ್ವದ ಬೆಳವಣಿಗೆ: ಸೇನಾ ಮುಖ್ಯಸ್ಥರನ್ನು ಕಿತ್ತೆಸೆದ ಟ್ರಂಪ್ ಆಡಳಿತ!

ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನ: ಇರಾನ್ ಪ್ರಮುಖ ಸೇತುವೆ ಧ್ವಂಸ, ತಡವಾಗುವ ಮುನ್ನ ಶಾಂತಿ ಒಪ್ಪಂದಕ್ಕೆ ಬನ್ನಿ; ಟೆಹ್ರಾನ್'ಗೆ ಟ್ರಂಪ್ ಎಚ್ಚರಿಕೆ

'ನಾನಿನ್ನೂ IPL ಮುಖ್ಯಸ್ಥನಾಗಿದ್ರೆ ತಕ್ಷಣವೇ ಸಂಜೀವ್ ಗೋಯೆಂಕಾ ಬ್ಯಾನ್' ಮಾಡ್ತಿದೆ- ಲಲಿತ್ ಮೋದಿ

ಡಾಕ್ಟರ್ ಮಗ ಡಾಕ್ಟರ್ ಆಗ್ತಾನೆ, MLA ಮಗ MLA ಆಗೋದ್ರಲ್ಲಿ ತಪ್ಪೇನು?: ಕುಟುಂಬ ರಾಜಕೀಯಕ್ಕೆ ಎಂ.ಬಿ.ಪಾಟೀಲ್ ಸಮರ್ಥನೆ

SCROLL FOR NEXT