ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕೇರಳ: ದೂರದರ್ಶನ ಕೇಂದ್ರದ ಮಹಿಳೆಯರ ವಾಶ್​ರೂಮ್​ನಲ್ಲಿ ಹಿಡನ್​ ಕ್ಯಾಮೆರಾ ಪತ್ತೆ

ಕೇರಳದ ತಿರುವನಂತಪುರಂನಲ್ಲಿರುವ ದೂರದರ್ಶನ ಕೇಂದ್ರದ ಮಹಿಳೆಯರ ವಾಶ್‌ರೂಮ್ ಒಂದರಲ್ಲಿ ಹಿಡನ್ ಕ್ಯಾಮೆರಾ ಪತ್ತೆಯಾಗಿದೆ. ಭಾನುವಾರ ಮಹಿಳೆಯೊಬ್ಬರ ಕಣ್ಣಿಗೆ ಈ ಕ್ಯಾಮೆರಾ ಕಂಡಿದೆ.

ಸಾಂದರ್ಭಿಕ ಚಿತ್ರ
Lingaraj Badiger
Updated On : 11 Nov 2021, 4:53 pm

ತಿರುವನಂತಪುರಂ: ಕೇರಳದ ತಿರುವನಂತಪುರಂನಲ್ಲಿರುವ ದೂರದರ್ಶನ ಕೇಂದ್ರದ ಮಹಿಳೆಯರ ವಾಶ್‌ರೂಮ್ ಒಂದರಲ್ಲಿ ಹಿಡನ್ ಕ್ಯಾಮೆರಾ ಪತ್ತೆಯಾಗಿದೆ. ಭಾನುವಾರ ಮಹಿಳೆಯೊಬ್ಬರ ಕಣ್ಣಿಗೆ ಈ ಕ್ಯಾಮೆರಾ ಕಂಡಿದೆ.

ಕೇಂದ್ರದ ಅಧಿಕಾರಿಗಳು ಬುಧವಾರ ಪೊಲೀಸರನ್ನು ಸಂಪರ್ಕಿಸಿದ್ದು, ಇದೀಗ ತಿರುವನಂತಪುರಂ ಸೈಬರ್ ಸೆಲ್ ಪೊಲೀಸರಿಗೆ ದೂರು ನೀಡಲಾಗಿದೆ.

ಇದನ್ನು ಓದಿ: ಇದು ಸರ್ಕಸ್ ಅಥವಾ ಸಿನಿಮಾ ಅಲ್ಲ: ಅರೆನಗ್ನನಾಗಿ ಆನ್ ಲೈನ್ ವಿಚಾರಣೆಗೆ ಹಾಜರಾದ ವ್ಯಕ್ತಿ ವಿರುದ್ಧ ಕೇರಳ ಹೈಕೋರ್ಟ್ ಕೆಂಡಾಮಂಡಲ

Advertisement

Advertisement

ಆರೋಪಿಯೂ ಸಂಸ್ಥೆಯ ತಾತ್ಕಾಲಿಕ ಉದ್ಯೋಗಿಯಾಗಿದ್ದು, ಆತನೇ ಕ್ಯಾಮೆರಾವನ್ನು ಅಳವಡಿಸಿದ್ದಾನೆ ಎಂದು ತಿಳಿದುಬಂದಿದೆ. ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯ ಸ್ಟುಡಿಯೋ ಬಳಿಯ ವಾಶ್ ರೂಂನಲ್ಲಿ ಕ್ಯಾಮೆರಾ ಇಡಲಾಗಿತ್ತು.

ದೂರದರ್ಶನದ ಉನ್ನತ ಅಧಿಕಾರಿಗಳನ್ನು ಒಳಗೊಂಡ ಮಹಿಳಾ ಸಮಿತಿ ಮತ್ತು ಶಿಸ್ತು ಸಮಿತಿ ಸಹ ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement