ತಣ್ಣೀರು ಅಥವಾ ಬಿಸಿನೀರು AI Image
ಜೀವನಶೈಲಿ

ತಣ್ಣೀರು ಅಥವಾ ಬಿಸಿನೀರು: ಸ್ನಾನಕ್ಕೆ ಯಾವುದು ಬೆಸ್ಟ್? ಇಲ್ಲಿದೆ ಅಸಲಿ ಸತ್ಯ!

ಬೆಳಗ್ಗೆ ಎದ್ದ ತಕ್ಷಣ ಬಾತ್‌ರೂಮ್‌ಗೆ ಹೋಗುವಾಗ ಪ್ರತಿಯೊಬ್ಬರ ತಲೆಯಲ್ಲೂ ಮೂಡುವ ಸಾಮಾನ್ಯ ಪ್ರಶ್ನೆ ಎಂದರೆ ತಣ್ಣೀರಿನಲ್ಲಿ ಸ್ನಾನ ಮಾಡಬೇಕಾ ಅಥವಾ ಬಿಸಿನೀರಿನಲ್ಲಿ ಮಾಡಬೇಕಾ ಎಂಬುದು.! ಆದರೆ, ಇಲ್ಲಿದೆ ನೋಡಿ ಆಯುರ್ವೇದ ಮತ್ತು ವಿಜ್ಞಾನ ಹೇಳುವ ಸರಿಯಾದ ನಿಯಮಗಳು...

ಬೆಳಗ್ಗೆ ಏಳುತ್ತಿದ್ದಂತೆ ಸ್ನಾನಕ್ಕೆ ಹೋಗುವಾಗ ಮೊದಲ ಪ್ರಶ್ನೆ ಬರುವುದು ಇದೇ... ತಣ್ಣೀರಿನಲ್ಲಿ ಸ್ನಾನ ಮಾಡಬೇಕಾ ಅಥವಾ ಬಿಸಿನೀರಿನಲ್ಲಿ ಮಾಡಬೇಕಾ.? ಬಹುತೇಕ ಜನರು ಚಳಿಗಾಲದಲ್ಲಿ ಬಿಸಿನೀರು ಬೇಸಿಗೆಯಲ್ಲಿ ತಣ್ಣೀರು ಎಂದು ಆಯ್ಕೆ ಮಾಡುತ್ತಾರೆ. ಆದರೆ, ಯಾವ ಸಮಯದಲ್ಲಿ ಯಾವ ನೀರಿನಿಂದ ಸ್ನಾನ ಮಾಡಬೇಕು ಎಂಬ ಗೊಂದಲ ಎಲ್ಲರಲ್ಲೂ ಇರುತ್ತದೆ.! ಯಾಕಂದ್ರೆ, ತಣ್ಣೀರು ಮತ್ತು ಬಿಸಿನೀರು ಎರಡಕ್ಕೂ ತನ್ನದೇ ಆದ ಆರೋಗ್ಯ ಪ್ರಯೋಜನಗಳಿವೆ. ಹಾಗಾದರೆ, ಯಾವ ಸಮಯದಲ್ಲಿ ಯಾವ ನೀರು ಉತ್ತಮ ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ:

ಬೆಳಗ್ಗಿನ ಸಮಯ.. 

ಬೆಳಗ್ಗೆ ಎದ್ದ ತಕ್ಷಣ ತಣ್ಣೀರಿನಲ್ಲಿ (ಅಥವಾ ಉಗುರುಬೆಚ್ಚಗಿನ ನೀರಿನಲ್ಲಿ) ಸ್ನಾನ ಮಾಡುವುದು ಹೆಚ್ಚು ಪ್ರಯೋಜನಕಾರಿ. ಯಾಕಂದ್ರೆ, ತಣ್ಣೀರು ದೇಹದ ಮೇಲೆ ಬಿದ್ದಾಗ ರಕ್ತ ಪರಿಚಲನೆ ವೇಗವಾಗಿ, ಆಲಸ್ಯ ದೂರವಾಗುತ್ತದೆ ಮತ್ತು ಮನಸ್ಸು ಪ್ರಫುಲ್ಲವಾಗುತ್ತದೆ. ಇದರೊಂದಿಗೆ, ಬೆಳಗ್ಗಿನ ತಣ್ಣೀರು ಸ್ನಾನವು ದೇಹದಲ್ಲಿ ಬಿಳಿ ರಕ್ತಕಣಗಳನ್ನು ಹೆಚ್ಚಿಸಿ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಜೊತೆಗೆ, ತಣ್ಣೀರು ಚರ್ಮದ ರಂಧ್ರಗಳನ್ನು ಮುಚ್ಚುತ್ತದೆ ಮತ್ತು ನೈಸರ್ಗಿಕ ತೇವಾಂಶವನ್ನು ಕಾಪಾಡುತ್ತದೆ.

ರಾತ್ರಿಯ ಸಮಯ...

ದಿನವಿಡೀ ಕೆಲಸ ಮಾಡಿ ಸುಸ್ತಾದ ನಂತರ ರಾತ್ರಿ ಮಲಗುವ ಮುನ್ನ ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಅತ್ಯುತ್ತಮ. ಯಾಕಂದ್ರೆ, ಈ ಬಿಸಿನೀರು ದೇಹದ ಉಷ್ಣತೆಯನ್ನು ಸಮತೋಲನಕ್ಕೆ ತಂದು, ಮೆದುಳಿಗೆ ವಿಶ್ರಾಂತಿ ನೀಡುತ್ತದೆ. ಇದರಿಂದ ಗಾಢವಾದ ನಿದ್ದೆ ಬರುತ್ತದೆ. ಜೊತೆಗೆ, ದಿನವಿಡೀ ಉಂಟಾದ ಸ್ನಾಯುಗಳ ಜಡತ್ವ ಮತ್ತು ನೋವನ್ನು ಬಿಸಿನೀರು ಕಡಿಮೆ ಮಾಡುತ್ತದೆ. ಇದರೊಂದಿಗೆ, ಇಡೀ ದಿನದ ಮಾನಸಿಕ ಒತ್ತಡ ಮತ್ತು ಆಯಾಸವನ್ನು ಹೋಗಲಾಡಿಸಲು ಇದು ಸಹಕಾರಿ.

ತಣ್ಣೀರು ಅಥವಾ ಬಿಸಿನೀರು

ಹಾಗಾದರೆ, ಎಲ್ಲರೂ ಮಾಡುವ ಸಾಮಾನ್ಯ ತಪ್ಪುಗಳೇನು?

  • ಊಟ ಮಾಡಿದ ತಕ್ಷಣ ಸ್ನಾನ ಮಾಡುವುದು: ಇದು ಅತಿ ದೊಡ್ಡ ತಪ್ಪು. ಆಹಾರ ತಿಂದ ತಕ್ಷಣ ಜೀರ್ಣಕ್ರಿಯೆಗಾಗಿ ರಕ್ತ ಸಂಚಾರ ಹೊಟ್ಟೆಯ ಭಾಗದಲ್ಲಿ ಹೆಚ್ಚಾಗಿರುತ್ತದೆ. ಆ ಸಮಯದಲ್ಲಿ ಸ್ನಾನ ಮಾಡಿದರೆ ರಕ್ತ ಸಂಚಾರ ಇಡೀ ದೇಹಕ್ಕೆ ಹರಡಿ, ಜೀರ್ಣಕ್ರಿಯೆ ಮಂದಗತಿಯಾಗುತ್ತದೆ. ಹಾಗಾಗಿ, ಊಟದ ನಂತರ ಕನಿಷ್ಠ 1 ಗಂಟೆಯ ಬಳಿಕ ಸ್ನಾನ ಮಾಡಬೇಕು.

  • ತಲೆಗೆ ಅತಿಯಾದ ಬಿಸಿನೀರು ಹಾಕುವುದು: ತಲೆಗೆ ಅತಿ ಬಿಸಿಯಾದ ನೀರನ್ನು ಹಾಕುವುದರಿಂದ ಕೂದಲು ಉದುರುವಿಕೆ ಹೆಚ್ಚಾಗುತ್ತದೆ ಮತ್ತು ತಲೆಯಲ್ಲಿ ಹೊಟ್ಟು ಉಂಟಾಗುತ್ತದೆ. ಕಣ್ಣುಗಳ ಆರೋಗ್ಯಕ್ಕೂ ಇದು ಒಳ್ಳೆಯದಲ್ಲ. ತಲೆಗೆ ಯಾವಾಗಲೂ ತಣ್ಣೀರು ಅಥವಾ ಸಾಧಾರಣ ಉಗುರುಬೆಚ್ಚಗಿನ ನೀರನ್ನು ಬಳಸಬೇಕು.

  • ವ್ಯಾಯಾಮ ಅಥವಾ ಜಿಮ್ ಮುಗಿಸಿದ ತಕ್ಷಣ ಸ್ನಾನ: ವರ್ಕೌಟ್ ಮಾಡಿದ ತಕ್ಷಣ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ. ತಕ್ಷಣವೇ ಸ್ನಾನ ಮಾಡುವುದರಿಂದ ದೇಹದ ಉಷ್ಣತೆಯಲ್ಲಿ ಏರುಪೇರಾಗಿ ಪಾರ್ಶ್ವವಾಯು (Stroke) ಅಥವಾ ಜ್ವರ ಬರುವ ಅಪಾಯವಿರುತ್ತದೆ. ವ್ಯಾಯಾಮದ ನಂತರ ಕನಿಷ್ಠ 20-30 ನಿಮಿಷ ವಿಶ್ರಾಂತಿ ಪಡೆದು, ಬೆವರಿನ ಸೆಕೆಯು ಕಡಿಮೆಯಾದ ನಂತರವೇ ಸ್ನಾನ ಮಾಡಬೇಕು.

  • ತುಂಬಾ ಸಮಯ ಸ್ನಾನ ಮಾಡುವುದು: ಬಿಸಿನೀರಿನಲ್ಲಿ ದೀರ್ಘಕಾಲ ಸ್ನಾನ ಮಾಡುವುದರಿಂದ ಚರ್ಮದಲ್ಲಿರುವ ನೈಸರ್ಗಿಕ ಎಣ್ಣೆಯಂಶ ನಾಶವಾಗಿ, ಚರ್ಮ ತೀವ್ರವಾಗಿ ಒಣಗುತ್ತದೆ ಮತ್ತು ತುರಿಕೆ ಆರಂಭವಾಗುತ್ತದೆ. ಸ್ನಾನ 10 ರಿಂದ 15 ನಿಮಿಷಗಳಿಗಿಂತ ಹೆಚ್ಚು ಇರಬಾರದು.

ಅದರಲ್ಲೂ, ಆಯುರ್ವೇದದ ಪ್ರಕಾರ, ಕುತ್ತಿಗೆಯಿಂದ ಕೆಳಗಿನ ಭಾಗಕ್ಕೆ ಬಿಸಿನೀರು ಮತ್ತು ತಲೆಯ ಭಾಗಕ್ಕೆ ತಣ್ಣೀರು ಬಳಸುವುದು ಆರೋಗ್ಯಕ್ಕೆ ಅತ್ಯಂತ ಶ್ರೇಷ್ಠ. ಇದು ಕಣ್ಣು ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

11/9 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!

"ನಾಯಕತ್ವ ಮುಗಿದಿದೆ, ಜರ್ನಿ ಮುಂದುವರಿಯುತ್ತೆ": ಭಾವನಾತ್ಮಕ ಸಂದೇಶದೊಂದಿಗೆ captaincyಗೆ ಗುಡ್‌ಬೈ ಹೇಳಿದ Harmanpreet Kaur..!

FlyDubai ವಿಮಾನ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ: ಇದು ನನ್ನ ವೈಯಕ್ತಿಕ ನಂಬಿಕೆ; ಡೊನಾಲ್ಡ್ ಟ್ರಂಪ್

ಕಾಕ್‌ಪಿಟ್ ದಾಳಿ ಬಳಿಕ 150ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಫ್ಲೈದುಬೈ ವಿಮಾನವನ್ನು ಹೊಡೆದುರುಳಿಸಲು ಇಸ್ರೇಲ್ ಸಿದ್ಧವಾಗಿತ್ತು: ವರದಿ