ಕೋಲಾರ: ಅಕ್ರಮ ಫಿಲ್ಟರ್ ಮರಳು ಮಾಫಿಯಾ ತಡೆಯುವಲ್ಲಿ ವಿಫಲವಾದ ಹಾಗೂ ಪರೋಕ್ಷ ಬೆಂಬಲದ ಆರೋಪದ ಮೇಲೆ ಕೋಲಾರ ಜಿಲ್ಲೆ ನಂಗಲಿ ಪೊಲೀಸ್ ಠಾಣೆಯ ಪಿಎಸ್‌ಐ (PSI) ಹಾಗೂ ಕಾನ್ಸ್‌ಟೇಬಲ್ (Constable) ಒಬ್ಬರನ್ನು ಅಮಾನತು ಮಾಡಲಾಗಿದೆ.
ನಂಗಲಿ ಪೊಲೀಸ್ ಠಾಣೆಯ ಪಿಎಸ್‌ಐ ವಿದ್ಯಾಶ್ರೀ ಹಾಗೂ ನಂಗಲಿ ಠಾಣೆಯ ಎಸ್‌ಬಿ ಕಾನ್ಸ್‌ಟೇಬಲ್ ಪ್ರವೀಣ್ ಅಮಾನತುಗೊಂಡವರು. ಕೋಲಾರ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಅವರು ಅಮಾನತು ಆದೇಶ ಮಾಡಿದ್ದಾರೆ.
ಇನ್ನೂ ನಂಗಲಿ ದೊಡ್ಡಕೆರೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಫಿಲ್ಟರ್ ಅಡ್ಡೆ ಮೇಲೆ ಮುಳಬಾಗಿಲು ಎಎಸ್ಪಿ ಮೋನಿಷಾ ಶುಕ್ರವಾರ ರಾತ್ರಿ ದಾಳಿ ಮಾಡಿದ್ದರು. ದಾಳಿ ವೇಳೆ ಒಂದು ಟ್ರ್ಯಾಕ್ಟರ್ ಹಾಗೂ ಒಂದು ಜೆಸಿಬಿ ವಶಕ್ಕೆ ಪಡೆಯಲಾಗಿತ್ತು.
ನಂತರ ಎಎಸ್ಪಿ ಮೋನಿಷಾ ನೀಡಿದ ವರದಿ ಹಿನ್ನೆಲೆ ನಂಗಲಿ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ನಂಗಲಿ ಠಾಣೆಯ ಕಾನ್ಸ್‌ಟೇಬಲ್ ಒಬ್ಬರನ್ನು ಕೋಲಾರ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಅಮಾನತು ಮಾಡಿ ಆದೇಶ ಮಾಡಿದ್ದಾರೆ.