ಬೆಂಗಳೂರು: ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದ ಪತ್ನಿಯೇ ತನ್ನ ಸ್ನೇಹಿತೆಯರ ಜೊತೆ ಮಲಗುವಂತೆ ಪತಿಗೆ ಒತ್ತಾಯಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪತ್ನಿಯ ಹುಚ್ಚಾಟಕ್ಕೆ ಬೇಸತ್ತು ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಈ ಕಾಲದಲ್ಲಿ ಸೆಕ್ಸ್ ಅನ್ನುವುದು ಕಾಮನ್. ನಾನು ಮದುವೆಗೂ ಮುನ್ನ ಹಲವರ ಜೊತೆ ಸಂಬಂಧ ಇಟ್ಟುಕೊಂಡಿದ್ದೆ. ನೀನು ಸಹ ನನ್ನ ಸ್ನೇಹಿತೆಯ ಜೊತೆ ಸೆಕ್ಸ್ ಮಾಡುವಂತೆ ಪತ್ನಿ ಟಾರ್ಚರ್ ನೀಡುತ್ತಿದ್ದಾಳೆ ಎಂದು ಪತಿ ಅಮೃತಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾನೆ. ಆಕೆ ಹೇಳಿದಂತೆ ಕೇಳದಿದ್ದಾಗ ಕಿರುಕುಳ ನೀಡಿ ಹಿಂಸಿಸುತ್ತಿದ್ದಾಳೆ ಎಂದು ಪತಿ ದೂರಿದ್ದಾರೆ. ಇದೇ ವಿಚಾರವಾಗಿ ಈ ಹಿಂದೆ ಕೆಲವು ಸಲ ರಾಜಿ ಪಂಚಾಯ್ತಿ ಮಾಡಲಾಗಿತ್ತು ಎಂದು ಹೇಳಿದರು.