ಸಂಗ್ರಹ ಚಿತ್ರ 
ರಾಜ್ಯ

ಕೇಂದ್ರದಿಂದ BESCOMಗೆ ‘ರೆಡ್ ಕಾರ್ಡ್’: ವಿದ್ಯುತ್ ವಿತರಣೆ ranking ನಲ್ಲಿ ‘-C’ ಶ್ರೇಣಿ, ಎಚ್ಚರಿಕೆ ಗಂಟೆ ಎಂದ ತಜ್ಞರು..!

ಬೆಸ್ಕಾಂ, ಹೆಸ್ಕಾಂ (ಹುಬ್ಬಳ್ಳಿ), ಮೆಸ್ಕಾಂ (ಮಂಗಳೂರು), ಗೆಸ್ಕಾಂ (ಕಲಬುರಗಿ) ಮತ್ತು ಸೆಸ್ಕ್ (ಮೈಸೂರು) ಯಾವ ಸಂಸ್ಥೆಯೂ ದೇಶದ ಟಾಪ್ 20 ವಿದ್ಯುತ್ ವಿತರಣಾ ಸಂಸ್ಥೆಗಳ ಪಟ್ಟಿಗೆ ಸೇರಿಲ್ಲ. ಮೆಸ್ಕಾಂ ಮಾತ್ರ 56.44 ಅಂಕಗಳೊಂದಿಗೆ 26ನೇ ಸ್ಥಾನ ಪಡೆದಿದ್ದು, ‘B’ ಶ್ರೇಣಿ ಪಡೆದಿದೆ.

ಬೆಂಗಳೂರು: ಕೇಂದ್ರ ವಿದ್ಯುತ್ ಸಚಿವಾಲಯದ 14ನೇ ವಾರ್ಷಿಕ ಸಮಗ್ರ ರೇಟಿಂಗ್ ಮತ್ತು ರ್ಯಾಂಕಿಂಗ್ ವರದಿಯಲ್ಲಿ (-C) ಶ್ರೇಣಿ ಪಡೆದು ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆ (BESCOM) ‘ರೆಡ್ ಕಾರ್ಡ್’ ಪಡೆದಿದೆ.

ಬೆಸ್ಕಾಂ, ಹೆಸ್ಕಾಂ (ಹುಬ್ಬಳ್ಳಿ), ಮೆಸ್ಕಾಂ (ಮಂಗಳೂರು), ಗೆಸ್ಕಾಂ (ಕಲಬುರಗಿ) ಮತ್ತು ಸೆಸ್ಕ್ (ಮೈಸೂರು) ಯಾವ ಸಂಸ್ಥೆಯೂ ದೇಶದ ಟಾಪ್ 20 ವಿದ್ಯುತ್ ವಿತರಣಾ ಸಂಸ್ಥೆಗಳ ಪಟ್ಟಿಗೆ ಸೇರಿಲ್ಲ. ಮೆಸ್ಕಾಂ ಮಾತ್ರ 56.44 ಅಂಕಗಳೊಂದಿಗೆ 26ನೇ ಸ್ಥಾನ ಪಡೆದಿದ್ದು, ‘B’ ಶ್ರೇಣಿ ಪಡೆದಿದೆ.

ಈ ಮೌಲ್ಯಮಾಪನದಲ್ಲಿ ದೇಶದ 54 ರಾಜ್ಯ ಮತ್ತು ಖಾಸಗಿ ವಿದ್ಯುತ್ ವಿತರಣಾ ಸಂಸ್ಥೆಗಳನ್ನು ಪರಿಶೀಲಿಸಲಾಗಿದ್ದು, ವಿದ್ಯುತ್ ವಿತರಣಾ ಸಂಸ್ಥೆಗಳಿಗೆ A+ (6 ಸ್ಟಾರ್) – ಅತ್ಯುತ್ತಮ, A (5 ಸ್ಟಾರ್), B (4 ಸ್ಟಾರ್, B- (3 ಸ್ಟಾರ್), C (2 ಸ್ಟಾರ್), -C (1 ಸ್ಟಾರ್) ಎಂಬ ಶ್ರೇಣಿಗಳನ್ನು ನೀಡಲಾಗಿದೆ.

ಮೌಲ್ಯಮಾಪನವು 15 ಕಾರ್ಯಕ್ಷಮತಾ ಸೂಚಕಗಳು ಹಾಗೂ 9 ಪ್ರೋತ್ಸಾಹ ಅಂಶಗಳ ಆಧಾರದಲ್ಲಿ 100 ಅಂಕಗಳ ಮೂಲಕ ನಡೆಸಲಾಗಿದೆ.

2025ರ ಆರ್ಥಿಕ ವರ್ಷದಲ್ಲಿ ಬೆಸ್ಕಾಂನ ಒಟ್ಟು ಆದಾಯ 33,375 ಕೋಟಿ ರೂ. ಆಗಿದ್ದು, ಆದಾಯ ವರ್ಷದಿಂದ ವರ್ಷಕ್ಕೆ ಶೇ.2ರಷ್ಟು ಏರಿಕೆಯಾಗಿದೆ. ಆದರೆ, ತೆರಿಗೆ ನಂತರ ಲಾಭ ಬಂದಿಲ್ಲ. ರೇಟಿಂಗ್ ಸ್ಕೋರ್'ನಲ್ಲಿ ಬೆಸ್ಕಾಂ 28.94/100 ಪಡೆದಿದ್ದು. ವಿಶೇಷ ಪ್ರೋತ್ಸಾಹಕ ಅಂಕದಲ್ಲಿ 16.50 ಪಡೆದಿದೆ.

