ದೇಶ

ಯುದ್ಧಕ್ಕೆ ಸಿದ್ಧವಾಯ್ತಾ ಪಾಕ್?: ಲಡಾಖ್ ಸಮೀಪ ಪಾಕ್‌ನ ಸಿ130 ಯುದ್ಧ ವಿಮಾನಗಳ ರವಾನೆ, ಭಾರತದ ಕಣ್ಗಾವಲು!

Vishwanath S

ಇಸ್ಲಾಮಾಬಾದ್/ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ರದ್ದುಗೊಳಿಸಿದ ಬಳಿಕ ಭಾರತದ ವಿರುದ್ಧ ಮಸಲತ್ತು ಮಾಡುತ್ತಿರುವ ಪಾಕಿಸ್ತಾನ ಇದೀಗ ಬಹುದೊಡ್ಡ ಕುಕೃತ್ಯಕ್ಕೆ ಕೈ ಹಾಕಿದೆ. 

ಹೌದು ಕೇಂದ್ರಾಡಳಿತ ಲಡಾಖ್ ನ ಸಮೀಪದ ಸ್ಕರ್ದು ಏರ್ ಬೇಸ್ ಗೆ ಪಾಕಿಸ್ತಾನ ತನ್ನ ವಾಯುಪಡೆಗೆ ಸೇರಿದ 3 ಸಿ130 ಏರ್ ಕ್ರಾಫ್ಟ್ ಮತ್ತು ಯುದ್ಧೋಪಕರಣಗಳನ್ನು ರವಾನಿಸಿರುವುದಾಗಿ ವರದಿಯಾಗಿದೆ. ಇನ್ನು ಪಾಕ್ ಏನು ಮಾಡುತ್ತಿದೆ ಎಂಬುದನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. 

ಗಡಿಭಾಗದಲ್ಲಿ ಪಾಕಿಸ್ತಾನದ ಚಲನವಲನದ ಬಗ್ಗೆ ಭಾರತದ ಗುಪ್ತಚರ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಸುದ್ದಿಸಂಸ್ಧೆಯೊಂದು ವರದಿ ಮಾಡಿದೆ. 

ಪಾಕಿಸ್ತಾನ ದಿಢೀರ್ ಅಂತಾ ಈ ನಿರ್ಧಾರಕ್ಕೆ ಬಂದಿದ್ದು ಸ್ಕರ್ದು ವಾಯುನೆಲೆಗೆ ಜೆಎಫ್-17 ಯುದ್ಧ ವಿಮಾನವನ್ನು ಕಳುಹಿಸುವ ಸಾಧ್ಯತೆ ಇದೆ. ಯುದ್ಧ ವಿಮಾನಗಳ ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಏರ್ ಬೇಸ್ ನಲ್ಲಿ ಪಾಕ್ ಯುದ್ಧೋಪಕರಣಗಳನ್ನು ರವಾನಿಸುತ್ತಿರುವುದಾಗಿ ಮೂಲಗಳು ಹೇಳಿವೆ. 

SCROLL FOR NEXT