ಕ್ಯಾಬ್-ಆಟೋ ಪ್ರಯಾಣಿಕರಿಗೆ ಕಮಿಷನರ್ ಖಡಕ್ ಎಚ್ಚರಿಕೆ Online Desk
ರಾಜ್ಯ

ಕ್ಯಾಬ್-ಆಟೋ ಪ್ರಯಾಣಿಕರಿಗೆ ಕಮಿಷನರ್ ಎಚ್ಚರಿಕೆ; ಗಾಡಿ ನಂಬರ್ ಮ್ಯಾಚ್ ಆಗಿಲ್ಲ ಅಂದ್ರೆ ಟ್ರಾವೆಲ್ ಮಾಡಲೇಬೇಡಿ ಎಂದ ಸೀಮಂತ್ ಕುಮಾರ್

ರೈಡ್-ಹೇಲಿಂಗ್ ಅಪ್ಲಿಕೇಶನ್‌ಗಳಲ್ಲಿ ಬುಕ್ ಮಾಡಿದಾಗ ಆಪ್‌ನಲ್ಲಿ ಕಾಣಿಸುವ ವಾಹನದ ನಂಬರ್ ಒಂದು ಹಾಗು ಪಿಕ್ ಮಾಡಲು ಬರುವ ಗಾಡಿಯ ನಂಬರ್ ಮತ್ತೊಂದು ಎನ್ನುವ ಕಂಪ್ಲೇಂಟ್ ಸಾಕಷ್ಟು ಕೇಳಿ ಬರುತ್ತಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸಾರ್ವಜನಿಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ರೈಡ್-ಹೇಲಿಂಗ್ ಅಪ್ಲಿಕೇಶನ್‌ಗಳಲ್ಲಿ ಆಟೋ, ಕ್ಯಾಬ್ ಬುಕ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ, ಬುಕ್ ಮಾಡಿದಾಗ ಆಪ್‌ನಲ್ಲಿ ಕಾಣಿಸುವ ವಾಹನದ ನಂಬರ್ ಒಂದು ಹಾಗು ಪಿಕ್ ಮಾಡಲು ಬರುವ ಗಾಡಿಯ ನಂಬರ್ ಮತ್ತೊಂದು ಎನ್ನುವ ಕಂಪ್ಲೇಂಟ್ ಸಾಕಷ್ಟು ಕೇಳಿ ಬರುತ್ತಿದೆ. ಈ ಬಗ್ಗೆ ಸಾರ್ವಜನಿಕರಿಗೆ ಖಡಕ್ ಎಚ್ಚರಿಕೆ ನೀಡಿರುವ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, "ಪ್ರಯಾಣಿಕರು ಅಂತಹ ಪ್ರಕರಣಗಳನ್ನು ಪೊಲೀಸರಿಗೆ ವರದಿ ಮಾಡುವಂತೆ" ಒತ್ತಾಯಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಎಚ್ಚರಿಕೆ?

ನೀವು, ಕ್ಯಾಬ್ ಅಥವಾ ಆಟೋ ಬುಕ್ ಮಾಡಿದಾಗ, ಆಪ್‌ನಲ್ಲಿ ಬುಕ್ ಆಗುವ ನಂಬರ್ ಹಾಗು ಪಿಕ್ ಮಾಡಲು ಬರುವ ವಾಹನದ ನಂಬರ್ ಹೊಂದಾಣಿಕೆಯಾಗದಿದ್ದರೆ ಖಂಡಿತವಾಗಿಯೂ ಆ ವಾಹನವನ್ನು ಹತ್ತಬೇಡಿ. ಅದರಂತೆ, ಉಬರ್, ಓಲಾ, ರಾಪಿಡೊ, ನಮ್ಮ ಯಾತ್ರೆಯಂತಹ ರೈಡ್-ಹೇಲಿಂಗ್ ಆ್ಯಪ್‌ನಲ್ಲಿ ಕಾಣಿಸುವ ವಾಹನದ ನಂಬರ್ ಅಥವಾ ಚಾಲಕನ ಹೆಸರು, ನಿಮ್ಮ ಎದುರಿಗಿರುವ ವಾಹನಕ್ಕೆ ಹೊಂದಾಣಿಕೆಯಾಗದಿದ್ದರೆ ಯಾವುದೇ ಕಾರಣಕ್ಕೂ ಪ್ರಯಾಣ ಮಾಡಬೇಡಿ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಖಡಕ್ ಸೂಚನೆ ನೀಡಿದ್ದಾರೆ.

ಮುಂದುವರೆದು, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ರೈಡ್-ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸುರಕ್ಷತಾ ಕಾಳಜಿಗಳ ಕುರಿತು ಸಭೆಗಳನ್ನು ನಡೆಸುವುದನ್ನು ಮುಂದುವರಿಸಿದ್ದೇನೆ ಎಂದ ಸಿಂಗ್, ಪ್ರಯಾಣಿಕರು ಅಂತಹ ಪ್ರಕರಣಗಳನ್ನು ಪೊಲೀಸರಿಗೆ ವರದಿ ಮಾಡಿದರೆ, ನಾವು ದೂರು ದಾಖಲಿಸಿ ತನಿಖೆ ಮಾಡಬಹುದು ಎಂದು ತಿಳಿಸಿದ್ದಾರೆ.

ಯಾಕೆ ಪ್ರಯಾಣ ಮಾಡಬಾರದು?

ಆಪ್‌ನಲ್ಲಿ ದಾಖಲಾಗಿರದ ವಾಹನವನ್ನು ಹತ್ತಿದರೆ, ಆ್ಯಪ್‌ನ ಜಿಪಿಎಸ್ ಟ್ರ್ಯಾಕಿಂಗ್ ಮತ್ತು ತುರ್ತು ಎಸ್‌ಒಎಸ್ ವೈಶಿಷ್ಟ್ಯಗಳು ಕೆಲಸ ಮಾಡುವುದಿಲ್ಲ. ಜೊತೆಗೆ, ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ, ಈ ವಾಹನ ನಮ್ಮ ಸಿಸ್ಟಮ್ ಮೂಲಕ ಬುಕ್ ಆಗಿಲ್ಲ ಎಂದು ಹೇಳಿ ಆ್ಯಪ್ ಕಂಪನಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಬಹುದು.

ಅದರಲ್ಲೂ, ಸಿಂಗಲ್ ನಂಬರ್ ಪ್ಲೇಟ್ ದುರುಪಯೋಗಪಡಿಸಿಕೊಳ್ಳುವ ಅಥವಾ ಸೂಕ್ತ ಪರವಾನಗಿ ಮತ್ತು ಪೊಲೀಸ್ ವೆರಿಫಿಕೇಶನ್ ಇಲ್ಲದ ಚಾಲಕರು ಇಂತಹ ಕೃತ್ಯ ಎಸಗುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿದ BRICS; ಭಾರತಕ್ಕೆ ಅತಿ ದೊಡ್ಡ ರಾಜತಾಂತ್ರಿಕ ಗೆಲುವು!

'ಗ್ಲೋಬಲ್ ಸೌತ್' ನಿಯಮ-ರೂಪಿಸುವ ಶಕ್ತಿಯಾಗಬೇಕು, ಅದರ ನೇತೃತ್ವ ವಹಿಸಲು ಭಾರತ ಸಿದ್ಧ": BRICS ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

ಬೆಂಗಳೂರು: ಅನೈತಿಕ ಸಂಬಂಧಕ್ಕೆ ಗಂಡನ ಕೊಲೆ; ಮುಖ, ಮರ್ಮಾಂಗಕ್ಕೆ ಗಾಯ, ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಸಂಗತಿ!

'ಇನ್ನೂ ನಾಲ್ಕೈದು ಸಚಿವರ ಮೇಲೆ ED ದಾಳಿ ಹೇಳಿಕೆ': ಈ ರೀತಿಯ ರೇಡ್ ನಲ್ಲಿ ಅವರು ಪರಿಣಿತರು: CM ಡಿಕೆಶಿಗೆ ಮಾಜಿ ಸಚಿವ ಕೆಎನ್ ರಾಜಣ್ಣ ಟಾಂಗ್

ಟ್ರ್ಯಾಕ್ಟರ್‌ ಸಾಲ, ವರದಕ್ಷಿಣೆ ಕಿರುಕುಳ ಆರೋಪ; 10 ತಿಂಗಳ ಮದುವೆ, 5 ತಿಂಗಳ ಗರ್ಭಿಣಿ ದುರಂತ ಅಂತ್ಯ!