ದೇಶ

ಟ್ರೂ ಕಾಲರ್ ಐಡಿ ಜೊತೆ ಭಾರತೀಯ ರೈಲ್ವೇ ಒಪ್ಪಂದ: ನಕಲಿ ಐಆರ್ ಸಿಟಿಸಿ ಸಂದೇಶಗಳಿಗೆ ಕಡಿವಾಣ

Harshavardhan M

ನವದೆಹಲಿ: ಮೊಬೈಲ್ ಕರೆ ಮಾಡುವವರ ಗುರುತು ಪತ್ತೆ ಹಚ್ಚುವ ಟ್ರೂ ಕಾಲರ್ ಆಪ್ ತಾನು ಭಾರತೀಯ ರೈಲ್ವೇ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದೆ. 

ಐ ಆರ್ ಸಿ ಟಿ ಸಿ ಜಾಲತಾಣದಿಂದ ರೈಲ್ವೇ ಟಿಕೆಟ್ ಬುಕ್ ಮಾಡಿದ ಸಂದರ್ಭದಲ್ಲಿ ಬುಕಿಂಗ್ ಸಂದೇಶಗಳ ಅಧಿಕೃತತೆಯನ್ನು ಟ್ರೂಕಾಲರ್ ಖಚಿತಪಡಿಸಲಿದೆ. ಭಾರತೀಯ ರೈಲ್ವೇ ಟಿಕ್ ಮಾರ್ಕನ್ನು ಟ್ರೂಕಾಲರ್ ಒದಗಿಸಲಿದೆ. ಇದರಿಂದಾಗಿ ವಂಚನೆಗಳನ್ನು ತಡೆಗಟ್ಟಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ. 

ಅಲ್ಲದೆ ರೈಲ್ವೇ ಸಹಾಯವಾಣಿ 139 ಜೊತೆ ವ್ಯವಹರಿಸುವಾಗ ಭಾರತೀಯ ರೈಲ್ವೇ ಅಧಿಕೃತ ಲೋಗೋ ವನ್ನು ತೋರ್ಪಡಿಸಲಿದೆ. 2007ರಲ್ಲೇ ಭಾರತೀಯ ರೈಲ್ವೇ 139 ಸಹಾಯವಾಣಿಯನ್ನು ಭಾರತ್ ಬಿಪಿಒ ಸಹಯೋಗದಲ್ಲಿ  ಪ್ರಾರಂಭಿಸಿತ್ತು. ದಿನಂಪ್ರತಿ ಸುಮಾರು 2 ಲಕ್ಷ ರೈಲ್ವೇ ಗ್ರಾಹಕರು ಈ ಸೇವೆಯ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. 

SCROLL FOR NEXT