ಸಾಂದರ್ಭಿಕ ಚಿತ್ರ 
ರಾಜ್ಯ

ಫಿಟ್‌ನೆಸ್ ಸರ್ಟಿಫಿಕೇಟ್ ಶುಲ್ಕ 1 ಸಾವಿರದಿಂದ ಬರೋಬ್ಬರಿ 9,200 ರೂ ಗೆ ಏರಿಕೆ: ಬೆಂಗಳೂರು ಆಟೋ ಚಾಲಕರಿಗೆ ಆಘಾತ!

ಕಳೆದ ವರ್ಷ, ನಾನು ಕೇವಲ 1,000 ರೂ.ಗಳನ್ನು ಪಾವತಿಸಿದೆ. ಈ ವರ್ಷ 9,200 ರೂ.ಗಳನ್ನು ಶುಲ್ಕ ಏರಿಕೆ ಮಾಡಿದ್ದಾರೆ ಮಾರ್ಚ್‌ನಲ್ಲಿ ನಿಗದಿತ ಪರವಾನಗಿ ನವೀಕರಣಕ್ಕೆ ಕೆಲವು ದಿನಗಳ ಮೊದಲು ಅವರು ಪಾವತಿ ಮಾಡಿದ್ದಾಗಿ ತಿಳಿಸಿದ್ದಾರೆ.

ಬೆಂಗಳೂರು: 15 ವರ್ಷಕ್ಕಿಂತ ಹಳೆಯದಾದ ಆಟೋರಿಕ್ಷಾಗಳ ಫಿಟ್‌ನೆಸ್ ಪ್ರಮಾಣಪತ್ರ ಮತ್ತು ತಪಾಸಣಾ ಶುಲ್ಕವನ್ನು 1,000 ರೂ.ಗಳಿಂದ ಈಗ 9,200 ರೂ.ಗಳಿಗೆ ಹೆಚ್ಚಿಸಿರುವ ಸಂಂಧ ಆಟೋ ಚಾಲಕರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ತಮ್ಮೊಂದಿಗೆ ಚರ್ಚಿಸಿಲ್ಲ, ಅಥವಾ ಮುಂಚಿತವಾಗಿ ತಿಳಿಸಲಾಗಿಲ್ಲ ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಉಲ್ಲೇಖಿಸಿದರಷ್ಟೇ ಸಾಕಾಗುವುದಿಲ್ಲ , ಪರಿಷ್ಕರಣೆಯನ್ನು ಜಾರಿಗೆ ತರುವ ಮೊದಲು ಔಪಚಾರಿಕವಾಗಿ ತಿಳಿಸಬೇಕು ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಬೇಕು ಎಂದು ಅವರು ಒತ್ತಾಯಾಸಿದ್ದಾರೆ.

22 ವರ್ಷಗಳಿಂದ ಆಟೋರಿಕ್ಷಾವನ್ನು ಓಡಿಸುತ್ತಿರುವ ಚಂದ್ರೇಗೌಡ ಅವರು, 20 ವರ್ಷಗಳನ್ನು ದಾಟಿದ ತಮ್ಮ ವಾಹನದ ಎಫ್‌ಸಿಯನ್ನು ನವೀಕರಿಸಲು ಇತ್ತೀಚೆಗೆ 9,200 ರೂ.ಗಳನ್ನು ಪಾವತಿಸಿದ್ದೇನೆ ಎಂದು ಹೇಳಿದರು. ಕಳೆದ ವರ್ಷ, ನಾನು ಕೇವಲ 1,000 ರೂ.ಗಳನ್ನು ಪಾವತಿಸಿದೆ. ಈ ವರ್ಷ, ಅವರು 9,200 ರೂ.ಗಳನ್ನು ಶುಲ್ಕ ಜಾರಿ ಮಾಡಿದ್ದಾರೆ ಎಂದು ಅವರು ಹೇಳಿದರು, ಮಾರ್ಚ್‌ನಲ್ಲಿ ಅವರ ನಿಗದಿತ ನವೀಕರಣಕ್ಕೆ ಕೆಲವು ದಿನಗಳ ಮೊದಲು ಅವರು ಪಾವತಿ ಮಾಡಿದ್ದಾಗಿ ತಿಳಿಸಿದ್ದಾರೆ.

