ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

'ಇಂತಹ ಮರಗಳಿಗಾಗಿ 6 ತಲೆಮಾರು ಕಾಯಬೇಕು, ಲಾಲ್‌ಬಾಗ್ ಉಳಿದಿದೆ, ಆದರೆ ಹೋರಾಟ ಮುಗಿದಿಲ್ಲ': ನಟ ಪ್ರಕಾಶ್ ಬೆಳವಾಡಿ

ಉದ್ದೇಶಿತ ಉದ್ದದ ಸುರಂಗ ರಸ್ತೆ ಯೋಜನೆ ಇನ್ನೂ ಬಾಕಿ ಇದ್ದು, ಆ ಯೋಜನೆಯಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಸಂಸದರು ಸೇರಿದಂತೆ ಹಲವರು ಈಗಾಗಲೇ ಸ್ಪಷ್ಟವಾಗಿ ವಿವರಿಸಿದ್ದಾರೆ ಎಂದು ಅವರು ತಿಳಿಸಿದರು.

ನಟ ಪ್ರಕಾಶ್ ಬೆಳವಾಡಿ — ani
Srinivasa Murthy VN
Updated On : 29 Nov 2026, 11:13 am

ಬೆಂಗಳೂರು: ಐತಿಹಾಸಿಕ ಲಾಲ್‌ಬಾಗ್ ಉದ್ಯಾನವನ್ನು ಉಳಿಸುವ ಹೋರಾಟಕ್ಕೆ ತಾತ್ಕಾಲಿಕ ಜಯ ಸಿಕ್ಕಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರು ‘ಸೇವ್ ಲಾಲ್‌ಬಾಗ್’ ಅಭಿಯಾನದ ಬೆಂಬಲಿಗರಿಗಾಗಿ ಕೃತಜ್ಞತಾ ಕಾರ್ಯಕ್ರಮ ಆಯೋಜಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್ ಬೆಳವಾಡಿ, ಲಾಲ್‌ಬಾಗ್ ಉಳಿದಿರುವುದನ್ನು ಸಂಭ್ರಮಿಸುವುದಾದರೂ, ಹೋರಾಟ ಸಂಪೂರ್ಣ ಮುಗಿದಿಲ್ಲ ಎಂದು ಹೇಳಿದರು.

ಉದ್ದೇಶಿತ ಉದ್ದದ ಸುರಂಗ ರಸ್ತೆ ಯೋಜನೆ ಇನ್ನೂ ಬಾಕಿ ಇದ್ದು, ಆ ಯೋಜನೆಯಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಸಂಸದರು ಸೇರಿದಂತೆ ಹಲವರು ಈಗಾಗಲೇ ಸ್ಪಷ್ಟವಾಗಿ ವಿವರಿಸಿದ್ದಾರೆ ಎಂದು ಅವರು ತಿಳಿಸಿದರು.

Advertisement

Advertisement

ಲಾಲ್‌ಬಾಗ್‌ನಲ್ಲಿರುವ ಮರಗಳ ಮಹತ್ವವನ್ನು ಒತ್ತಿಹೇಳಿದ ಅವರು, ಇಲ್ಲಿನ ಮರಗಳು ಅಮೂಲ್ಯವಾದವು. ಇಂತಹ ಮರಗಳನ್ನು ಸುಲಭವಾಗಿ ಬೆಳೆಸಲು ಸಾಧ್ಯವಿಲ್ಲ. ಇದೇ ರೀತಿಯ ಮರಗಳು ಮತ್ತೆ ಬೆಳೆಯಲು ಮುಂದಿನ ಆರು ತಲೆಮಾರುಗಳೇ ಕಾಯಬೇಕಾಗಬಹುದು ಎಂದು ಅಭಿಪ್ರಾಯಪಟ್ಟರು.

Also Read

'ಬೆಂಗಳೂರಿಗರಿಗೆ ಸಿಕ್ಕ ಜಯ, ಲಾಲ್‌ಬಾಗ್‌ ಸುರಕ್ಷಿತ, ಮುಂದಿನ ಗುರಿ ಹೆಬ್ಬಾಳ ಕೆರೆ': ಸಂಸದ ತೇಜಸ್ವಿ ಸೂರ್ಯ ಪೋಸ್ಟ್ ವೈರಲ್!

ಯಾವುದೇ ದೂರದೃಷ್ಟಿಯಿಲ್ಲದೆ ಕೈಗೊಂಡ ನಿರ್ಧಾರದಿಂದ ಐತಿಹಾಸಿಕ ಉದ್ಯಾನಕ್ಕೆ ಅಪಾಯ ಎದುರಾಗಿತ್ತು. ಈ ಯೋಜನೆಗೆ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ಅನುಮತಿಯನ್ನೂ ನೀಡಿರಲಿಲ್ಲ ಎಂದು ಅವರು ಹೇಳಿದರು.

"ಕನಿಷ್ಠ ನಮ್ಮ ಲಾಲ್‌ಬಾಗ್ ಉಳಿದಿದೆ. ಭವಿಷ್ಯದಲ್ಲಿ ಯಾವುದೇ ರಾಜಕಾರಣಿ ಅಥವಾ ಸರ್ಕಾರ ಇಂತಹ ಅವಿವೇಕದ ಸಾಹಸಕ್ಕೆ ಕೈಹಾಕಬಾರದು. ಈ ಮಟ್ಟಿಗೆ ಲಾಲ್‌ಬಾಗ್ ಉಳಿದಿರುವುದನ್ನು ಸಣ್ಣ ಸಂಭ್ರಮವಾಗಿ ಆಚರಿಸುತ್ತಿದ್ದೇವೆ" ಎಂದು ಪ್ರಕಾಶ್ ಬೆಳವಾಡಿ ಹೇಳಿದರು.

ಸುರಂಗ ರಸ್ತೆ ಯೋಜನೆ ಕೈಬಿಡುವಂತೆ ಆಗ್ರಹಿಸಿ ನಡೆದ ‘ಸೇವ್ ಲಾಲ್‌ಬಾಗ್’ ಅಭಿಯಾನದಲ್ಲಿ ಪರಿಸರ ಪ್ರೇಮಿಗಳು, ನಾಗರಿಕರು ಹಾಗೂ ವಿವಿಧ ಸಂಘಟನೆಗಳು ಭಾಗವಹಿಸಿದ್ದವು. ಲಾಲ್‌ಬಾಗ್‌ನ ಐತಿಹಾಸಿಕ ಮರಗಳು ಮತ್ತು ಪರಿಸರ ವ್ಯವಸ್ಥೆಯನ್ನು ಉಳಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement