ದೇಶ

ಹಿಮಾಚಲ ಪ್ರದೇಶ: 28,197 ಕೋಟಿ ರೂ. ವೆಚ್ಚದ 287 ಯೋಜನೆ ಉದ್ಘಾಟಿಸಿದ ನರೇಂದ್ರ ಮೋದಿ

Harshavardhan M

ಮಂಡಿ: ಹಿಮಾಚಲ ಪ್ರದೇಶದ ಮಂಡಿ ಪಟ್ಟಣದ ಪದ್ದಲ್ ಮೈದಾನದಲ್ಲಿ 28,197 ಕೋಟಿ ರೂಪಾಯಿ ಮೌಲ್ಯದ 287 ಹೂಡಿಕೆ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ನಂತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, 4 ವರ್ಷ ಪೂರೈಸಿದ ಹಿಮಾಚಲ ಪ್ರದೇಶ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ ಕಳೆದ 4 ವರ್ಷಗಳ ಜೈ ರಾಮ್ ಠಾಕೂರ್ ಸರ್ಕಾರದ ಅವಧಿಯಲ್ಲಿ ರಾಜ್ಯವು ವೇಗವಾಗಿ ಪರಿವರ್ತನೆಗೊಂಡಿದೆ. ಕೊರೋನಾದಂತಹ ಸಂಕಷ್ಟ ಕಾಲದಲ್ಲಿಯೂ ರಾಜ್ಯದಲ್ಲಿ ಅಭಿವೃದ್ಧಿ ನಿಂತಿಲ್ಲ. ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ ಎಂದು ಮೋದಿ ಜೈರಾಂ ಠಾಕೂರ್ ಸರ್ಕಾರವನ್ನು ಶ್ಲಾಘಿಸಿದರು.

ಮೋದಿ 6,700 ಕೋಟಿ ರೂ.ಗಳ ರೇಣುಕಾಜಿ ಅಣೆಕಟ್ಟು ಯೋಜನೆಗೆ ಅಡಿಪಾಯ ಹಾಕಿದರು. ಈ ಅಣೆಕಟ್ಟು ದೆಹಲಿಯ ನೀರಿನ ಪೂರೈಕೆಯಲ್ಲಿ ಗಣನೀಯ ಪಾತ್ರ ವಹಿಸಲಿದೆ. ಇದಲ್ಲದೇ ಇನ್ನು ಹಲವಾರು ಇತರ ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಮಾತನಾಡಿ, ಒಂದೇ ದಿನದಲ್ಲಿ 11,000 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಹೇಳಿದರು.

SCROLL FOR NEXT