ಸಮೀರ್ ಮುಲ್ಲಾ ಬಂಧಿತ ಆರೋಪಿ 
ರಾಜ್ಯ

ವಿಜಯಪುರ ಕೊಲೆ ಪ್ರಕರಣ: ಪ್ರಮುಖ ಆರೋಪಿ ಸಮೀರ್ ಮುಲ್ಲಾನ ಕಾಲಿಗೆ ಗುಂಡಿಕ್ಕಿ ಬಂಧನ, ಪೊಲೀಸ್ ಸಿಬ್ಬಂದಿಗೆ ಗಾಯ!

ಸಮೀರ್ ಮುಲ್ಲಾ ಬಂಧಿತ ಆರೋಪಿ. ಬಂಧನ ಕಾರ್ಯಾಚರಣೆ ವೇಳೆ ಪಿಸ್ತೂಲ್ ತೋರಿಸಲು ಆರೋಪಿ ಸಮೀರ್ ಪರಾರಿಯಾಗಲು ಯತ್ನಿಸಿದ್ದಾನೆ, ಈ ವೇಳೆ ಪೊಲೀಸರು ಮುಲ್ಲಾನ ಕಾಲಿಗೆ ಗುಂಡು ಹಾರಿಸಿದ್ದಾರೆ.

ವಿಜಯಪುರ: ಎರಡು ದಿನಗಳ ಹಿಂದೆ ನಗರದ ಗಾಂಧಿ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡೇವಾಡಿ ಆಸ್ಪತ್ರೆ ಹತ್ತಿರ ನಡೆದಿದ್ದ ಗುಂಡಿನ ದಾಳಿ ಹಾಗೂ ಯಾಸೀನ್ ಝಬೇರ್ ಎಂಬಾತನ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯ ಕಾಲಿಗೆ ಗುಂಡಿಕ್ಕಿ ಪೊಲೀಸರು ಬಂಧಿಸಿದ್ದಾರೆ.

ಸಮೀರ್ ಮುಲ್ಲಾ ಬಂಧಿತ ಆರೋಪಿ. ಬಂಧನ ಕಾರ್ಯಾಚರಣೆ ವೇಳೆ ಪಿಸ್ತೂಲ್ ತೋರಿಸಲು ಆರೋಪಿ ಸಮೀರ್ ಪರಾರಿಯಾಗಲು ಯತ್ನಿಸಿದ್ದಾನೆ, ಈ ವೇಳೆ ಪೊಲೀಸರು ಮುಲ್ಲಾನ ಕಾಲಿಗೆ ಗುಂಡು ಹಾರಿಸಿದ್ದಾರೆ. ಈ ವೇಳೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಓರ್ವ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಸದ್ಯ. ಗಾಯಗೊಂಡ ಆರೋಪಿ ಮತ್ತು ಪೊಲೀಸ್ ಸಿಬ್ಬಂದಿ ಇಬ್ಬರೂ ಪ್ರಸ್ತುತ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ವಿಜಯಪುರ ತಾಲೂಕಿನ ಟಕ್ಕೇ ಗ್ರಾಮದ ನಿವಾಸಿ ಯಾಸೀನ್ ಝಬೇರ್ ಎಂಬಾತನನ್ನು ನವೆಂಬರ್ 5ರ ಸಂಜೆ ಮುಂಡೆವಾಡಿ ಆಸ್ಪತ್ರೆಯ ಹೊರಗೆ ದುಷ್ಕರ್ಮಿಗಳ ಗುಂಪೊಂದು ಗುಂಡಿಕ್ಕಿ ಕೊಂದಿತ್ತು. ತನ್ನ ಪತ್ನಿಗೆ ವೈದ್ಯಕೀಯ ತಪಾಸಣೆ ಮಾಡಿಸಿ ಆಸ್ಪತ್ರೆಯಿಂದ ಹೊರಬರುತ್ತಿದ್ದಾಗ ಈ ಘಟನೆ ನಡೆದಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಲಕ್ಷ್ಮಣ ಬಿ. ನಿಂಬರಗಿ ಮಾತನಾಡಿ, ಝುಬೇರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರು ಶಂಕಿತರನ್ನು ಗುರುತಿಸಲಾಗಿದ್ದು, ಅವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಮೃತ ಝುಬೇರ್ ಮತ್ತು ಆರೋಪಿ ಮುಲ್ಲಾ ಒಂದೇ ಊರಿನವರಾಗಿದ್ದು, ಪರಸ್ಪರ ಪರಿಚಯಸ್ಥರಾಗಿದ್ದರು. ಉರೂಸ್ ಕಾರ್ಯಕ್ರಮದ ವೇಳೆ ಸೌಂಡ್ ಬಾಕ್ಸ್ ವಿಚಾರವಾಗಿ ಝುಬೇರ್ ಹಾಗೂ ಸಮೀರ್ ಮುಲ್ಲಾ ತಂಡಗಳ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಯಾಸೀನ್ ಹಾಗೂ ತಂಡವು ಸಮೀರ್ ಮುಲ್ಲಾ ಮತ್ತು ತಂಡದ ಮೇಲೆ ಹಲ್ಲೆ ನಡೆಸಿತ್ತು. ಈ ಸಂಬಂಧ ಅಕ್ಟೋಬರ್ 19 ರಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಯಾಸೀನ್ ಸೇರಿದಂತೆ ನಾಲ್ವರ ಬಂಧನವಾಗಿತ್ತು. ಆದರೆ, ಯಾಸಿನ್ ಅಕ್ಟೋಬರ್ 25ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಗಲಾಟೆ ಹಿನ್ನೆಲೆಯಲ್ಲಿ ಯಾಸೀನ್ ಝುಬೇರ್ ಮೇಲೆ ಸಮೀರ್ ಮುಲ್ಲಾ ಹಾಗೂ ಆತನ ಸಹಚರರು ನ.5 ರಂದು ಪ್ರತೀಕಾರದ ದಾಳಿ ನಡೆಸಿದ್ದಾರೆ. ಅಂದು ಮುಂಡೇವಾಡಿ ಆಸ್ಪತ್ರೆ ಬಳಿ ಪತ್ನಿಯೊಂದಿಗೆ ತೆರಳಿದ್ದ ಯಾಸೀನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಕುರಿತು ಮೃತನ ಪತ್ನಿ ಗಾಂಧಿ ಚೌಕ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹತ್ಯೆ ಪ್ರಕರಣದ ತನಿಖೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತನಿಖೆಯಿಂದ ಒಟ್ಟು ಆರು ಮಂದಿ ಭಾಗಿಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಈ ಸಂಬಂಧ ಈಗಾಗಲೇ ರಶೀದ್, ಇರ್ಷಾದ್, ಕದೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ ಪಿ ತಿಳಿಸಿದ್ದಾರೆ.

