ಬಜ್‌ಬಾಲ್ಜ್ (ಸಂಗ್ರಹ ಚಿತ್ರ) 
ರಾಜ್ಯ

ಶಾಲೆ–ಕಾಲೇಜುಗಳ ಬಳಿ BuzzBallz ಮಾರಾಟ: ಮಕ್ಕಳ ಆಯೋಗ ಆತಂಕ; ಕಂಪನಿ ಸ್ಪಷ್ಟನೆ

ಶಾಲೆ ಮತ್ತು ಕಾಲೇಜುಗಳ ಸುತ್ತಮುತ್ತಲಿನ ಅಂಗಡಿಗಳಲ್ಲಿ ಈ ಪಾನೀಯ ಸುಲಭವಾಗಿ ಲಭ್ಯವಾಗುತ್ತಿದೆ ಎಂಬ ವರದಿಗಳು ಹೊರಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ವಿಷಯಗಳಲ್ಲಿ ಒಂದು ‘BuzzBallz’ (ಬಜ್‌ಬಾಲ್ಜ್) ಎಂಬ ಪಾನೀಯ. ಜ್ಯೂಸ್ ಮಾದರಿಯಲ್ಲಿ ಕಾಣುವ ಈ ಪಾನೀಯದಲ್ಲಿ ಸುಮಾರು 15 ಶೇಕಡಾ ಮದ್ಯಾಂಶವಿದೆ ಎನ್ನಲಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಇದು ಜನಪ್ರಿಯವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಶಾಲೆ ಮತ್ತು ಕಾಲೇಜುಗಳ ಸುತ್ತಮುತ್ತಲಿನ ಅಂಗಡಿಗಳಲ್ಲಿ ಈ ಪಾನೀಯ ಸುಲಭವಾಗಿ ಲಭ್ಯವಾಗುತ್ತಿದೆ ಎಂಬ ವರದಿಗಳು ಹೊರಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.

‘BuzzBallz’ ಪಾನೀಯವನ್ನು ಸಾಮಾನ್ಯವಾಗಿ ವೋಡ್ಕಾ, ಟ್ರಾಪಿಕಲ್ ಹಣ್ಣಿನ ಜ್ಯೂಸ್, ನೈಸರ್ಗಿಕ ಹಾಗೂ ಕೃತಕ ಸುವಾಸನೆಗಳು ಮತ್ತು ಬಣ್ಣಗಳನ್ನು ಬಳಸಿ ತಯಾರಿಸಲಾಗುತ್ತದೆ. ವಿವಿಧ ರುಚಿಗಳಲ್ಲಿ ಲಭ್ಯವಾಗುವ ಈ ಪಾನೀಯವು ಜ್ಯೂಸ್ ಅಥವಾ ಎನರ್ಜಿ ಡ್ರಿಂಕ್‌ನಂತೆ ಕಾಣುವುದರಿಂದ ಯುವಕರನ್ನು ಸುಲಭವಾಗಿ ಆಕರ್ಷಿಸುತ್ತದೆ. ಆದರೆ, ಇದರಲ್ಲಿರುವ ಮದ್ಯಾಂಶ ಮತ್ತು ಹೆಚ್ಚು ಸಕ್ಕರೆ ಪ್ರಮಾಣವಿದ್ದು, ಇದು ಆರೋಗ್ಯಕ್ಕೆ ಅಪಾಯಕಾರಿಯಾಗಿದೆ.

ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಇಂತಹ ಪಾನೀಯಗಳ ಬಳಕೆ ಹೆಚ್ಚಾದರೆ ಅದು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಮದ್ಯದ ಬಗ್ಗೆ ಅರಿವು ಇಲ್ಲದ ವಿದ್ಯಾರ್ಥಿಗಳು ಜ್ಯೂಸ್ ಎಂದು ಭಾವಿಸಿ ಈ ಪಾನೀಯವನ್ನು ಸೇವಿಸುವ ಸಾಧ್ಯತೆಯೂ ಇದೆ. ಇದು ನಿಧಾನವಾಗಿ ವ್ಯಸನಕ್ಕೆ ಕಾರಣವಾಗುವ ಅಪಾಯವಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಎಚ್ಚರಿಸಿದೆ.

ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತ ವಿದ್ಯಾರ್ಥಿಗಳ ಸಂಚಾರ ಹೆಚ್ಚು ಇರುವ ಪ್ರದೇಶಗಳಲ್ಲಿ ಈ ಪಾನೀಯ ಸುಲಭವಾಗಿ ಲಭ್ಯವಾಗುತ್ತಿರುವುದರ ಬಗ್ಗೆ ಆಯೋಗ ಆತಂಕ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಆಯೋಗವು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಪಾನೀಯದ ಮಾದರಿಯನ್ನು ಪರೀಕ್ಷಿಸಲು ಸೂಚಿಸಿದೆ. ಅದರಲ್ಲಿರುವ ಮದ್ಯಾಂಶ ಮತ್ತು ಇತರ ಅಂಶಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ವರದಿ ನೀಡಲು ಐದು ದಿನಗಳ ಗಡುವು ನೀಡಿದೆ.

ಪಾನೀಯವು ಹಾನಿಕಾರಕ ಎಂದು ಕಂಡುಬಂದರೆ ಅದರ ಮಾರಾಟಕ್ಕೆ ನಿರ್ಬಂಧ ಅಥವಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಆಯೋಗದ ಅಧ್ಯಕ್ಷ ಶಶಿಧರ್ ಕೊಸಾಂಬೆ ಮಾತನಾಡಿ, ಇಂತಹ ಹೆಚ್ಚು ಮದ್ಯಾಂಶ ಇರುವ ಪಾನೀಯಗಳನ್ನು ವಿಶೇಷವಾಗಿ ಶಾಲೆ-ಕಾಲೇಜುಗಳ ಸಮೀಪ ಮಾರಾಟ ಮಾಡಬಾರದು ಎಂದು ಹೇಳಿದ್ದಾರೆ.

ಮಕ್ಕಳ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತ ಇಂತಹ ಮದ್ಯಾಂಶವಿರುವ ಪಾನೀಯಗಳ ಮಾರಾಟವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದು ಅತ್ಯಂತ ಅಗತ್ಯವಿದೆ.

ಪೋಷಕರು, ಶಿಕ್ಷಕರು ಮತ್ತು ಸಮಾಜದ ಎಲ್ಲ ವರ್ಗಗಳು ವಿದ್ಯಾರ್ಥಿಗಳಲ್ಲಿ ಇಂತಹ ಪಾನೀಯಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಇಲ್ಲವಾದರೆ ಜ್ಯೂಸ್‌ನಂತೆ ಕಾಣುವ ಮದ್ಯಪಾನೀಯಗಳು ಯುವಪೀಳಿಗೆಯ ಆರೋಗ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ.

ಅನುಮತಿ ಪಡೆದ ಅಂಗಡಿಗಳಷ್ಟೇ ವಿತರಣೆ: BuzzBallz ಸ್ಪಷ್ಟನೆ

ಈ ನಡುವೆ ತನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು BuzzBallz ಕಂಪನಿ ನಿರಾಕರಿಸಿದ್ದು, ಬಝ್‌ಬಾಲ್ಜ್ ಒಂದು ಸುವಾಸನೆಯುಕ್ತ ಮದ್ಯ ಪಾನೀಯವಾಗಿದ್ದು, ಎಲ್ಲಾ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ (FSSAI) ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸುತ್ತದೆ ಎಂದು ಹೇಳಿದೆ.

ಅಧಿಕಾರಿಗಳು ಬಳಕೆಗೆ ಸೂಕ್ತವೆಂದು ಪ್ರಮಾಣೀಕರಿಸಿದ್ದು, ಎಂದಿಗೂ ತಂಪು ಪಾನೀಯವಾಗಿ ಮಾರಾಟ ಮಾಡಲಾಗಿಲ್ಲ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಈ ಪಾನೀಯವನ್ನು ಕೇವಲ ಮದ್ಯ ಮಾರಾಟಕ್ಕೆ ಅನುಮತಿ ಪಡೆದ ಅಂಗಡಿಗಳ ಮೂಲಕವೇ ವಿತರಿಸಲಾಗುತ್ತದೆ ಮತ್ತು ಕಾನೂನುಬದ್ಧ ಮದ್ಯಪಾನದ ವಯಸ್ಸು ಹೊಂದಿರುವವರಿಗಷ್ಟೇ ಮಾರಾಟ ಮಾಡಲಾಗುತ್ತದೆ ಎಂದು ಕಂಪನಿ ಹೇಳಿದೆ.

ಇದಲ್ಲದೆ ಜವಾಬ್ದಾರಿಯುತ ಮದ್ಯಪಾನವನ್ನು ಉತ್ತೇಜಿಸುವುದೇ ಕಂಪನಿಯ ಉದ್ದೇಶವಾಗಿದ್ದು, ಅತಿಯಾದ ಅಥವಾ ಅಸಮರ್ಪಕ ಮದ್ಯಪಾನವನ್ನು ಪ್ರೋತ್ಸಾಹಿಸುವುದಿಲ್ಲ ಎಂದು ತಿಳಿಸಿದೆ.

ಯುಕೆ, ಮೆಕ್ಸಿಕೋ ಮತ್ತು ಐರ್ಲೆಂಡ್ ದೇಶಗಳಲ್ಲಿ ಈಗಾಗಲೇ ಜನಪ್ರಿಯವಾಗಿರುವ ‘BuzzBallz’ ಕಾಕ್‌ಟೇಲ್ ಬ್ರ್ಯಾಂಡ್, ಕಳೆದ ಡಿಸೆಂಬರ್‌ನಲ್ಲಿ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದೆ.

ಪ್ರಸ್ತುತ ಇದು ಬೆಂಗಳೂರಿನಲ್ಲಿ ಮಾತ್ರ 180 ಮಿ.ಲೀ. ಚೆಂಡಿನ ಆಕಾರದ ಪ್ಯಾಕ್‌ಗಳಲ್ಲಿ, ಸುಮಾರು 15 ಶೇಕಡಾ ಮದ್ಯಾಂಶ ದೊಂದಿಗೆ ರೂ.100 ದರದಲ್ಲಿ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಇತರ ನಗರಗಳಿಗೂ ವಿಸ್ತರಿಸುವ ಯೋಜನೆಯನ್ನು ಕಂಪನಿ ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಕ್ಕಳ ಸಾವಿಗೆ ಪ್ರತೀಕಾರ: ಇಸ್ರೇಲ್-ಅಮೆರಿಕ, ಗಲ್ಫ್ ದೇಶಗಳ ಮೇಲೆ ದಾಳಿ ನಿಲ್ಲಲ್ಲ; ಇರಾನ್ ಹೊಸ ಸರ್ವೋಚ್ಛ ನಾಯಕ ವಾರ್ನಿಂಗ್!

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

ನಮ್ಮ ಶಕ್ತಿ ಇರಾನ್ ನಿರ್ನಾಮಕ್ಕೆ ಮೀಸಲು, ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲ್ಲ: ಅಮೆರಿಕ

ಮಾರ್ಚ್ 16 ರಂದು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಘೋಷಣೆ ಸಾಧ್ಯತೆ

SCROLL FOR NEXT