ಮೌಲ್ಯಮಾಪನದಲ್ಲಿ ನಗದು ಹರಿವು, ಸಾಲ-ಆಸ್ತಿ ಅನುಪಾತ, ಬಿಲ್ಲಿಂಗ್ ಮತ್ತು ವಸೂಲಿ ದಕ್ಷತೆ, ವಿತರಣಾ ನಷ್ಟ, ಕಾರ್ಪೊರೇಟ್ ಆಡಳಿತ, ಹಾಗೂ ಸರ್ಕಾರದಿಂದ ನಷ್ಟ ಭರಿಸುವ ವ್ಯವಸ್ಥೆ ಮುಂತಾದ ಅಂಶಗಳನ್ನು ಪರಿಗಣಿಸಲಾಗಿದೆ. ಒಟ್ಟಾರೆ ಕಾರ್ಯಕ್ಷಮತೆಯನ್ನು ಆಧರಿಸಿ ಮೌಲ್ಯಮಾಪನವನ್ನು ಮಾಡಲಾಗಿದ್ದು, ಸೆಸ್ಕ್ ಅನ್ನು 44ನೇ ಸ್ಥಾನದಲ್ಲಿ ಪಟ್ಟಿ ಮಾಡಲಾಗಿದೆ.

ಎಚ್ಚರಿಕೆ ಗಂಟೆ ಎಂದ ತಜ್ಞರು

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಜ್ಞರು ಇದು ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಮಾರಾಟವಾಗುವ ಶೇ.55ರಷ್ಟು ವಿದ್ಯುತ್‌ ಬೆಸ್ಕಾಂ ಮೂಲಕ ಪೂರೈಕೆಯಾಗುತ್ತಿದ್ದು, ಲಾಭ ಗಳಿಸಲು ವಿಫಲವಾಗಿರುವುದು ಕಳವಳಕಾರಿಯಾಗಿದೆ. ಈ ರೇಟಿಂಗ್ ವಿದ್ಯುತ್ ಕ್ಷೇತ್ರಕ್ಕೆ ಎಚ್ಚರಿಕೆ ಗಂಟೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಎಸ್ಕಾಂಗಳ ಮೇಲೆ ಪೂರ್ಣ ಮೇಲ್ವಿಚಾರಣಾ ಅಧಿಕಾರ ಇಲ್ಲ. ಹೆಸ್ಕಾಂ ಮತ್ತು ಗೆಸ್ಕಾಂಗಳಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ವಿದ್ಯುತ್ ಪೂರೈಕೆಯಾಗುವುದರಿಂದ ಆದಾಯ ಕಡಿಮೆ. ಐದು ಎಸ್ಕಾಂಗಳ ಹಣಕಾಸು ನಿರ್ವಹಣೆ ಮತ್ತು ಸಂಪನ್ಮೂಲ ಸಮಾನ ಹಂಚಿಕೆಗೆ ಒಗ್ಗಟ್ಟಿನ ಹೋಲ್ಡಿಂಗ್ ಕಂಪನಿ ಇಲ್ಲದಿರುವುದೂ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ವರದಿಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಯಿ ಮುಚ್ಚಿಕೊಂಡು ಇರಬೇಕೆಂಬ ಆದೇಶವನ್ನು ಎಲ್ಲರೂ ಪಾಲಿಸಬೇಕು: ನಾನು- ಸಿದ್ದರಾಮಯ್ಯ ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ; ಡಿಕೆ ಶಿವಕುಮಾರ್

T20 ವಿಶ್ವಕಪ್ 2026, ಪಾಕ್ ಗೆ ಮುಖಭಂಗ, ಕ್ಯಾಮರಾಕ್ಕೆ ಮುಖ ತೋರಿಸಲು ಹೆಣಗಾಡಿದ ಮೊಹ್ಸಿನ್ ನಖ್ವಿ! Video

ಅಧಿಕಾರ ಹಂಚಿಕೆ ಬಿಕ್ಕಟ್ಟು: ಸಿದ್ದು ಜೊತೆಗಿನ ಬಜೆಟ್ ಪೂರ್ವ ಭಾವಿ ಸಭೆ ಕೈಬಿಟ್ಟು, ದೆಹಲಿಗೆ ಡಿಕೆಶಿ ದಿಢೀರ್ ಪ್ರಯಾಣ!

25 ಲಕ್ಷ ಆಸ್ತಿಗಳ ಡಿಜಿಟಲೀಕರಣ, 9 ಲಕ್ಷ ಇ-ಖಾತೆಗಳ ಹಂಚಿಕೆ: 15 ದಿನದಲ್ಲಿ ಬಿ ಖಾತೆಯಿಂದ 'ಎ'ಗೆ ವರ್ಗಾವಣೆ; ಡಿ.ಕೆ. ಶಿವಕುಮಾರ್‌

"Explain Again": ತಮ್ಮದೇ ಸಚಿವರನ್ನು ಜಾಡಿಸಿದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್! ವಿಪಕ್ಷಗಳ ಪ್ರಶಂಸೆ, Video

SCROLL FOR NEXT