ದೇಶ

ಕೋವಿಡ್-19 ನಿಂದ ಭಾರತದಲ್ಲಿ ಜನರ ಜೀವಿತಾವಧಿ ಇಳಿಕೆ- ವರದಿ

Nagaraja AB

ಮುಂಬೈ: ವಿಶ್ವದಾದ್ಯಂತ ಜನರ ಜೀವನದ ಮೇಲೆ ಪರಿಣಾಮ ಬೀರಿದ ಕೋವಿಡ್ -19 ಸಾಂಕ್ರಾಮಿಕವು, ಇದೀಗ ಸುಮಾರು ಎರಡು ವರ್ಷಗಳ ಕಾಲ ಭಾರತದಲ್ಲಿ ಜೀವಿತಾವಧಿಯಲ್ಲಿ ಇಳಿಕೆಗೆ ಕಾರಣವಾಗಿದೆ ಎಂದು ಮುಂಬೈ ಮೂಲಕ ಅಂತಾರಾಷ್ಟ್ರೀಯ ಜನಸಂಖ್ಯಾ ಅಧ್ಯಯನ ಸಂಸ್ಥೆಯ (ಐಐಪಿಎಸ್) ವಿಜ್ಞಾನಿಗಳ ಅಂಕಿಅಂಶಗಳ ವಿಶ್ಲೇಷಣೆ  ಬಹಿರಂಗಪಡಿಸಿದೆ. 

ಸಾಂಕ್ರಾಮಿಕ ರೋಗದಿಂದಾಗಿ ಪುರುಷರು ಮತ್ತು ಮಹಿಳೆಯರಲ್ಲಿ ಜನನದ ಸಮಯದಲ್ಲಿ ಜೀವಿತಾವಧಿಯಲ್ಲಿನ ಕುಸಿತವನ್ನು ಸೂಚಿಸುವ ವಿಶ್ಲೇಷಣಾತ್ಮಕ ವರದಿಯು ಇತ್ತೀಚೆಗೆ 'ಬಿಎಂಸಿ ಪಬ್ಲಿಕ್ ಹೆಲ್ತ್' ಜರ್ನಲ್ ನಲ್ಲಿ ಪ್ರಕಟವಾಗಿದೆ. ಐಐಪಿಎಸ್ ಪ್ರೊಫೆಸರ್ ಸೂರ್ಯಕಾಂತ್ ಯಾದವ್ ಈ ವರದಿಯನ್ನು ಬರೆದಿದ್ದಾರೆ.

2019 ರಲ್ಲಿ ಪುರುಷರ ಜೀವಿತಾವಧಿ 69.5 ವರ್ಷ ಇದ್ದು, ಇದೀಗ 67.5 ವರ್ಷಕ್ಕೆ ಕುಸಿದಿದೆ. ಮಹಿಳೆಯರ ಜೀವಿತಾವಧಿ 2020ರಲ್ಲಿ 72 ರಿಂದ 67.5 ವರ್ಷ ಮತ್ತು 69.8 ವರ್ಷಗಳಿಗೆ ಇಳಿದಿದೆ  ಎಂದು ವರದಿ ಹೇಳಿದೆ.                

SCROLL FOR NEXT