ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಗ್ರಾಹಕರಿಗೆ ಬಿಗ್ ರಿಲೀಫ್: ನಂದಿನಿ ಮೊಸರು ದರ ಇಳಿಸಿದ KMF, ನೂತನ ದರ ಜಾರಿ ಯಾವಾಗ?

ನಂದಿನಿ ಹಾಲಿನ ಬೆಲೆ ಏರಿಕೆ ಬಳಿಕ ಇದೀಗ ಮೊಸರಿನ ಬೆಲೆಯನ್ನು ಇಳಿಸಲು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ನಿರ್ಧರಿಸಿದ್ದು, ರಾಜ್ಯ ಸರ್ಕಾರದ ಸೂಚನೆ ಮೇರೆಗೆ ನವೆಂಬರ್ 29ರಿಂದ ನಂದಿನಿ ಮೊಸರಿನ ಬೆಲೆ..

ನಂದಿನಿ ಮೊಸರು ದರ ಇಳಿಕೆ
Srinivasa Murthy VN
Updated On : 25 Nov 2026, 9:38 pm

ಬೆಂಗಳೂರು: ದರ ಏರಿಕೆ ಮೂಲಕ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದ್ದ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಕೊನೆಗೂ ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದ್ದು, ಮೊಸರು ದರದಲ್ಲಿ ಇಳಿಕೆ ಮಾಡಿದೆ.

ನಂದಿನಿ ಹಾಲಿನ ಬೆಲೆ ಏರಿಕೆ ಬಳಿಕ ಇದೀಗ ಮೊಸರಿನ ಬೆಲೆಯನ್ನು ಇಳಿಸಲು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ನಿರ್ಧರಿಸಿದ್ದು, ರಾಜ್ಯ ಸರ್ಕಾರದ ಸೂಚನೆ ಮೇರೆಗೆ ನವೆಂಬರ್ 29ರಿಂದ ನಂದಿನಿ ಮೊಸರಿನ ಬೆಲೆಯನ್ನು ಪ್ರತಿ ಕೆ.ಜಿಗೆ 2 ರೂಪಾಯಿ ಕಡಿತಗೊಳಿಸಲಾಗಿದೆ.

ನವೆಂಬರ್ 29ರಿಂದ ಹೊಸ ದರಗಳು ಜಾರಿಗೆ ಬರಲಿವೆ ಎಂದು ತಿಳಿದುಬಂದಿದೆ.

Advertisement

Advertisement

Also Read

'ಬೆಂಗಳೂರಿಗರಿಗೆ ಸಿಕ್ಕ ಜಯ, ಲಾಲ್‌ಬಾಗ್‌ ಸುರಕ್ಷಿತ, ಮುಂದಿನ ಗುರಿ ಹೆಬ್ಬಾಳ ಕೆರೆ': ಸಂಸದ ತೇಜಸ್ವಿ ಸೂರ್ಯ ಪೋಸ್ಟ್ ವೈರಲ್!

ಪರಿಷ್ಕೃತ ದರದ ಪ್ರಕಾರ, 500 ಗ್ರಾಂ ಮೊಸರಿನ ಪ್ಯಾಕೆಟ್ ಬೆಲೆ 34 ರೂಪಾಯಿಯಿಂದ 33 ರೂಪಾಯಿಗೆ ಇಳಿಕೆಯಾಗಲಿದೆ. ಒಂದು ಕೆ.ಜಿ. ಮೊಸರಿನ ಪ್ಯಾಕೆಟ್ ಬೆಲೆ 68 ರೂಪಾಯಿಯಿಂದ 66 ರೂಪಾಯಿಗೆ ಕಡಿಮೆಯಾಗಲಿದೆ.

ನವೆಂಬರ್ 1ರಿಂದ ಜಾರಿಗೆ ಬರುವಂತೆ ಕೆಎಂಎಫ್ ಮೊಸರಿನ ಬೆಲೆಯನ್ನು ಹೆಚ್ಚಿಸಿತ್ತು. ಆಗ 500 ಗ್ರಾಂ ಪ್ಯಾಕೆಟ್ ದರವನ್ನು 28 ರೂಪಾಯಿಯಿಂದ 34 ರೂಪಾಯಿಗೆ ಹಾಗೂ ಒಂದು ಕೆ.ಜಿ. ಪ್ಯಾಕೆಟ್ ದರವನ್ನು 54 ರೂಪಾಯಿಯಿಂದ 68 ರೂಪಾಯಿಗೆ ಏರಿಸಲಾಗಿತ್ತು.

ಈ ಬೆಲೆ ಏರಿಕೆಗೆ ಗ್ರಾಹಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ರಾಜ್ಯ ಸರ್ಕಾರದ ಸೂಚನೆಯಂತೆ ಕೆಎಂಎಫ್ ಬೆಲೆ ಕಡಿತ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement