ಸಾಂದರ್ಭಿಕ ಚಿತ್ರ 
ದೇಶ

ಭಾರತೀಯ ಸೇನೆ ಮಿಸೈಲ್ ಲಾಂಚರ್ ಗಳನ್ನು ಇಂಡೊ- ಚೈನಾ ಗಡಿಗೆ ಸಾಗಿಸಲು ರಸ್ತೆ ಅಗಲೀಕರಣ ಅಗತ್ಯ: ಅಟಾರ್ನಿ ಜನರಲ್ 

ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ರಸ್ತೆ ನಿರ್ಮಾಣ ಯೋಜನೆಗಳಿಂದ ಗುಡ್ಡ ಕುಸಿತ, ಭೂ ಕುಸಿತ ಅಪಾಯಗಳು ತಲೆದೋರಿವೆ ಎಂದು ಹೇಳಿ ಯೋಜನೆಗೆ ತಡೆಯೊಡ್ಡುವಂತೆ ಎನ್ ಜಿ ಒ ಸಂಘಟನೆಯೊಂದು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು.

ನವದೆಹಲಿ: ಭಾರತೀಯ ಸೇನೆ ಮಿಸೈಲ್ ಲಾಂಚರ್ ಗಳನ್ನು ಇಂಡೊ- ಚೈನಾ ಗಡಿ ಪ್ರದೇಶಗಳಿಗೆ ಸಾಗಿಸದೇ ಹೋದರೆ ಯುದ್ಧ ಮಾಡುವುದು ಹೇಗೆ, ದೇಶ ರಕ್ಷಿಸಿಕೊಳ್ಳುವುದು ಹೇಗೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣು ಗೋಪಾಲ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ. 

ಎನ್ ಜಿ ಒ ಸಂಘಟನೆಯೊಂದು ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ರಸ್ತೆ ನಿರ್ಮಾಣ, ರಸ್ತೆ ಅಗಲೀಕರಣ ಯೋಜನೆಗಳಿಂದ ಗುಡ್ಡ ಕುಸಿತ, ಭೂ ಕುಸಿತ ಅಪಾಯಗಳು ತಲೆದೋರಿವೆ ಎಂದು ಹೇಳಿ ಯೋಜನೆಗೆ ತಡೆಯೊಡ್ಡುವಂತೆ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ನಡೆದ ವಿಚಾರಣೆಗೆ ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ಹಾಜರಾಗಿದ್ದರು.

ಭಾರತದ ಬ್ರಹ್ಮೋಸ್ ಕ್ಷಿಪಣಿ 42 ಅಡಿ ಉದ್ದವಿದೆ, ಅದನ್ನು ಸಾಗಿಸಲು ಬೃಹತ್ತಾದ ವಾಹನಗಳು ಬೇಕು. ಈ ದೊಡ್ಡ ದೊಡ್ಡ ವಾಹನಗಳು ಸಾಗಲು ದೊಡ್ಡ ದೊಡ್ಡ ರಸ್ತೆಗಳು ಬೇಕು. ಹೀಗಾಗಿ ರಸ್ತೆ ಅಗಲೀಕರಣ ಅತ್ಯಗತ್ಯ. ಒಂದು ವೇಳೆ ಭಾರತ ಚೀನಾ ನಡುವೆ ಯುದ್ಧ ನಡೆದಲ್ಲಿ ನಮ್ಮ ಕ್ಷಿಪಣಿಗಳನ್ನು ಅವುಗಳನ್ನು ಉಡಾವಣೆಗೊಳಿಸುವ ಲಾಂಚರ್ ಗಳನ್ನು ಗಡಿಗೆ ಸಾಗಿಸುವುದು ಹೇಗೆಈಂದು ವೇಣುಗೋಪಾಲ್ ಇದೇ ವೇಳೆ ಪ್ರಶ್ನಿಸಿದರು. 

ಭೂಕುಸಿತ ಇರಲಿ, ಗುಡ್ಡ ಕುಸಿತವಿರಲಿ ಪ್ರವಾಹವೇ ಬರಲಿ ದೇಶದ ಭದ್ರತೆಯ ವಿಚಾರಕ್ಕೆ ಬಂದಾಗ ಭಾರತೀಯ ಸೈನಿಕರು ಯಾವುದೇ ಪರಿಸ್ಥಿತಿಯಲ್ಲೂ ಜೀವದ ಹಂಗು ತೊರೆದು ಗಡಿಯನ್ನು ತಲುಪಲು ಸಿದ್ಧರಾಗುತ್ತಾರೆ. 

ಅಂಥದ್ದರಲ್ಲಿ ತಮ್ಮ ವಾಹನಗಳು ಈ ರಸ್ತೆಯಲ್ಲಿ ಸಾಗಬೇಡಿ, ದೂರವಿರುವ ಬದಲಿ ರಸ್ತೆಯನ್ನು ಆಯ್ದುಕೊಳ್ಳಿ ಎಂದು ಹೇಳಲಾಗದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Related Article

ಈ ಬಾರಿಯೂ ಸೇನೆಯೊಂದಿಗೆ ದೀಪಾವಳಿ ಆಚರಣೆ: ನೌಶೆರಾ ತಲುಪಿದ ಪ್ರಧಾನಿ ಮೋದಿ, ಹುತಾತ್ಮ ಯೋಧರಿಗೆ ಗೌರವ ನಮನ

ಸೇನೆಯ ರಣಬೇಟೆ: ರಚೌರಿ ಅರಣ್ಯದಲ್ಲಿ 6 ಮಂದಿ ಲಷ್ಕರ್-ಇ-ತೊಯ್ಬಾ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಯೋಧರು

ಎನ್ ಸಿಬಿ ವಿರುದ್ಧ ತನಿಖೆಗೆ ಶಿವಸೇನೆ ಮುಖಂಡನ ಆಗ್ರಹ, ಸುಪ್ರೀಂ ಗೆ ಅರ್ಜಿ; ಆರ್ಯನ್ ಖಾನ್ ಮೂಲಭೂತ ಹಕ್ಕು ರಕ್ಷಿಸಲು ಮನವಿ

ಇಂಡಿಯಾ- ಚೀನಾ ಗಡಿ ಬಳಿ 16 ಐಟಿಬಿಪಿ ಸಿಬ್ಬಂದಿ ರಕ್ಷಿಸಿದ ಭಾರತೀಯ ಸೇನೆ

ವಾಯುಸೇನೆ ಬತ್ತಳಿಕೆಗೆ ಶೀಘ್ರ 56 C-295 ಸರಕು ಸಾಗಣೆ ವಿಮಾನ; ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಖಾಸಗಿ ಸಂಸ್ಥೆಯಿಂದ ವಿಮಾನ ನಿರ್ಮಾಣ

ಮಹಿಳೆಯರ ಎನ್ ಡಿ ಎ ಪ್ರವೇಶಕ್ಕೆ ಸೇನೆ ಒಪ್ಪಿಗೆ: ಸುಪ್ರೀಂಗೆ ಕೇಂದ್ರ ಹೇಳಿಕೆ

ಮುಂದಿನ 20 ವರ್ಷಗಳಲ್ಲಿ ವಾಯು ಸೇನೆಗೆ 350 ಯುದ್ಧ ವಿಮಾನಗಳ ಸೇರ್ಪಡೆ: ಐಎಎಫ್ ಮುಖ್ಯಸ್ಥ ಭಡೌರಿಯಾ

ಭಾರತೀಯ ಸೇನೆಯಿಂದ ಕಾಶ್ಮೀರದ ಯುವ ಪ್ರತಿಭೆಗಳಿಗಾಗಿ ಜಶ್ನ್-ಇ-ಜನೂಬ್ ಕ್ರೀಡಾ ಹಬ್ಬ ಆಯೋಜನೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT