ಅಹಮದಾಬಾದ್: ತಮ್ಮ ಪಕ್ಷವು ಒಂದು-ಮಗುವಿನ ನೀತಿಯನ್ನು ಬೆಂಬಲಿಸುತ್ತದೆ. ದೇಶದಲ್ಲಿ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಬೇಕಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಸಚಿವ ರಾಮದಾಸ್ ಅಠಾವಳೆ ಅವರು ಶನಿವಾರ ಹೇಳಿದ್ದಾರೆ.
ಹಿಂದುಗಳು ಬಹುಸಂಖ್ಯಾತರಾಗಿದ್ದರೇ ಮಾತ್ರ ಸಂವಿಧಾನ ಮತ್ತು ಜಾತ್ಯತೀತತೆಯ ಬಗ್ಗೆ ಮಾತನಾಡಲು ಸಾಧ್ಯ ಎಂದು ಹೇಳಿದ್ದ
ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ, ವಾಗುತ್ತದೆ, ಹಿಂದೂ ಜನಸಂಖ್ಯೆಯು ಕಡಿಮೆಯಾಗವು ಯಾವುದೇ ಸಾಧ್ಯತೆಯಿಲ್ಲ ಎಂದು ಅವರು ಹೇಳಿದರು.
ಇದನ್ನು ಓದಿ: ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವ ವರೆಗೆ ಸಂವಿಧಾನ, ಜಾತ್ಯತೀತತೆ ಬಗ್ಗೆ ಚರ್ಚೆ: ಗುಜರಾತ್ ಡಿಸಿಎಂ
"ಹಿಂದೂ ಜನಸಂಖ್ಯೆ ಕುಸಿಯುತ್ತಿದೆ ಅಂತ ನನಗೆ ಅನಿಸುತ್ತಿಲ್ಲ. ಹಿಂದೂಗಳು ಹಿಂದೂಗಳಾಗಿಯೇ ಇದ್ದಾರೆ ಮತ್ತು ಮುಸ್ಲಿಮರು ಮುಸ್ಲಿಂ ಆಗಿಯೇ ಇದ್ದಾರೆ. ಎಲ್ಲೋ ಒಬ್ಬರು ಅಥವಾ ಇಬ್ಬರೂ ಹಿಂದೂಗಳು ಅಥವಾ ಮುಸ್ಲಿಮರು ಮತಾಂತರಗೊಂಡಿದ್ದಾರೆ.
ಸಂವಿಧಾನವು ಜನರು ಇಷ್ಟಪಡುವದನ್ನು ಮಾಡುವ ಹಕ್ಕನ್ನು ನೀಡುತ್ತದೆ" ಎಂದು ಅಠವಾಳೆ ತಿಳಿಸಿದ್ದಾರೆ.
ಜನಸಂಖ್ಯೆಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ಪ್ರಮಾಣದಲ್ಲಿ ಹೆಚ್ಚು ಬದಲಾವಣೆಯಾಗುವುದಿಲ್ಲ, "ಮುಸ್ಲಿಮರ ಜನಸಂಖ್ಯೆಯು ಈ ವರ್ಷಗಳಲ್ಲಿ ತೀವ್ರವಾಗಿ ಏರಿದೆ" ಎಂದು ಅವರು ಹೇಳಿದರು.