ಹಲ್ಲೆ (ಸಾಂಕೇತಿಕ ಚಿತ್ರ) online desk
ರಾಜ್ಯ

ತಮಿಳುನಾಡಿಗೆ ಹೋಗ್ತೀನೆಂದು ಸುಳ್ಳು ಹೇಳಿ ಮಗಳ ಪ್ರಿಯಕರನಿಗೆ ಟ್ರ್ಯಾಪ್ ಇಟ್ಟ ತಂದೆ; ರೂಮಿನಲ್ಲಿ ಕೂಡಿಹಾಕಿ ಭೀಕರ ಹತ್ಯೆ..!

ಆರೋಪಿಯ ಮಗಳು ಕಿರಣ್ ಜೊತೆ ಆತ್ಮೀಯ ಸಂಬಂಧ ಹೊಂದಿದ್ದಳು ಎಂಬುದು ಆತನ ಗಮನಕ್ಕೆ ಬಂದಿತ್ತು. ಈ ನಡುವೆ ಮಂಗಳವಾರ ಆನಂದರಾಜ್ ತನ್ನ ಪತ್ನಿಯೊಂದಿಗೆ ತಮಿಳುನಾಡಿಗೆ ಹೋಗುತ್ತಿದ್ದು ರಾತ್ರಿ ವಾಪಸ್ ಬರುವುದಾಗಿ ಮಗಳಿಗೆ ತಿಳಿಸಿದ್ದಾನೆ.

ಬೆಂಗಳೂರು: ತನ್ನ ಮಗಳನ್ನು ಪ್ರೀತಿಸುತ್ತಿದ್ದ ಸ್ವಂತ ಉದ್ಯೋಗಿಯನ್ನು ಮಾಲೀಕನೊಬ್ಬ ಕ್ರಿಕೆಟ್ ಬ್ಯಾಟ್ ಹಾಗೂ ಕಬ್ಬಿಣದ ಪೈಪ್‌ನಿಂದ ಹೊಡೆದು ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಕೊಗಿಲು ಕ್ರಾಸ್ ಸಮೀಪ ಮಂಗಳವಾರ ಮಧ್ಯಾಹ್ನ ನಡೆದಿದೆ.

ಮೃತನನ್ನು ಕೇರಳ ಮೂಲದ ಕಿರಣ್ (24) ಎಂದು ಗುರುತಿಸಲಾಗಿದೆ. ತಮಿಳುನಾಡು ಮೂಲದ ಆನಂದರಾಜ್ (45) ಎಂಬಾತ ಕೊಲೆ ಆರೋಪಿಯಾಗಿದ್ದು, ಕೊಗಿಲು ಮುಖ್ಯರಸ್ತೆಯಲ್ಲಿ ತಳ್ಳುಗಾಡಿ ತಯಾರಿಕಾ ಘಟಕ ನಡೆಸುತ್ತಿದ್ದಾನೆಂದು ತಿಳಿದುಬಂದಿದೆ.

ಕಿರಣ್ ಕಳೆದ ಕೆಲವು ವರ್ಷಗಳಿಂದ ಆತನ ಬಳಿ ಕೆಲಸ ಮಾಡುತ್ತಿದ್ದ. ಆನಂದರಾಜ್‌ನ 19 ವರ್ಷದ ಹಿರಿಯ ಮಗಳು ಮೈಸೂರಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ರಜೆ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದಳು.

ಆರೋಪಿಯ ಮಗಳು ಕಿರಣ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳೆಂಬುದು ಆತನ ಗಮನಕ್ಕೆ ಬಂದಿತ್ತು. ಈ ನಡುವೆ ಮಂಗಳವಾರ ಆನಂದರಾಜ್ ತನ್ನ ಪತ್ನಿಯೊಂದಿಗೆ ತಮಿಳುನಾಡಿಗೆ ಹೋಗುತ್ತಿದ್ದು ರಾತ್ರಿ ವಾಪಸ್ ಬರುವುದಾಗಿ ಮಗಳಿಗೆ ತಿಳಿಸಿದ್ದಾನೆ. ಆದರೆ, ಕೆಲವೇ ಗಂಟೆಗಳಲ್ಲಿ ದಂಪತಿ ಮನೆಗೆ ಮರಳಿದ್ದು, ಈ ವೇಳೆ ಮಗಳು ಕಿರಣ್ ಜೊತೆಗಿರುವುದು ಕಂಡುಬಂದಿದೆ.

ಇದರಿಂದ ಆಕ್ರೋಶಗೊಂಡ ಆನಂದರಾಜ್, ಮಗಳನ್ನು ತಾಯಿಯೊಂದಿಗೆ ಚಿಕ್ಕಬಳ್ಳಾಪುರದಲ್ಲಿರುವ ಸಂಬಂಧಿಕರ ಮನೆಗೆ ಕಳುಹಿಸಿದ್ದಾನೆ. ಬಳಿಕ ಕಿರಣ್‌ನನ್ನು ಮನೆಯೊಳಗೆ ಕೂಡಿ ಹಾಕಿ ಕ್ರಿಕೆಟ್ ಬ್ಯಾಟ್ ಹಾಗೂ ಕಬ್ಬಿಣದ ಪೈಪ್‌ನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ.

ಹಲ್ಲೆಯಿಂದ ಕಿರಣ್‌ನ ಕಾಲು, ಕೈ ಮತ್ತು ಹೊಟ್ಟೆಗೆ ತೀವ್ರ ಗಾಯಗಳಾಗಿದ್ದು, ಆತ ಕುಸಿದು ಬಿದ್ದಿದ್ದಾನೆ. ಬಳಿಕ ಆನಂದರಾಜ್ ಆಟೊರಿಕ್ಷಾದಲ್ಲಿ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ, ಅಷ್ಟರಲ್ಲಾಗಲೇ ಕಿರಣ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಆಸ್ಪತ್ರೆಯಿಂದ ಬಂದ ವೈದ್ಯಕೀಯ-ಕಾನೂನು ಪ್ರಕರಣದ ಮಾಹಿತಿ ಆಧರಿಸಿ ಘಟನೆ ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಹಿತಿ ಪಡೆದ ಯಲಹಂಕ ಪೊಲೀಸರು ಆಸ್ಪತ್ರೆಗೆ ಧಾವಿಸಿದಾಗ ಕಿರಣ್ ಮೃತಪಟ್ಟಿರುವುದು ದೃಢಪಟ್ಟಿದೆ. ಬಳಿಕ ಆನಂದರಾಜ್‌ನನ್ನು ಬಂಧಿಸಲಾಗಿದೆ.

ಇದೇ ವೇಳೆ, ಯುವತಿಯ ವಯಸ್ಸಿನ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಹುಮಟ್ಟಿಗೆ ನಿಜ': ಮಧ್ಯಂತರ ಚುನಾವಣೆ ಮೇಲೆ ಇರಾನ್ ಯುದ್ಧ ಪರಿಣಾಮ ಬೀರಿದೆ, ಆದರೆ ಅನಿವಾರ್ಯವಾಗಿತ್ತು': ಡೊನಾಲ್ಡ್ ಟ್ರಂಪ್

ಕರ್ನಾಟಕದ ಬರ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ: ಜಲ ಸಂರಕ್ಷಣೆ, ಬರ ನಿರ್ವಹಣೆಗೆ ಕೇಂದ್ರ-ರಾಜ್ಯ ಒಗ್ಗೂಡಿ ಕೆಲಸ ಮಾಡೋಣ: ಸಿಎಂ ಡಿಕೆಶಿಗೆ ಪ್ರಧಾನಿ ಮೋದಿ ಪತ್ರ..!

ಆಡಳಿತ ವ್ಯವಸ್ಥೆ ನಿದ್ದೆಗೆ ಜಾರಿದೆಯೇ..? ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರಸ್ತೆಗಿಳಿದ ವಿದ್ಯಾರ್ಥಿಗಳು; ಕೈಯಲ್ಲಿ ಸಲಿಕೆ ಹಿಡಿದು ತಾವೇ ಗುಂಡಿ ಮುಚ್ಚಿದ ಮಕ್ಕಳು..!

ಹಾಲಿನ ದರ ಏರಿಕೆಯ ₹8ರಲ್ಲಿ ₹7 ರೈತರಿಗೇ ಸಿಗಲಿದೆ, ರೈತರ ಹಿತಕ್ಕಾಗಿ ಬೆಲೆ ಏರಿಕೆ ಅನಿವಾರ್ಯ: ಬೆಲೆ ಏರಿಕೆ ಸಮರ್ಥಿಸಿಕೊಂಡ ಡಿಕೆ ಸುರೇಶ್

ರೈತರು-ಸಕ್ಕರೆ ಕಾರ್ಖಾನೆಗಳ ನಡುವೆ ಸಂಘರ್ಷ ಅಂತ್ಯ: ಪ್ರತಿ ಟನ್‌ ಕಬ್ಬಿಗೆ 3600 ರೂ. ದರ ನಿಗದಿ- ಸಚಿವ ಸತೀಶ್‌ ಜಾರಕಿಹೊಳಿ