ನಾವು 1990 ರ ದಶಕದ ಆರಂಭದಿಂದಲೂ ಆಟೋಗಳನ್ನು ಓಡಿಸುತ್ತಿದ್ದೇವೆ. ಹೊಸ ವಾಹನವನ್ನು ಖರೀದಿಸುವುದು ನಮಗೆ ಸುಲಭವಲ್ಲ. ಬ್ಯಾಂಕ್‌ಗಳು ಹಳೆಯ ಚಾಲಕರಿಗೆ ಸಾಲ ನೀಡಲು ಹಿಂಜರಿಯುತ್ತವೆ ಎಂದು ಚಂದ್ರೇಗೌಡ ಹೇಳಿದರು, ಕಡಿಮೆ ಎಫ್‌ಸಿ ಶುಲ್ಕವನ್ನು ಪಾವತಿಸಲು ಹೊಸ ಆಟೋ ಖರೀದಿಸಲು ಸಾಧ್ಯವಾಗದೆ ಸಿಲುಕಿಕೊಂಡಿರುವ ತಮ್ಮ ಸ್ಥಿತಿಯ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

1991 ರಿಂದ ಆಟೋರಿಕ್ಷಾ ಓಡಿಸುತ್ತಿರುವ ವಾಸುದೇವ್ ಕೆ, ವಿದ್ಯುತ್ ಚಾಲಿತ ವಾಹನಕ್ಕೆ ಪರಿವರ್ತಿಸಲಾದ ತಮ್ಮ 2004 ಮಾದರಿಯ ವಾಹನದ ಎಫ್‌ಸಿಯನ್ನು ನವೀಕರಿಸಲು ತನಗೂ 9,200 ರೂ. ಶುಲ್ಕ ವಿಧಿಸಲಾಗಿದೆ ಎಂದು ಹೇಳಿದರು.

ಕಳೆದ ವರ್ಷದವರೆಗೆ, ಅವರು ಇವಿ ಪರಿವರ್ತನೆಗಾಗಿ 600 ರೂ. ಜೊತೆಗೆ 200 ರೂ. ಪಾವತಿಸಿದರು, ಒಟ್ಟು 800 ರೂ. ಹಣ ಪಾವತಿಸಿದ್ದಾಗಿ ತಿಳಿಸಿದ್ದಾರೆ. ನಾನು ಇಷ್ಟು ಹೆಚ್ಚಿನ ಮೊತ್ತವನ್ನು ಪಾವತಿಸಿದ್ದು ಇದೇ ಮೊದಲು. ಯಾವುದೇ ಅಧಿಕೃತ ಪೂರ್ವ ಸೂಚನೆ ಇರಲಿಲ್ಲ" ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಫೆಬ್ರವರಿಯಲ್ಲಿ ಅವರ ಎಫ್‌ಸಿ ನವೀಕರಣ ಬಾಕಿ ಇರುವುದರಿಂದ, ಮಾನ್ಯ ಪ್ರಮಾಣಪತ್ರವಿಲ್ಲದೆ ಕಾರ್ಯನಿರ್ವಹಿಸುವುದರಿಂದ ಭಾರೀ ದಂಡ ವಿಧಿಸಲಾಗುವುದರಿಂದ ಪಾವತಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ವಾಸುದೇವ್ ಹೇಳಿದರು.

ಆಟೋರಿಕ್ಷಾ ಚಾಲಕರ ಒಕ್ಕೂಟದ (ARDU) ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಮಾತನಾಡಿ, ಈ ಹೆಚ್ಚಳವು ಅತಿಯಾದದ್ದು ಮತ್ತು ಹಠಾತ್ತನೆ ಜಾರಿಗೆ ತರಲಾಗಿದೆ ಎಂದು ಆರೋಪಿಸಿದರು. ಹೊಸ ವಾಹನಗಳ ತಪಾಸಣಾ ಶುಲ್ಕವನ್ನು 600 ರೂ.ಗಳಿಂದ 800 ರೂ.ಗಳಿಗೆ ಮತ್ತು ಎಂಟು ವರ್ಷಗಳ ನಂತರ 800 ರೂ.ಗಳಿಂದ 1,000 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ಆದರೆ 15 ವರ್ಷಗಳನ್ನು ಪೂರ್ಣಗೊಳಿಸಿದ ವಾಹನಗಳಿಗೆ ಈಗ ಸುಮಾರು 4,500 ರೂ.ಗಳನ್ನು ವಿಧಿಸಲಾಗುತ್ತಿದೆ, ಆದರೆ 20 ವರ್ಷಕ್ಕಿಂತ ಮೇಲ್ಪಟ್ಟ ವಾಹನಗಳಿಗೆ 9,200 ರೂ.ಗಳನ್ನು ಪಾವತಿಸಲಾಗುತ್ತಿದೆ ಎಂದಿದ್ದಾರೆ.

ಅಧಿಕಾರಿಗಳು ಉಲ್ಲೇಖಿಸಿದ ನಿಬಂಧನೆಗಳ ಅಡಿಯಲ್ಲಿ, ಅಂತಹ ಯಾವುದೇ ಬದಲಾವಣೆಯನ್ನು ತರುವ ಮೊದಲು ರಾಜ್ಯ ಮಟ್ಟದಲ್ಲಿ ಚರ್ಚಿಸಬೇಕು, ಔಪಚಾರಿಕವಾಗಿ ತಿಳಿಸಬೇಕು. ಜಾರಿಗೊಳಿಸುವ ಮೊದಲು ಆಕ್ಷೇಪಣೆಗಳನ್ನು ಆಹ್ವಾನಿಸಬೇಕು ಎಂದು ಅವರು ವಾದಿಸಿದರು.

ಸಾಮಾನ್ಯ ಅಧಿಸೂಚನೆ ಇರಬೇಕು, ಸಾರ್ವಜನಿಕ ಆಕ್ಷೇಪಣೆಗಳನ್ನು ಕರೆಯಬೇಕು ಅನಂತರ ಮಾತ್ರ ಪರಿಷ್ಕೃತ ದರಗಳನ್ನು ನಿಗದಿಪಡಿಸಬೇಕು. ಅದನ್ನು ಏಕಪಕ್ಷೀಯವಾಗಿ ಹೇಗೆ ಕಾರ್ಯಗತಗೊಳಿಸಬಹುದು ಎಂದು ಅವರು ಪ್ರಶ್ನಿಸಿದರು.

ಪರಿಷ್ಕೃತ ದರಗಳನ್ನು ಸೆಪ್ಟೆಂಬರ್ 18 ರಂದು ಘೋಷಿಸಲಾಗಿದೆ ಎಂದು ವರದಿಯಾಗಿದೆ, ಅಧಿಕಾರಿಗಳು ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಉಲ್ಲೇಖಿಸಿದ್ದಾರೆ. ಸ್ಪಷ್ಟೀಕರಣಕ್ಕಾಗಿ ಸಾರಿಗೆ ಇಲಾಖೆಯ ಅಧಿಕಾರಿಯನ್ನು TNIE ಸಂಪರ್ಕಿಸಿದಾಗ, ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

‘ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

ಸತತ 4ನೇ ಬಾರಿ CNG ದರ ಏರಿಕೆ: ಕೆಜಿಗೆ 2 ರೂ. ಹೆಚ್ಚಳ, ವಾಹನ ಸವಾರರಿಗೆ ಶಾಕ್‌

ಗೃಹಲಕ್ಷ್ಮಿ ಯೋಜನೆಯಲ್ಲಿ 100 ಕೋಟಿ ರೂ.ದುರ್ಬಳಕೆ: ಫಲಾನುಭವಿಗಳ ಮರುಪರಿಶೀಲನೆಗೆ ಸರ್ಕಾರ ಚಿಂತನೆ..!

Main Tera Hero: ರಿರಿಲೀಸ್; ಗರ್ಲ್ ಫ್ರೆಂಡ್ ಗಾಗಿ ಅಭಿಮಾನಿಯ ಡ್ಯಾನ್ಸ್ , ವಿಡಿಯೋ ವೈರಲ್, ವರುಣ್ ಧವನ್ ಹೇಳಿದ್ದೇನು?

ವಿಜಯ್ ಸಿಎಂ ಆಗುತ್ತಿದ್ದಂತೆಯೇ ಆಂಧ್ರದಲ್ಲಿ ಗಂಭೀರವಾದ DCM ಪವನ್ ಕಲ್ಯಾಣ್ ! JSP ಕಾರ್ಯಕರ್ತರಿಗೆ ಖಡಕ್ ಸೂಚನೆ

SCROLL FOR NEXT