ಇಂದು ಪ್ರಮುಖ ಆರೋಪಿ ಸಮೀರ್ ಮುಲ್ಲಾ ಅತಾಲಟ್ಟಿ ಗ್ರಾಮದ ಬಳಿ ಅಡಗಿರುವ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಸಮೀರ್ ತನ್ನ ಬಳಿಯಿದ್ದ ಕಂಟ್ರಿ ಮೇಡ್ ಪಿಸ್ತೂಲ್ ನಿಂದ ಪೊಲೀಸರ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಪೊಲೀಸರು ವಾರ್ನಿಂಗ್ ನೀಡಿದರೂ ದಾಳಿಗೆ ಮುಂದಾದಾಗ, ಆತ್ಮರಕ್ಷಣೆಗಾಗಿ ಆತನ ಬಲಗಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇಶಿ ನಿರ್ಮಿತ ಪಿಸ್ತೂಲ್‌ಗಳ ಮೂಲದ ಕುರಿತು ಮಾತನಾಡಿದ ಎಸ್‌ಪಿ, ಆರೋಪಿಗಳು ಇವುಗಳನ್ನು ರಾಜ್ಯದ ಹೊರಗಿನಿಂದ ತಂದಿದ್ದಾರೆ ಎಂದು ತಿಳಿಸಿದರು. ಆದರೆ, ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು.

ಕಳೆದ ವರ್ಷವೂ ನಾವು 25 ದೇಶಿ ನಿರ್ಮಿತ ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದ್ದೆವು, ಈ ವರ್ಷವೂ ಸುಮಾರು 11 ರಿಂದ 12 ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜನರು ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ ಅಥವಾ ಉತ್ತರ ಪ್ರದೇಶದಂತಹ ರಾಜ್ಯಗಳಿಗೆ ತೆರಳಿ, 50,000 ರೂ.ಗಳಿಂದ ಒಂದು ಲಕ್ಷ ರೂಪಾಯಿವರೆಗಿನ ಬೆಲೆಗೆ ಇವುಗಳನ್ನು ಖರೀದಿಸುತ್ತಾರೆ. ಇವುಗಳ ಮೂಲ ನಮ್ಮ ಜಿಲ್ಲೆಯಲ್ಲಿಲ್ಲ. ಪ್ರಸ್ತುತ ತನಿಖೆಯ ಪ್ರಕಾರ ಆರೋಪಿಗಳು ರಾಜ್ಯದ ಹೊರಗೆ ಪ್ರಯಾಣಿಸಿ, ಘಟನೆ ನಡೆಯುವ ಮೂರು ದಿನಗಳ ಹಿಂದೆ ಈ ಶಸ್ತ್ರಾಸ್ತ್ರವನ್ನು ತಂದಿದ್ದರು ಎಂಬುದು ತಿಳಿದುಬಂದಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'E20 ಈಗ 420 ಆಗಿದೆ': ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಾಗಿದೆ, ಲಾಭ ಯಾರಿಗೆ?; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ

SBI ಬ್ಯಾಂಕ್‌ಗೆ ₹12,668 ಕೋಟಿ ಸಾಲ ಬಾಕಿ: ಮಾಜಿ ವೀಡಿಯೊಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ ದಿವಾಳಿ ಎಂದ NCLT

ಗಾಜಿಯಾಬಾದ್ ಪೊಲೀಸ್ ಔಟ್ ಪೋಸ್ಟ್ ಸ್ಫೋಟ: ಹೊಣೆ ಹೊತ್ತ 'ತೆಹ್ರೀಕ್-ಉಲ್-ಮುಜಾಹಿದ್ದೀನ್' ಉಗ್ರ ಸಂಘಟನೆ, ATS ತನಿಖೆ ಶುರು!

'ಪಾರದರ್ಶಕವಾಗಿ ಜಂಟಿ ಪರೀಕ್ಷೆ ಮಾಡೋಣ': ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಆರೋಪ ತಳ್ಳಿಹಾಕಿದ ತೈಲ ಕಂಪೆನಿಗಳು

AI ಬರಹ, ನಕಲಿ ಲೇಖಕರು: ಕೊಯಮತ್ತೂರಿನ ಗ್ರಂಥಾಲಯದಲ್ಲಿ ನಕಲಿ ಪುಸ್ತಕಗಳ ಜಾಲ! ಸಾಹಿತ್ಯ ಲೋಕವನ್ನು ಬೆಚ್ಚಿಬೀಳಿಸಿದ ಪೆರಿಯಾರ್ ಅರಿವುಳಗಂ ಗ್ರಂಥಾಲಯ ಹಗರಣ